RCB vs RR, IPL 2022: ತಂಡದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಡುಪ್ಲೆಸಿಸ್: ಈ ಬಾರಿ ಕಂಪ್ಲೀಟ್ ಚೇಂಜ್

Predicted Playing XI CB vs RR: ಐಪಿಎಲ್​​ನಲ್ಲಿಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿ ಆಗುತ್ತಿದೆ. ಡುಪ್ಲೆಸಿಸ್ ಪಡೆಯಲ್ಲಿ ಇಂದಿನ ಪಂದ್ಯಕ್ಕೆ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ. ಹಾಗಾದ್ರೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿದೆ ನೋಡೋಣ.

RCB vs RR, IPL 2022: ತಂಡದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಡುಪ್ಲೆಸಿಸ್: ಈ ಬಾರಿ ಕಂಪ್ಲೀಟ್ ಚೇಂಜ್
RCB
Follow us
TV9 Web
| Updated By: Vinay Bhat

Updated on:Apr 26, 2022 | 10:19 AM

15ನೇ ಆವೃತ್ತಿಯ ಐಪಿಎಲ್​ನಲ್ಲಿಂದು ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಪಂದ್ಯದಲ್ಲಿ ಫಾಪ್ ಡುಪ್ಲೆಸಿಸ್ (Faf Duplessis) ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (RCB vs RR) ತಂಡ ಮುಖಾಮುಖಿ ಆಗುತ್ತಿದೆ. ಐಪಿಎಲ್ 2022 (IPL 2022) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಆರ್​ಸಿಬಿ ಕಳೆದ ಸನ್​ರೈಸರ್ಸ್​ ವಿರುದ್ಧ ಆಡಿದ ಆಟ ಚಿಂತೆಗೆ ಎಡೆ ಮಾಡಿಕೊಟ್ಟಿದೆ. ಈ ಪಂದ್ಯದಲ್ಲಿ ಬೆಂಗಳೂರು ಕೇವಲ 68 ರನ್​ಗೆ ಆಲೌಟ್ ಆಗಿತ್ತು. ಪ್ರತಿಭಾನ್ವಿತ ಆಟಗಾರರ ಪಡೆಯನ್ನು ಹೊಂದಿರುವ ಫಾಫ್ ಬಳಗಕ್ಕೆ ಈ ಸೋಲಿನಿಂದ ಹೊರಬರುವುದು ದೊಡ್ಡ ಸಂಗತಿಯಲ್ಲ. ಆದರೆ, ಇಂದು ಆರ್​ಸಿಬಿಗೆ ಎದುರಾಗಿರುವುದು ಆರ್​ ಆರ್​ ತಂಡ. ಸೆಂಚುರಿಗಳ ಸರದಾರ ಜೋಸ್ ಬಟ್ಲರ್ ಭಯ ಆರ್​ಸಿಬಿ ತಂಡಕ್ಕೆ ಇದ್ದೇ ಇದೆ. ಇವರನ್ನು ಕಟ್ಟಿಹಾಕಬೇಕಾಗಿರುವುದು ಫಾಫ್ ಪಡೆಗೆ ದೊಡ್ಡ ಸವಾಲಾಗಿದೆ.

ಆಡಿದ ಎಂಟು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿರುವ ಆರ್​ಸಿಬಿ ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಆದರೆ, ಕಳೆದ ಪಂದ್ಯದಲ್ಲಿ ಆದ ದಿಢೀರ್ ಕುಸಿತದ ಬಗ್ಗೆ ಯೋಚಿಸಬೇಕಿದೆ. ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್‌ ಹಿಂದಿನ ಮ್ಯಾಚ್​ನಲ್ಲಿ ಬೇಗನೆ ಔಟಾದರು ಮರಳಿ ಫಾರ್ಮ್​ಗೆ ಬರುವುದು ದೊಡ್ಡ ವಿಚಾರವೇನಲ್ಲ. ಡುಪ್ಲೆಸಿಸ್‌ ಅವರಿಗೆ ಸೂಕ್ತ ಜೋಡಿಯೊಂದು ಇಲ್ಲದಿರುವುದು ಚಿಂತೆಗೆ ಕಾರಣವಾಗಿದೆ. ಎಡಗೈ ಬ್ಯಾಟರ್‌ ಅನುಜ್‌ ರಾವತ್‌ ಪ್ರತಿಭಾನ್ವಿತ ಆಟಗಾರನಾದರೂ ಸವಾಲು ನಿಭಾಯಿಸುವಲ್ಲಿ ವಿಫ‌ಲರಾಗುತ್ತಿದ್ದಾರೆ. ಒಂದು ಪಂದ್ಯದಲ್ಲೇನೋ ಹೊಡಿಬಡಿ ಆಟದ ಮೂಲಕ ಸಿಡಿದು ನಿಂತರೂ ಅನಂತರ ಇದೇ ಜೋಶ್‌ ತೋರಲು ಅವರಿಂದ ಸಾಧ್ಯವಾಗಿಲ್ಲ.

ಹೀಗಾಗಿ ಅನುಜ್‌ ರಾವತ್‌ ಅವರನ್ನು ಕೈಬಿಡುವುದು ಬಹುತೇಕ ಖಚಿತವಾಗಿದೆ. ವಿರಾಟ್‌ ಕೊಹ್ಲಿ ಅವರ ರನ್‌ ಬರಗಾಲವನ್ನು ಕ್ರಿಕೆಟ್‌ ಪಂಡಿತರಿಂದಲೂ ಅರ್ಥೈಸಿಕೊಳ್ಳಲಾಗುತ್ತಿಲ್ಲ. ಅವರ ಗೋಲ್ಡನ್‌ ಡಕ್‌ ಸಂಕಟ ಎಲ್ಲರಲ್ಲೂ ನೋವುಂಟುಮಾಡಿದೆ. ಮೂರನೇ ಕ್ರಮಾಂಕದಲ್ಲಿ ಯಶಸ್ಸು ಸಿಗುತ್ತಿಲ್ಲ. ಹೀಗಾಗಿ ಫಾಫ್ ಜೊತೆ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಇಂದಿನ ಪಂದ್ಯದಲ್ಲಿ ಕಂಪ್ಲೀಟ್ ಬದಲಾವಣೆಯೊಂದಿಗೆ ಆರ್​​ಸಿಬಿ ಕಣಕ್ಕಳಿಯಬಹುದು. ದಿನೇಶ್ ಕಾರ್ತಿಕ್ ಈಗಾಗಲೆ ತಂಡದಲ್ಲಿ ಫಿನಿಷರ್-ಹಿಟ್ಟರ್ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಬರುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಸುಯಶ್ ಪ್ರಭುದೇಸಾಯಿ ಉಪಯುಕ್ತ ಕೊಡುಗೆಗಳನ್ನು ನೀಡುತ್ತಿದ್ದಾರೆ. ಶಹ್ಬಾಜ್ ಅಹ್ಮದ್ ಕೂಡ ಉತ್ತಮ ಲಯದಲ್ಲಿದ್ದಾರೆ.

ಇಂದು ರಾಜಸ್ಥಾನವನ್ನು ಕಟ್ಟಿಹಾಕಬೇಕಾದರೆ ಆರ್​ಸಿಬಿ ಬೌಲಿಂಗ್ ದೊಡ್ಡ ಪಾತ್ರವಹಿಸಬೇಕು. ಯಾಕೆಂದರೆ ಆರ್​ಆರ್​ ಬಿಗ್ ಹಿಟ್ಟರ್​ಗಳಿಂದ ಕೂಡಿದೆ. ಸಂಜು ಸ್ಯಾಮ್ಸನ್ ಪಡೆ ಕೂಡ ಅದ್ಭಯತ ಲಯದಲ್ಲಿದ್ದು ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿದೆ. ಅತ್ಯುತ್ತಮ ಆಟಗಾರರ ದೊಡ್ಡ ಬಳಗವನ್ನು ಹೊಂದಿದೆ ರಾಜಸ್ಥಾನ್ ರಾಯಲ್ಸ್. ಹೀಗಾಗಿ ಈ ಸವಾಲು ಕೂಡ ಆರ್‌ಸಿಬಿಗೆ ಕಠಿಣವಾಗಿರುವುದರಲ್ಲಿ ಅನುಮಾನವಿಲ್ಲ.

ಇಂಗ್ಲೆಂಡಿನ ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಶತಕದ ಮೇಲೆ ಶತಕ ಬಾರಿಸುತ್ತಿದ್ದಾರೆ. ಜತೆಗೆ ದೇವದತ್ತ ಪಡಿಕ್ಕಲ್‌, ನಾಯಕ ಸಂಜು ಸ್ಯಾಮ್ಸನ್‌, ಶ್ರಿಮನ್‌ ಹೆಟ್‌ಮೈರ್‌ ಅವರಂಥ ಡ್ಯಾಶಿಂಗ್‌ ಬ್ಯಾಟರ್ ಇದ್ದಾರೆ. ಹೀಗಾಗಿ ಜೋಶ್‌ ಹ್ಯಾಜಲ್‌ವುಡ್‌, ಹರ್ಷಲ್‌ ಪಟೇಲ್‌, ವನಿಂದು ಹಸರಂಗ, ಮೊಹಮ್ಮದ್‌ ಸಿರಾಜ್‌ ಅವರಿಂದ ಎದುರಾಳಿಗೆ ಕಡಿವಾಣ ಹಾಕಲು ಸಾಧ್ಯವಾದರೆ ಆರ್‌ಸಿಬಿಯ ಮೇಲುಗೈ ಬಗ್ಗೆ ಅನುಮಾನವಿಲ್ಲ. ಉಭಯ ತಂಡಗಳು ಇದುವರೆಗೆ ಐಪಿಎಲ್ ಇತಿಹಾಸದಲ್ಲಿ 26 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಆರ್‌ಸಿಬಿ 13 ಪಂದ್ಯ ಗೆದ್ದರೆ ರಾಜಸ್ಥಾನ್ 10 ಪಂದ್ಯದಲ್ಲಿ ಜಯ ಸಾಧಿಸಿದೆ. ಉಳಿದ 3 ಪಂದ್ಯ ರದ್ದಾಗಿದೆ.

ಉಭಯ ತಂಡಗಳ ಸಂಭಾವ್ಯ XI:

ಆರ್​ಸಿಬಿ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯುಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮೊರರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಕರುಣ್ ನಾಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಓಬೇದ್ ಮೆಕಾಯ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ.

Ravindra Jadeja: ಪಂದ್ಯ ಮುಗಿದ ಬಳಿಕ ಈ ಬಾರಿ ರವೀಂದ್ರ ಜಡೇಜಾ ಸೋಲಿಗೆ ನೀಡಿದ ಕಾರಣವೇನು ಗೊತ್ತೇ?

PBKS vs CSK: ಈ ಬಾರಿ ನಡೆಯಲಿಲ್ಲ ಧೋನಿ ಆಟ: ಐಪಿಎಲ್ 2022 ರಲ್ಲಿ ಸಿಎಸ್​​ಕೆ ಹಾದಿ ಬಹುತೇಕ ಅಂತ್ಯ

Published On - 10:16 am, Tue, 26 April 22