Kannada News » Photo gallery » Cricket photos » Hardik Pandya in post-match presentation after IND vs AUS 1st ODI Here is what he said about Jadeja and KL Rahul
Hardik Pandya: ಆಸ್ಟ್ರೇಲಿಯಾ ವಿರುದ್ಧದ ಗೆಲುವಿಗೆ ಯಾರು ಕಾರಣ?: ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಆಡಿದ ಮಾತುಗಳೇನು ಕೇಳಿ
India vs Australia 1st ODI: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಗೆಲುವಿಗೆ ಕಾರಣರಾದವರನ್ನು ಹಾಡಿಹೊಗಳಿದ್ದಾರೆ.
Mar 18, 2023 | 8:32 AM
ಬಾರ್ಡರ್- ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡ ನಂತರ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡೋ- ಆಸೀಸ್ ಪ್ರಥಮ ಏಕದಿನದಲ್ಲಿ ಟೀಮ್ ಇಂಡಿಯ 5 ವಿಕೆಟ್ಗಳಿಂದ ಗೆದ್ದು ಬೀಗಿತು.
1 / 8
ಈ ಗೆಲುವಿನ ಮೂಲಕ ಹಾರ್ದಿಕ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಗೆಲುವಿಗೆ ಕಾರಣರಾದವರನ್ನು ಹಾಡಿಹೊಗಳಿದ್ದಾರೆ.
2 / 8
ಈ ಪಂದ್ಯದಲ್ಲಿ ನಾವು ಎರಡು ಬಾರಿ ಒತ್ತಡಕ್ಕೆ ಸಿಲುಕಿದೆವು. ಈ ಸಂದರ್ಭದಲ್ಲಿ ನಾವು ಮುನ್ನುಗ್ಗದೆ ಸಮಯಕ್ಕಾಗಿ ಕಾದು ಪರಿಸ್ಥಿತಿಯನ್ನು ಉತ್ತಮವಾಗಿ ಅರ್ಥಹಿಸಿದೆವು. ಒಂದು ಸಲ ಲಯಕಂಡುಕೊಂಡರೆ ನಾವು ಟಾಪ್ನಲ್ಲಿ ಇರುತ್ತೇವೆ. ನಮ್ಮ ತಂಡ ಅದನ್ನು ಮಾಡಿತು ಎಂದು ಹೇಳಿದ್ದಾರೆ.
3 / 8
ನಮ್ಮ ತಂಡದ ಫೀಲ್ಡಿಂಗ್ ಇಂದು ಅದ್ಭುತವಾಗಿತ್ತು. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಅನೇಕ ಅವಕಾಶಗಳನ್ನು ನಾವು ಮಾಡಿಕೊಟ್ಟೆವು ಅದನ್ನು ಫೀಲ್ಡರ್ಗಳು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಅದರಲ್ಲೂ ರವೀಂದ್ರ ಜಡೇಜಾ ಮತ್ತು ಶುಭ್ಮನ್ ಗಿಲ್ ಹಿಡಿದ ಕ್ಯಾಚ್ ಅತ್ಯುತ್ತಮವಾಗಿತ್ತು - ಹಾರ್ದಿಕ್ ಪಾಂಡ್ಯ.
4 / 8
ಜಡೇಜಾ ಬಗ್ಗೆ ಮಾತನಾಡುವುದಾದರೆ, ಅವರು ತಮ್ಮ ಘನತೆಗೆ ತಕ್ಕಂತೆ ಆಡಿದ್ದಾರೆ. ಏಕದಿನ ಕ್ರಿಕೆಟ್ನಿಂದ ವಿರಾಮ ಪಡೆದುಕೊಂಡು ಬಂದು ಅವರು ಪಂದ್ಯವನ್ನು ಉತ್ತಮವಾಗಿ ಫಿನಿಶ್ ಮಾಡಿದರು. ಮುಖ್ಯವಾಗಿ ಕೆಎಲ್ ರಾಹುಲ್ಗೆ ಅತ್ಯುತ್ತಮ ಸಾಥ್ ನೀಡಿದರು. ಇವರಿಬ್ಬರ ಜೊತೆಯಾಟ ಭರ್ಜರಿ ಆಗಿತ್ತು. ಇವರಿಬ್ಬರ ಬ್ಯಾಟಿಂಗ್ ನಮಗೆ ಆತ್ಮವಿಶ್ವಾಸ ತುಂಬಿದೆ - ಹಾರ್ದಿಕ್ ಪಾಂಡ್ಯ.
5 / 8
ಇಲ್ಲಿ ತುಂಬಾ ಬಿಸಿಲಿತ್ತು. ಆದರೂ ನಾನು ಬೌಲಿಂಗ್ ಮಾಡುವಾಗ ಎಂಜಾಯ್ ಮಾಡಿದೆ. ಬ್ಯಾಟಿಂಗ್ ಮಾಡುವಾಗ ಕೂಡ ಖುಷಿ ಆಯಿತು. ಇದೊಂದು ನಮಗೆ ಸಿಕ್ಕ ಅತ್ಯುತ್ತಮ ಗೆಲುವು. ತಂಡ ನೀಡಿದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ ಎಂಬುದು ಹಾರ್ದಿಕ್ ಪಾಂಡ್ಯ ಮಾತು.
6 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 35.4 ಓವರ್ಗಳಲ್ಲಿ ಕೇವಲ 188 ರನ್ಗೆ ಆಲೌಟ್ ಆಯಿತು. ಮಿಚೆಲ್ ಮಾರ್ಶ್ 65 ಎಸೆತಗಳಲ್ಲಿ 81 ರನ್ ಸಿಡಿಸಿದ್ದು ಬಿಟ್ಟರೆ ಉಳಿದವರು ವೈಫಲ್ಯ ಅನುಭವಿಸಿದರು. ಭಾರತ ಪರ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ ಜಡೇಜಾ 2 ವಿಕೆಟ್ ಕಿತ್ತರು.
7 / 8
ಸುಲಭ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ಕೆಎಲ್ ರಾಹುಲ್ (ಅಜೇಯ 75) ಹಾಗೂ ರವೀಂದ್ರ ಜಡೇಜಾ (ಅಜೇಯ 45) ಅವರ ಶತಕದ ಜೊತೆಯಾಟದ ನೆರವಿನಿಂದ 39.5 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿ 5 ವಿಕೆಟ್ಗಳ ಜಯ ಸಾಧಿಸಿತು.