AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arun Lal: 66ನೇ ವಯಸ್ಸಿನಲ್ಲಿ 2ನೇ ಇನಿಂಗ್ಸ್ ಆರಂಭಿಸಲು ಮುಂದಾದ ಮಾಜಿ ಕ್ರಿಕೆಟಿಗ

Arun Lal: ಟೀಮ್ ಇಂಡಿಯಾ ಪರ 16 ಟೆಸ್ಟ್‌ಗಳು ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಒಟ್ಟು 851 ರನ್ ಕಲೆಹಾಕಿದ್ದಾರೆ.

Arun Lal: 66ನೇ ವಯಸ್ಸಿನಲ್ಲಿ 2ನೇ ಇನಿಂಗ್ಸ್ ಆರಂಭಿಸಲು ಮುಂದಾದ ಮಾಜಿ ಕ್ರಿಕೆಟಿಗ
Arun Lal-Bull Bull
TV9 Web
| Edited By: |

Updated on: Apr 25, 2022 | 6:19 PM

Share

ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ (Arun Lal) ಮತ್ತೊಮ್ಮೆ ಹಸೆಮಣೆ ಏರಲು ಮುಂದಾಗಿದ್ದಾರೆ. ಅದರಂತೆ ಮುಂದಿನ ತಿಂಗಳು ಕೋಲ್ಕತ್ತಾದಲ್ಲಿ ಬುಲ್ ಬುಲ್ ಸಹಾ ಅವರನ್ನು ವಿವಾಹವಾಗಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳು ಮತ್ತು ಫೋಟೋಗಳ ಪ್ರಕಾರ, ಮೇ 2 ರಂದು ನಗರದ ಪೀರ್‌ಲೆಸ್ ಇನ್‌ನಲ್ಲಿ ವಿವಾಹ ನಡೆಯಲಿದೆ. ಈ ಹಿಂದೆ ಲಾಲ್ ಅವರು ರೀನಾ ಎಂಬವರನ್ನು ಮದುವೆಯಾಗಿದ್ದರು. ಇದೀಗ ಮೊದಲ ಪತ್ನಿಯಿಂದ ದೂರವಾಗಿರುವ ಮಾಜಿ ಕ್ರಿಕೆಟಿಗ, ಬಹುಕಾಲದ ಗೆಳೆತಿ ಬುಲ್ ಬುಲ್ ಸಹಾ ಅವರನ್ನು ವರದಿಸಲು ಮುಂದಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅರುಣ್ ಲಾಲ್, ಆ ಬಳಿಕ ಚೇತರಿಸಿಕೊಂಡು ಬಂಗಾಳ ಕ್ರಿಕೆಟ್ ತಂಡದ ಕೋಚಿಂಗ್ ಕರ್ತವ್ಯವನ್ನು ವಹಿಸಿಕೊಂಡಿದ್ದರು.

ಮದುವೆಯ ಆಮಂತ್ರಣವನ್ನು ಬಂಗಾಳ ಕ್ರಿಕೆಟ್ ತಂಡ, ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ಅಧಿಕಾರಿಗಳು ಮತ್ತು ಆತ್ಮೀಯ ಸ್ನೇಹಿತರು ಮತ್ತು ಕುಟುಂಬಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಲಾಗಿದೆ. ಅಲ್ಲದೆ ಈ ವಿವಾಹ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಟೀಮ್ ಇಂಡಿಯಾ ಪರ 16 ಟೆಸ್ಟ್‌ಗಳು ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಒಟ್ಟು 851 ರನ್ ಕಲೆಹಾಕಿದ್ದಾರೆ. 2016 ರಲ್ಲಿ ಅಪರೂಪದ ಕ್ಯಾನ್ಸರ್ ಅಡೆನಾಯ್ಡ್ ಸಿಸ್ಟಿಕ್ ಕಾರ್ಸಿನೋಮಗೆ ಒಳಗಾಗಿದ್ದ ಅರುಣ್ ಲಾಲ್ ಇದೀಗ 66ನೇ ವಯಸ್ಸಿನಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ.

ಲಾಲ್ ಅವರ ಮಾರ್ಗದರ್ಶನದಲ್ಲಿ, ಬಂಗಾಳ ತಂಡವು 13 ವರ್ಷಗಳ ಸುದೀರ್ಘಾವಧಿಯ ಬಳಿಕ 2020 ರಲ್ಲಿರಣಜಿ ಟ್ರೋಫಿಯ ಫೈನಲ್‌ಗೆ ತಲುಪಿತು. ಈ ಸೀಸನ್​ನಲ್ಲೂ ಬಂಗಾಳ ತಂಡವು ಮೂರು ಗೆಲುವುಗಳೊಂದಿಗೆ ಕ್ವಾರ್ಟರ್ಫೈನಲ್​ಗೆ ಪ್ರವೇಶಿಸಿದೆ. ಇದೇ ಕಾರಣದಿಂದ ಲಾಲ್ ನೇತೃತ್ವದ ಕೋಚಿಂಗ್ ಸಿಬ್ಬಂದಿಯನ್ನು ಬದಲಾಯಿಸುವ ಬಗ್ಗೆ ಚಿಂತಿಸಿಲ್ಲ ಎಂದು ಸಿಎಬಿ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಭಾನುವಾರ ಖಚಿತಪಡಿಸಿದ್ದಾರೆ. ರಣಜಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಐಪಿಎಲ್ ನಂತರ ಪುನರಾರಂಭವಾಗಲಿದೆ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ