ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತ (India vs Australia) 5 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಬ್ಯಾಟಿಂಗ್ – ಬೌಲಿಂಗ್ನಲ್ಲಿ ಉತ್ತಮ ಆಟವಾಡಿತ್ತು. ಆದರೆ, ದ್ವಿತೀಯ ಏಕದಿನದಲ್ಲಿ ನಡೆದಿದ್ದು ಇದರ ತದ್ವಿರುದ್ದ. ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಟೀಮ್ ಇಂಡಿಯಾ (Team India) 10 ವಿಕೆಟ್ಗಳ ಸೋಲು ಅನುಭವಿಸಿತು. ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬೌಲಿಂಗ್ನಲ್ಲಿ ಎದುರಾಳಿಯ ಒಂದೂ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಹೀನಾಯ ಸೋಲಿಗೆ ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
”ಒಂದು ಪಂದ್ಯವನ್ನು ಸೋತರೆ ಖಂಡಿತವಾಗಿಯೂ ಬೇಸರವಾಗುತ್ತದೆ. ಬ್ಯಾಟಿಂಗ್ನಲ್ಲಿ ನಾವು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಬೋರ್ಡ್ನಲ್ಲಿ ಇನ್ನಷ್ಟು ರನ್ಗಳು ಬೇಕಾಗಿದ್ದವು. ಇದು 117 ರನ್ಗೆ ಆಲೌಟ್ ಆಗುವ ವಿಕೆಟ್ ಅಲ್ಲವೇ ಅಲ್ಲ. ಸರಾಗವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದರಿಂದ ನಾವು ಅಂದುಕೊಂಡಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ”.
”ಮೊದಲ ಓವರ್ನಲ್ಲೇ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡೆವು. ನಾನು ಮತ್ತು ಕೊಹ್ಲಿ 30-35 ರನ್ ಬೇಗ ಗಳಿಸಿದೆವು. ನಂತರ ನಾನು ಔಟಾದೆ. ಬಳಿಕ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಸಾಗಿದೆವು. ಇದು ನಮ್ಮನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯಿತು,” ಎಂದು ಹೇಳುವ ಮೂಲಕ ಬ್ಯಾಟರ್ಗಳೇ ಈ ಪಂದ್ಯ ಸೋಲಲು ಮುಖ್ಯ ಕಾರಣ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
IND vs AUS: ಅಬ್ಬಾ.. ಎಂಥಾ ಕ್ಯಾಚ್.! ಸ್ಮಿತ್ ಚಿರತೆ ಜಿಗತಕ್ಕೆ ಪೆವಿಲಿಯನ್ ಸೇರಿಕೊಂಡ ಪಾಂಡ್ಯ; ವಿಡಿಯೋ
Australia win the second #INDvAUS ODI. #TeamIndia will look to bounce back in the series decider ? ?
Scorecard ▶️ https://t.co/dzoJxTO9tc @mastercardindia pic.twitter.com/XnYYXtefNr
— BCCI (@BCCI) March 19, 2023
ಮಾತು ಮುಂದುವರೆಸಿದ ರೋಹಿತ್, ”ವಿಕೆಟ್ಗಳನ್ನು ಸರಾಗವಾಗಿ ಕಳೆದುಕೊಳ್ಳುತ್ತಿದ್ದರೆ ಅಂಥಹ ಪರಿಸ್ಥಿತಿಯಿಂದ ಕಮ್ಬ್ಯಾಕ್ ಮಾಡುವುದು ತುಂಬಾನೆ ಕಷ್ಟ. ಇವತ್ತು ನಮ್ಮ ದಿನ ಆಗಿರಲಿಲ್ಲ. ಮಿಚೆಲ್ ಸ್ಟಾರ್ಕ್ ಒಬ್ಬ ಅದ್ಭುತ ಬೌಲರ್. ಹೊಸ ಚೆಂಡಿನಲ್ಲಿ ಅವರು ಆಸ್ಟ್ರೇಲಿಯಾಕ್ಕೆ ಪ್ರತಿಬಾರಿ ಯಶಸ್ಸು ತಂದುಕೊಡುತ್ತಾರೆ. ತಮ್ಮ ಶಕ್ತಿಗೆ ತಕ್ಕಂತೆ ಸ್ಟಾರ್ಕ್ ಬೌಲಿಂಗ್ ಮಾಡುತ್ತಾರೆ. ಪವರ್ ಹಿಟ್ಟಿಂಗ್ನಲ್ಲಿ ಮಿಚೆಲ್ ಮಾರ್ಶ್ ಅವರನ್ನು ಮೀರಿಸುವುದು ಸುಲಭಲ್ಲ. ಅವರು ತಂಡಕ್ಕೆ ಸದಾ ಕೊಡುಗೆ ನೀಡುತ್ತಲೇ ಇರುತ್ತಾರೆ,” ಎಂಬುದು ಹಿಟ್ಮ್ಯಾನ್ ಮಾತು.
ಗೆದ್ದ ತಂಡದ ನಾಯಕ ಸ್ಟೀವ್ ಸ್ಮಿತ್ ಮಾತನಾಡಿ, ”ಇದು ದಿನದ ಉತ್ತಮ ಆರಂಭ. ಈ ವಿಕೆಟ್ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ನಮಗೆ ಕಲ್ಪನೆ ಇರಲಿಲ್ಲ. ಹೀಗಾಗಿ ಎದುರಾಳಿ ಎಷ್ಟು ರನ್ ಕಲೆಹಾಕಬಹುದು ಎಂಬ ಬಗ್ಗೆ ಯಾವುದೇ ಸೂಚನೆ ಕೂಡ ಸಿಗಲಿಲ್ಲ. ಆದರೆ, ನಾವು ನಮ್ಮ ಕೌಶಲ್ಯಗಳನ್ನು ಕಾರ್ಯರೂಪಕ್ಕೆ ತಂದೆವು. ಇದರಿಂದ ಭಾರತದ ಮೇಲೆ ಸಂಪೂರ್ಣ ಒತ್ತಡ ಹಾಕಿದೆವು. ಮಿಚೆಲ್ ಸ್ಟಾರ್ಕ್ ಹೊಸ ಬಾಲ್ ಅನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಹೆಡ್-ಮಾರ್ಶ್ ಆಡಿದ ರೀತಿ ಅದ್ಭುತವಾಗಿತ್ತು. ಇವರಿಂದ ನಾವು ಪಂದ್ಯದಲ್ಲಿ ಗೆಲುವು ಸಾಧಿಸಿದೆವು. ಹಾರ್ದಿಕ್ ಒಬ್ಬ ಊಹಿಸಲಾಗದ ಪ್ಲೇಯರ್. ಅವರ ಕ್ಯಾಚ್ ಹಿಡಿದಿದ್ದು ಮುಖ್ಯವಾಯಿತು,” ಎಂದು ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:44 am, Mon, 20 March 23