ಬಾಮೈದುನನ ಮದುವೆಯಲ್ಲಿ ಮಡದಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ರೋಹಿತ್; ವಿಡಿಯೋ ನೋಡಿ

Rohit Sharma: ರೋಹಿತ್ ಪತ್ನಿ, ರಿತಿಕಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಪ್ರತಿ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ರೋಹಿತ್ ಫುಲ್ ಫನ್ ಮೂಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಮೈದುನನ ಮದುವೆಯಲ್ಲಿ ಮಡದಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ರೋಹಿತ್; ವಿಡಿಯೋ ನೋಡಿ
ರೋಹಿತ್ ಶರ್ಮಾ ಡಾನ್ಸ್

Updated on: Mar 17, 2023 | 3:56 PM

ಸದ್ಯ ಟೀಂ ಇಂಡಿಯಾದಿಂದ (Team India) ರಜೆ ಪಡೆದುಕೊಂಡಿರುವ ರೋಹಿತ್ ಶರ್ಮಾ (Rohit Sharma) ತನ್ನ ಬಾಮೈದುನನ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಮಡದಿಯ ತಮ್ಮ ಕುನಾಲ್ ಸಜ್ದೇಹ್ ಅವರ ವಿವಾಹದಿಂದಾಗಿ ರೋಹಿತ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ರಜೆ ತೆಗೆದುಕೊಂಡಿದ್ದರು. ಇದೀಗ ಕುನಾಲ್ ಅವರ ಸಂಗೀತ ಸಮಾರಂಭದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ ರೋಹಿತ್ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಕುರ್ತಾ ಪೈಜಾಮಾ ಧರಿಸಿರುವ ರೋಹಿತ್ ಕೊರಳಿಗೆ ಕೆಂಪು ಚುನ್ನಿ ಧರಿಸಿ, ಪತ್ನಿ ರಿತಿಕಾ ಜೊತೆ ಭರ್ಜರು ಸ್ಟೆಪ್ಸ್ ಹಾಕಿದ್ದಾರೆ. ಬಾಮೈದುನನ ಮದುವೆಯಲ್ಲಿ ರೋಹಿತ್ ಪತ್ನಿ ರಿತಿಕಾ ಜೊತೆ ವೇದಿಕೆಯ ಮೇಲೆ ಅದ್ಧೂರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಈ ಜೋಡಿಯ ಅದ್ಭುತ ಜುಗಲ್ಬಂದಿ ಕೂಡ ಕಂಡು ಬಂತು.

ಫನ್ ಮೂಡ್​ನಲ್ಲಿ ರೋಹಿತ್

ರೋಹಿತ್ ಪತ್ನಿ, ರಿತಿಕಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಪ್ರತಿ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ರೋಹಿತ್ ಫುಲ್ ಫನ್ ಮೂಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಾಮೈದುನನ ಮದುವೆಯಲ್ಲಿ ಬ್ಯುಸಿಯಾಗಿರುವ ರೋಹಿತ್, ಮಾರ್ಚ್ 19 ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ಭಾರತ ತಂಡಕ್ಕೆ ಮರಳಲಿದ್ದಾರೆ. ಇದಕ್ಕೂ ಮುನ್ನ ರೋಹಿತ್ ನಾಯಕತ್ವದಲ್ಲಿ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.

IND vs AUS: ಆಸೀಸ್ ತಂಡದಲ್ಲಿ ದಿಡೀರ್ ಬದಲಾವಣೆ; ಆಡಲು ಬಂದ ಆಟಗಾರ ಹೋಟೆಲ್​ಗೆ ವಾಪಸ್

ಪಾಂಡ್ಯಗೆ ಭಾರತ ತಂಡದ ನಾಯಕತ್ವ

ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ರೋಹಿತ್ ಬದಲಿಗೆ ಶುಭ್‌ಮನ್ ಗಿಲ್ ಜೊತೆ ಯಾರು ಓಪನಿಂಗ್ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಆದರೆ ಇದೆಲ್ಲ ಕುತೂಹಲಕ್ಕೆ ತೆರೆ ಎಳೆದಿರುವ ಟೀಮ್ ಮ್ಯಾನೇಜ್‌ಮೆಂಟ್ ಕೆಎಲ್ ರಾಹುಲ್‌ಗೆ ಮತ್ತೊಂದು ಅವಕಾಶ ನೀಡುವುದರೊಂದಿಗೆ ಇಶಾನ್ ಕಿಶನ್​ಗೂ ತಂಡದಲ್ಲಿ ಅವಕಾಶ ನೀಡಿದೆ. ಹೀಗಾಗಿ ಕಿಶನ್, ಗಿಲ್ ಜೊತೆ ಓಪನ್ ಮಾಡುವ ಅವಕಾಶ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Fri, 17 March 23