MI vs LSG: ಐಪಿಎಲ್ನಲ್ಲಿಂದು ಮುಂಬೈ-ಲಕ್ನೋ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್ಸಿಬಿಗೆ ಲಾಭ?
Mumbai Indians vs Lucknow Super Giants, IPL 2024: ಐಪಿಎಲ್ 2024 ರಲ್ಲಿಂದು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಲಿದೆ. ಹಾಗಾದರೆ, ಈ ಪಂದ್ಯದಲ್ಲಿ ಯಾರು ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಾಭವಾಗಲಿದೆ ಎಂಬುದನ್ನು ನೋಡೋಣ.
ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (MI vs LSG) ನಡುವಿನ ಐಪಿಎಲ್ 2024 ರ 67 ನೇ ಪಂದ್ಯವು ಶುಕ್ರವಾರ, ಮೇ 17 ರಂದು ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7:30 ಕ್ಕೆ ಪಂದ್ಯ ಶುರುವಾಗಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಲಕ್ನೋ ಕೂಡ ಬಹುತೇಕ ಟಾಪ್ 4 ರಿಂದ ಔಟ್ ಆಗಿದೆ. ಪ್ರಸಕ್ತ ಋತುವಿನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ಪಂದ್ಯದಲ್ಲಿ ಲಖನೌ ತಂಡ ಮುಂಬೈ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿತ್ತು.
ಮುಂಬೈ ಇಂಡಿಯನ್ಸ್ ತಂಡ 13 ಪಂದ್ಯಗಳಲ್ಲಿ ಕೇವಲ 4 ಗೆಲುವಿನೊಂದಿಗೆ 8 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಋತುವಿನ ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತವರಿನ ಅಭಿಮಾನಿಗಳಿಗೆ ಖುಷಿ ನೀಡಲು ನಾಯಕ ಹಾರ್ದಿಕ್ ಪಾಂಡ್ಯ ಬಯಸಿದ್ದಾರೆ. ಈ ಸೀಸನ್ ಮುಂಬೈಗೆ ಯಾವುದೇ ರೀತಿಯಲ್ಲೂ ಯಶಸ್ವಿಯಾಗಿರಲಿಲ್ಲ. ಕಳಪೆ ಪ್ರದರ್ಶನದಿಂದ ತಂಡ ಬೇಸತ್ತಿದೆ. ಸ್ಟಾರ್ ಆಟಗಾರರು ಕೂಡ ಬ್ಯಾಟ್‌ನಿಂದ ನಿರಾಸೆ ಮೂಡಿಸಿದರು. ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಹಲವು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.
ಕ್ವಾಲಿಫೈ ಆದ 3 ತಂಡಗಳು: ಕೊನೆಯ ಸ್ಥಾನಕ್ಕೆ ಆರ್‌ಸಿಬಿ-ಸಿಎಸ್ಕೆ ಪೈಪೋಟಿ, ಪ್ಲೇಆಫ್‌ನ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ
ಲಕ್ನೋ ಸೂಪರ್‌ಜೈಂಟ್ಸ್ ತಂಡವು 13 ಪಂದ್ಯಗಳಿಂದ 6 ಗೆಲುವಿನೊಂದಿಗೆ 12 ಅಂಕಗಳನ್ನು ಹೊಂದಿದೆ. ತಂಡ ಏಳನೇ ಸ್ಥಾನ ಗಳಿಸಿದೆ. ಆಡಿದ ಕೊನೆಯ ಮೂರು ಪಂದ್ಯಗಳಲ್ಲಿ ಸೋತಿದೆ. ಇದು ಪ್ಲೇಆಫ್ ನಿರೀಕ್ಷೆಗೆ ದೊಡ್ಡ ಹೊಡೆತ ನೀಡಿತು. ಅಗ್ರ ಕ್ರಮಾಂಕದಲ್ಲಿ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ನಿರಾಸೆ ಮೂಡಿಸಿದ್ದಾರೆ. ಈವರೆಗೆ ಟೂರ್ನಿಯಲ್ಲಿ ತಂಡದಿಂದ ಉತ್ತಮ ಆರಂಭ ಬಂದಿಲ್ಲ. ಮಧ್ಯಮ ಕ್ರಮಾಂಕದಿಂದ ಕೊಡುಗೆಗಳು ಕೂಡ ಸ್ಥಿರವಾಗಿ ಕಂಡುಬಂದಿಲ್ಲ. ಇತ್ತೀಚಿನ ಪಂದ್ಯಗಳಲ್ಲಿ ಬೌಲಿಂಗ್ ಕೂಡ ಸಾಧಾರಣವಾಗಿದೆ.
ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಕೇವಲ 5 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಲಕ್ನೋ ತಂಡ ಮುಂಬೈ ತಂಡವನ್ನು 4 ಬಾರಿ ಸೋಲಿಸಿದೆ.
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ಗೆ ದಿಢೀರ್ ಎಂಟ್ರಿ ಕೊಟ್ಟ ಎಂಎಸ್ ಧೋನಿ: ವಿಡಿಯೋ
ಆರ್ಸಿಬಿಗೆ ಲಾಭ ಇದೆಯೇ?:
ಇಂದಿನ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅಥವಾ ಸೋತರೂ ಆರ್ಸಿಬಿಗೆ ಯಾವುದೇ ಲಾಭವಿಲ್ಲ. ಲಕ್ನೋ ಮತ್ತು ಆರ್‌ಸಿಬಿ ತಲಾ 12 ಅಂಕ ಪಡೆದುಕೊಂಡಿದೆಯಾದರೂ ರನ್ರೇಟ್ನಲ್ಲಿ ಬೆಂಗಳೂರು ತುಂಬಾ ಮುಂದಿದೆ. ಹೀಗಾಗಿ ಫಾಫ್ ಪಡೆಗೆ ಈ ಪಂದ್ಯ ಮಹತ್ವದ್ದಲ್ಲ. ಮೇ 18 ರಂದು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲು ಎದುರು ನೋಡುತ್ತಿದೆ. ಒಂದು ವೇಳೆ ಆರ್‌ಸಿಬಿ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 18 ರನ್‌ಗಳಿಂದ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಮೊದಲು ಬೌಲಿಂಗ್ ಮಾಡಿದರೆ 11 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ಆರ್‌ಸಿಬಿ ಪ್ಲೇಆಫ್ ಟಿಕೆಟ್ ಪಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ