PBKS vs CSK: ಈ ಬಾರಿ ನಡೆಯಲಿಲ್ಲ ಧೋನಿ ಆಟ: ಐಪಿಎಲ್ 2022 ರಲ್ಲಿ ಸಿಎಸ್​​ಕೆ ಹಾದಿ ಬಹುತೇಕ ಅಂತ್ಯ

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈಗೆ ಕೊನೆಯ ಓವರ್​​ನಲ್ಲಿ ಗೆಲ್ಲಲು 17 ರನ್​ಗಳು ಬೇಕಿದ್ದವು. ಈ ಸಂದರ್ಭ ಎಂಎಸ್ ಧೋನಿ ಪಂದ್ಯವನ್ನು ಫಿನಿಶ್ ಮಾಡಿದ್ದರು. ಈ ಬಾರಿ 6 ಎಸೆತದಲ್ಲಿ 27 ರನ್​ಗಳು ಬೇಕಿತ್ತು. ಆದರೆ, ಈ ಬಾರಿ ಧೋನಿ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿ ಮೂರನೇ ಎಸೆತದಲ್ಲಿ ಔಟಾಗುವ ಮೂಲಕ ಸಿಎಸ್​​ಕೆ ಸೋಲು ಕಂಡಿತು.

PBKS vs CSK: ಈ ಬಾರಿ ನಡೆಯಲಿಲ್ಲ ಧೋನಿ ಆಟ: ಐಪಿಎಲ್ 2022 ರಲ್ಲಿ ಸಿಎಸ್​​ಕೆ ಹಾದಿ ಬಹುತೇಕ ಅಂತ್ಯ
PBKS vs CSK IPL 2022
Follow us
TV9 Web
| Updated By: Vinay Bhat

Updated on: Apr 26, 2022 | 7:44 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಹಾದಿ ಬಹುತೇಕ ಅಂತ್ಯಗೊಂಡಿದೆ. ಸೋಮವಾರ ಪಂಜಾಬ್ ಕಿಂಗ್ಸ್​ ವಿರುದ್ಧ ನಡೆದ ಪಂದ್ಯದಲ್ಲೂ ಸಿಎಸ್​​ಕೆ (PBKS vs CSK) ಗೆಲುವು ಕಾಣುವಲ್ಲಿ ಎಡವಿದೆ. ಹೀಗಾಗಿ ಆಡಿದ ಎಂಟು ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಜಯ ಸಾಧಿಸಿ ಆರರಲ್ಲಿ ಸೋಲು ಕಂಡಿದೆ. ಪ್ಲೇ ಆಫ್ ಸುತ್ತಿಗೆ ಎಂಟ್ರಿ ಕೊಡಬೇಕಾದರೆ ಚೆನ್ನೈ ಉಳಿದಿರುವ ಪಂದ್ಯಗಳನ್ನು ಗೆಲ್ಲಬೇಕಿದೆ. ಅಲ್ಲದೆ ಇತರೆ ತಂಡಗಳ ಫಲಿತಾಂಶದ ಮೇಲೆ ಜಡೇಜಾ ಪಡೆಯ ಹಾದಿ ನಿರ್ಧಾರವಾಗಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈಗೆ ಕೊನೆಯ ಓವರ್​​ನಲ್ಲಿ ಗೆಲ್ಲಲು 17 ರನ್​ಗಳು ಬೇಕಿದ್ದವು. ಈ ಸಂದರ್ಭ ಎಂಎಸ್ ಧೋನಿ (MS Dhoni) ಪಂದ್ಯವನ್ನು ಫಿನಿಶ್ ಮಾಡಿದ್ದರು. ಈ ಬಾರಿ 6 ಎಸೆತದಲ್ಲಿ 27 ರನ್​ಗಳು ಬೇಕಿತ್ತು. ಆದರೆ, ಈ ಬಾರಿ ಧೋನಿ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿ ಮೂರನೇ ಎಸೆತದಲ್ಲಿ ಔಟಾಗುವ ಮೂಲಕ ಸಿಎಸ್​​ಕೆ ಸೋಲು ಕಂಡಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಓಪನರ್ ಶಿಖರ್ ಧವನ್ ಅಮೋಘ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್‌ ಸ್ಪರ್ಧಾತ್ಮಕ ಮೊತ್ತವನ್ನ ಕಲೆಹಾಕಿತು. ನಾಯಕ ಮಯಾಂಕ್ ಅಗರ್ವಾಲ್ ಕೇವಲ 18 ರನ್‌ಗಳಿಗೆ ಔಟಾದ ನಂತರ ನಡೆದಿದ್ದು ಧವನ್ ಹಾಗೂ ರಾಜಪಕ್ಷೆ ಬೊಂಬಾಟ್ ಜೊತೆಯಾಟ. ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಇವರಿಬ್ಬರು ಸಿಎಸ್‌ಕೆ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದರು. ಶಿಖರ್ ಧವನ್ ತನ್ನ 200ನೇ ಐಪಿಎಲ್ ಪಂದ್ಯದಲ್ಲಿ ಸ್ಫೋಟಕ ಆಟವಾಡುವುದುರ ಜೊತೆಗೆ ತಂಡದ ಸ್ಕೋರನ್ನ ಹೆಚ್ಚಿಸಿದರು.

59 ಎಸೆತಗಳಲ್ಲಿ ಅಜೇಯ 88 ರನ್ ಕಲೆಹಾಕಿದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ 9 ಅಮೋಘ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳಿದ್ದವು. ರಾಜಪಕ್ಷ 32 ಎಸೆತಗಳಲ್ಲಿ 42 ರನ್ ಕಲೆಹಾಕಿ ಉತ್ತಮ ಸಾಥ್ ನೀಡಿದ್ರು. ಈತನ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ಕೊನೆಯಲ್ಲಿ ಜಾನಿ ಬೈಸ್ಟ್ರೋವ್ 3 ಎಸೆತಗಳಲ್ಲಿ 6 ರನ್ ಕಲೆಹಾಕಿ ರನೌಟ್ ಆದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್‌ 187 ರನ್ ಕಲೆಹಾಕಿತು. ಸಿಎಸ್‌ಕೆ ಪರ ದುಬಾರಿಯಾದರೂ ಡ್ವೇನ್ ಬ್ರಾವೋ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ 1 ವಿಕೆಟ್ ಕಿತ್ತರು

ಸವಾಲಿನ ಮೊತ್ತ ಬೆನ್ನಟ್ಟಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ತಂಡವು 40 ರನ್ ಗಳಿಸುವಷ್ಟರಲ್ಲಿ ರಾಬಿನ್ ಉತ್ತಪ್ಪ (1), ಮಿಚೆಲ್ ಸ್ಯಾಂಟ್ನರ್ (9), ಶಿವಂ ದುಬೆ (8) ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಪೈಕಿ 2016ರ ಬಳಿಕ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ರಿಷಿ ಧವನ್, ಫೇಸ್ ಶೀಲ್ಡ್ ಧರಿಸಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಅಲ್ಲದೆ ದುಬೆ ವಿಕೆಟ್ ಕಬಳಿಸಿ ಮಿಂಚಿದರು. ಈ ಹಂತದಲ್ಲಿ ಜೊತೆಗೂಡಿದ ರುತುರಾಜ್ ಗಾಯಕವಾಡ್ ಹಾಗೂ ಅಂಬಟಿ ರಾಯುಡು 49 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಗಾಯಕವಾಡ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ರಾಯುಡು ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು. ಗಾಯಕವಾಡ್ 30 ರನ್ ಗಳಿಸಿ ಔಟ್ ಆದರು. ಅತ್ತ ಆಕ್ರಮಣಕಾರಿ ಆಟ ಪ್ರದರ್ಶಿಸಿದ ರಾಯುಡು 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಅಂತಿಮ 5 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 70 ರನ್ ಅಗತ್ಯವಿತ್ತು. ಸಂದೀಪ್ ಶರ್ಮಾ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 23 ರನ್ ಬಾರಿಸಿದ ರಾಯುಡು ಅಬ್ಬರಿಸಿದರು. ರಾಯುಡು ಹಾಗೂ ಜಡೇಜ ಐದನೇ ವಿಕೆಟ್‌ಗೆ 32 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ 18ನೇ ಓವರ್‌ನಲ್ಲಿ ಔಟ್ ಆಗುವ ಮೂಲಕ ರಾಯುಡು ನಿರಾಸೆಗೊಳಗಾದರು. 39 ಎಸೆತಗಳನ್ನು ಎದುರಿಸಿದ ರಾಯುಡು 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದರು.

ಕೊನೆಯ ಓವರ್‌ನಲ್ಲಿ ಗೆಲುವಿಗೆ 27 ರನ್ ಬೇಕಾಗಿತ್ತು. ಆದರೆ ಈ ಬಾರಿ ಫಿನಿಶರ್ ಧೋನಿಗೆ (12) ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ ಸಿಎಸ್​ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರವೀಂದ್ರ ಜಡೇಜ 21 ರನ್ ಗಳಿಸಿ ಔಟಾಗದೆ ಉಳಿದರು. ಪಂಜಾಬ್ ಪರ ರಬಾಡ ಹಾಗೂ ರಿಷಿ ಧವನ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಅರ್ಶದೀಪ್ 23 ರನ್ ತೆತ್ತು ಒಂದು ವಿಕೆಟ್ ಕಿತ್ತರು.

Deaflympics 2021: ಡೆಫ್ಲಿಂಪಿಕ್ಸ್​ ಅಥ್ಲೀಟ್​ಗಳಿಗೆ ಬೀಳ್ಕೊಡುಗೆ

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ