Babar Azam Birthday: ಬಾಬರ್ ಅಜಮ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ರೋಹಿತ್ ಶರ್ಮಾ: ಫೋಟೋ ವೈರಲ್

Rohit Sharma and Babar Azam: ಪತ್ರಿಕಾಗೋಷ್ಠಿ ಮಧ್ಯ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಜೊತೆಗೆ ರೋಹಿತ್ ಹಾಗೂ ಬಾಬರ್ ಅಜಮ್ ಅವರ ಫೋಟೋ ಶೂಟ್ ಕೂಡ ನಡೆಸಲಾಗಿದೆ.

Babar Azam Birthday: ಬಾಬರ್ ಅಜಮ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ರೋಹಿತ್ ಶರ್ಮಾ: ಫೋಟೋ ವೈರಲ್
Babar Azam and Rohit Sharma
Updated By: Vinay Bhat

Updated on: Oct 15, 2022 | 10:18 AM

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅ. 16 ರಂದು ಈ ಚುಟುಕು ಮಹಾಸಮರಕ್ಕೆ ಚಾಲನೆ ಸಿಗಲಿದ್ದು ಎಲ್ಲ ತಂಡದ ಆಟಗಾರರು ಭರ್ಜರಿ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಎಲ್ಲ 15 ತಂಡದ ನಾಯಕರು ಒಟ್ಟಾಗಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಮೆಲ್ಬೋರ್ನ್​ನ ಪ್ಲಾಜಬಾಲ್​ ರೂಮ್​ನಲ್ಲಿ ತಮ್ಮ ತಂಡದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾಯಕರು ಉತ್ತರ ನೀಡಿದ್ದಾರೆ. ಇದರ ನಡುವೆ ಪತ್ರಿಕಾಗೋಷ್ಠಿ ಮಧ್ಯ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಯಾರಿಗೂ ತಿಳಿಯದಂತೆ ಕೇಕ್ ತಂದು ಬಾಬರ್​ಗೆ ನೀಡಿ ವಿಶೇಷವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಸೆಲೆಬ್ರೇಷನ್​​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಪಾಲ್ಗೊಂಡಿದ್ದರು.

ಇಂದು (ಅ. 15) ಬಾಬರ್ ಬಾಬರ್ ಅವರ ಹುಟ್ಟುಹಬ್ಬ. ಆದರೆ, ಬರ್ತ್​ ಡೇಯ ಒಂದು ದಿನಕ್ಕೂ ಮುನ್ನ ಎಲ್ಲ 15 ತಂಡದ ನಾಯಕರು ಜೊತೆಯಿದ್ದ ಕಾರಣ ಈರೀತಿ ಹುಟ್ಟುಹಬ್ಬ ಆಚರಿಸಲಾಗಿದೆ. ಇದರ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಇದರಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಹಾಜರಿದ್ದರು. ಜೊತೆಗೆ ರೋಹಿತ್ ಹಾಗೂ ಬಾಬರ್ ಅಜಮ್ ಅವರ ಫೋಟೋ ಶೂಟ್ ಕೂಡ ನಡೆಸಲಾಗಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
BCCI: 955 ಕೋಟಿ ರೂ. ನಷ್ಟದ ಸುಳಿಯಲ್ಲಿ ಬಿಸಿಸಿಐ..! ಕೇಂದ್ರದತ್ತ ಮುಖ ಮಾಡಿದ ಕ್ರಿಕೆಟ್ ಬಿಗ್​ಬಾಸ್
Arjun Tendulkar: 4 ಓವರ್, 10 ರನ್, 4 ವಿಕೆಟ್: ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಬಿರುಗಾಳಿಗೆ ಎದುರಾಳಿ ತತ್ತರ: ವಿಡಿಯೋ
INDW vs SLW: ಇಂದು ಮಹಿಳಾ ಏಷ್ಯಾಕಪ್ ಫೈನಲ್: ರೋಚಕತೆ ಸೃಷ್ಟಿಸಿದ ಭಾರತೀಯ ವನಿತೆಯರ ಪ್ಲೇಯಿಂಗ್ XI
Asia Cup 2022: ಭಾರತ- ಶ್ರೀಲಂಕಾ ನಡುವೆ ಏಷ್ಯಾಕಪ್ ಫೈನಲ್; ಪಂದ್ಯ ಆರಂಭ ಎಷ್ಟು ಗಂಟೆಗೆ ಗೊತ್ತಾ?

 

ಭಾರತ ಕ್ರಿಕೆಟ್ ತಂಡ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಆಡಿದ ಎರಡು ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ 36 ರನ್​ಗಳಿಂದ ಸೋಲುಂಡಿತು. ಇದೀಗ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಅಧಿಕೃತ ಅಭ್ಯಾಸ ಪಂದ್ಯಕ್ಕಾಗಿ ಬ್ರಿಸ್ಬೇನ್​ಗೆ ತಲುಪಿದ್ದಾರೆ.

ಅಕ್ಟೋಬರ್ 17 ರಂದು ಬ್ರಿಸ್ಬೇನ್​ನ ಗಬ್ಬಾ ಕ್ರೀಡಾಂಗಣದಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 9:30 ಕ್ಕೆ ಶುರುವಾಗಲಿದೆ. ಕೊನೆಯ ವಾರ್ಮ್​-ಅಪ್ ಮ್ಯಾಚ್ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಇದು ಮಧ್ಯಾಹ್ನ 1:30 ಕ್ಕೆ ಶುರುವಾಗಲಿದೆ.

ಬಳಿಕ ಟೀಮ್ ಇಂಡಿಯಾ ಅ. 23 ರಂದು ಮೆಲ್ಬೋರ್ನ್‌ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಪಾಕಿಸ್ತಾನ ತಂಡ ಭಾರತ ವಿರುದ್ಧ ಕಣಕ್ಕಿಳಿಯುವ ಮುನ್ನ ಎರಡು ಅಭ್ಯಾಸ ಪಂದ್ಯವನ್ನು ಆಡಲಿದ. ಅ. 17 ರಂದು ಇಂಗ್ಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 19 ರಂದು ಅಫ್ಘಾನಿಸ್ತಾನ ವಿರುದ್ಧ ವಾರ್ಮ್-ಅಪ್ ಮ್ಯಾಚ್​ನಲ್ಲಿ ಕಣಕ್ಕಿಳಿಯಲಿದೆ. ಟಿ20 ವಿಶ್ವಕಪ್ 2022ರ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನಮೀಬಿಯಾ ಮುಖಾಮುಖಿ ಆಗಲಿದೆ. ಸೂಪರ್ -12 ಹಂತದ ಪಂದ್ಯಕ್ಕೆ ಅ. 22 ರಂದು ಚಾಲನೆ ಸಿಗಲಿದ್ದು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಕಾದಾಟ ನಡೆಸಲಿದೆ.

ಭಾರತ-ಪಾಕ್ ಪಂದ್ಯದ ಟಿಕೆಟ್​ಗೆ ಭರ್ಜರಿ ಬೇಡಿಕೆ:

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ನ ಮುಖ್ಯಸ್ಥ ಮಿಚೆಲ್ ಎನ್‌ರೈಟ್ ಟಿಕೆಟ್ ವಿತರಣೆಯ ಬಗ್ಗೆ ಮಾತನಾಡಿದ್ದು, ಈ ಭಾನುವಾರದ ಸೂಪರ್-12 ಪಂದ್ಯಗಳು ಮತ್ತು ಆರಂಭಿಕ ಪಂದ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಪ್ರತಿ ಪಂದ್ಯದ ಟಿಕೆಟ್‌ಗಳು ಬಿಡುಗಡೆಯಾದ ತಕ್ಷಣ ಸೋಲ್ಡ್ ಔಟ್ ಆಗಿವೆ ಎಂದು ಸಂಘಟಕರು ತಿಳಿಸಿದ್ದಾರೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಭಾರೀ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.

Published On - 10:18 am, Sat, 15 October 22