RCB Playing XI vs CSK: ಕೊನೆಯ ಪಂದ್ಯಕ್ಕೆ ಆರ್​ಸಿಬಿಗೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್: ಸಿಎಸ್​ಕೆಗೆ ನಡುಕ ಶುರು

Royal Challengers Bengaluru vs Chennai Super Kings: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ 2024ರ ಬಹುದೊಡ್ಡ ಪಂದ್ಯ ಶನಿವಾರ (ಮೇ. 18) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಕ್ಕೂ ಆರ್​ಸಿಬಿಗೆ ಶುಭಸುದ್ದಿ ಸಿಕ್ಕಿದ್ದು ಈ ಸ್ಫೋಟಕ ಬ್ಯಾಟರ್ ಕಣಕ್ಕಿಳಿಯಲಿದ್ದಾರೆ. ಇಲ್ಲಿದೆ ನೋಡಿ ಆರ್​ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಪಟ್ಟಿ.

RCB Playing XI vs CSK: ಕೊನೆಯ ಪಂದ್ಯಕ್ಕೆ ಆರ್​ಸಿಬಿಗೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್: ಸಿಎಸ್​ಕೆಗೆ ನಡುಕ ಶುರು
RCB Playing XI vs CSK Match

Updated on: May 17, 2024 | 12:23 PM

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ ಅಂತಿಮ ಹಂತಕ್ಕೆ ತಲುಪುತ್ತಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್​ಗೆ ಕ್ವಾಲಿಫೈ ಆಗಿದ್ದು, ಇನ್ನೊಂದು ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಪ್ಲೇ ಆಫ್​ಗೆ ಪ್ರವೇಶಿಸುವ ನಾಲ್ಕನೇ ತಂಡ ಯಾವುದು ಎಂಬುದು ಶನಿವಾರ (ಮೇ. 18) ನಿರ್ಧಾರವಾಗಲಿದೆ. ಈ ದಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಿಎಸ್​ಕೆ ಗೆದ್ದರೆ ಪ್ಲೇ ಆಫ್​ಗೇರಲಿದೆ. ಆರ್​ಸಿಬಿ 11 ಎಸೆತ ಬಾಕಿಯಿರುವಂತೆ ಅಥವಾ 18 ಕ್ಕಿಂತ ಅಧಿಕ ರನ್​ಗಳಿಂದ ಗೆದ್ದರೆ ಟಾಪ್ 4 ರಲ್ಲಿ ಸ್ಥಾನ ಪಡೆಯಲಿದೆ.

ಸಾಕಷ್ಟು ಮಹತ್ವ ಪಡೆದುಕೊಂಡಿರುವ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿ ಅಭಿಮಾನಿಗಳಿಗೆ ಶುಭಸುದ್ದಿಯೊಂದು ಸಿಕ್ಕಿದೆ. ಇದರಿಂದ ಸಿಎಸ್​ಕೆ ಆತಂಕ ಶುರುವಾಗುವುದು ಖಚಿತ. ಶನಿವಾರದ ಪಂದ್ಯದಲ್ಲಿ ಆರ್​ಸಿಬಿ ಪರ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್​ವೆನ್ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಮಹತ್ವದ ಪಂದ್ಯದಲ್ಲಿ ಅಥವಾ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಈವರೆಗೆ ಮ್ಯಾಕ್ಸ್​ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಆರ್​ಸಿಬಿಗೆ ಟಾರ್ಗೆಟ್ ಬೆನ್ನಟ್ಟುವ ಅವಕಾಶ ಸಿಕ್ಕರೆ ಚೇಸಿಂಗ್ ಅನ್ನು ಬೇಗನೇ ಮಾಡಬೇಕಿರುವುದರಿಂದ ಇಲ್ಲಿ ಮ್ಯಾಕ್ಸ್​ವೆಲ್ ಬಹುಮುಖ್ಯ ಪಾತ್ರವಹಿಸಲಿದ್ದಾರೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್​ಗೆ ಮ್ಯಾಕ್ಸಿ ಕಮ್​ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.

ಗ್ಲೆನ್ ಮ್ಯಾಕ್ಸ್​ವೆಲ್, ಆರ್​ಸಿಬಿ ಆಟಗಾರ.

ಐಪಿಎಲ್​ನಲ್ಲಿಂದು ಮುಂಬೈ-ಲಕ್ನೋ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್​ಸಿಬಿಗೆ ಲಾಭ?

ವಿಲ್ ಜ್ಯಾಕ್ಸ್ ಅಲಭ್ಯತೆ:

ನಿರ್ಣಾಯಕ ಪಂದ್ಯಕ್ಕೆ ಮುಂಚಿತವಾಗಿ ಆರ್​ಸಿಬಿ ಆದ ಬಹುದೊಡ್ಡ ಆಘಾತ ಎಂದರೆ ಇನ್​ಫಾರ್ಮ್ ಬ್ಯಾಟರ್ ವಿಲ್ ಜ್ಯಾಕ್ಸ್ ರಾಷ್ಟ್ರೀಯ ಬದ್ಧತೆಗಳ ಕಾರಣದಿಂದ ತವರಿಗೆ ಮರಳಿರುವುದು. ಹೀಗಾಗಿ ಇವರ ಜಾಗಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್‌ ಬರಲಿದ್ದಾರೆ. ಮ್ಯಾಕ್ಸ್‌ವೆಲ್ ಐಪಿಎಲ್ 2024 ರಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿಲ್ಲ. ಆದರೆ, ಅವರ ಕೌಶಲ್ಯ ಮತ್ತು ನಾಕೌಟ್ ಎನ್‌ಕೌಂಟರ್‌ ಪಂದ್ಯಗಳನ್ನು ಅನೇಕ ಬಾರಿ ಆಡಿದ ಅನುಭವವು ಆರ್​ಸಿಬಿಗೆ ಲಾಭವಾಗಬಹುದು.

ಉಳಿದಂತೆ ಆರ್​ಸಿಬಿಯ ಪ್ಲೇಯಿಂಗ್ XI ಬಗ್ಗೆ ನೋಡುವುದಾದರೆ, ಬ್ಯಾಟಿಂಗ್​ಗೆ ಸಂಬಂಧಿಸಿದಂತೆ, ಫಾಫ್ ಡು ಪ್ಲೆಸಿಸ್ – ವಿರಾಟ್ ಕೊಹ್ಲಿ ಆರಂಭಿಕರಾಗಿ ಮತ್ತು ರಜತ್ ಪಾಟಿದಾರ್ ನಂ.3 ರಲ್ಲಿ ಆಡಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕು ನಂತರ ಮಹಿಪಾಲ್ ಲೊಮ್ರೋರ್, ಕ್ಯಾಮೆರಾನ್ ಗ್ರೀನ್ ಮತ್ತು ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ. ಕರ್ಣ್ ಶರ್ಮಾ ಸ್ಪಿನ್ ನೇತೃತ್ವ ವಹಿಸಲಿದ್ದಾರೆ. ವಿ ವೈಶಾಕ್ ಸ್ವಪ್ನಿಲ್ ಆಡುವ XI ನಲ್ಲಿ ಕಾಣಿಸಿಕೊಳ್ಳಬಹುದು. ಮೊಹಮ್ಮದ್ ಸಿರಾಜ್ ಮತ್ತು ಲಾಕಿ ಫರ್ಗುಸನ್ ವೇಗಿಗಳಾಗಿದ್ದರೆ.

ಕ್ವಾಲಿಫೈ ಆದ 3 ತಂಡಗಳು: ಕೊನೆಯ ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಪ್ಲೇಆಫ್‌ನ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ

ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI:

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವಿ ವೈಶಾಕ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್

(ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಪ್ರಭುದೇಸಾಯಿ/ಅನುಜ್ ರಾವತ್)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ