ಎರಡನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2023) ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿದ್ದು ಟೀಮ್ ಇಂಡಿಯಾ ಸಂಕಷ್ಟದಲ್ಲಿದೆ. ಆಸ್ಟ್ರೇಲಿಯಾವನ್ನು 469 ರನ್ಗಳಿಗೆ ಆಲೌಟ್ ಮಾಡಿ ಪ್ರಥಮ ಇನ್ನಿಂಗ್ಸ್ ಶುರುಮಾಡಿರುವ ಭಾರತ (India vs Australia) ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿದ್ದು, 318 ರನ್ಗಳ ಹಿನ್ನಡೆಯಲ್ಲಿದೆ. ಡಬ್ಲ್ಯೂಟಿಸಿ 2023 ಫೈನಲ್ನ ದ್ವಿತೀಯ ದಿನದಾಟ ಕೂಡ ಕೆಲ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಆಡಿದ ರೀತಿ ಅಂಪೈರ್ಗೆ ಸಿಟ್ಟು ತರಿಸಿತು.
ಡಿಆರ್ಎಸ್ ವಿಚಾರದಲ್ಲಿ ರೋಹಿತ್ ಶರ್ಮಾ ನಡೆದುಕೊಂಡ ರೀತಿ ಅಂಪೈರ್ನ ಕೆಂಗಣ್ಣಿಗೆ ಗುರಿಯಾಯಿತು. ಈ ಘಟನೆ ಆಸೀಸ್ ಬ್ಯಾಟಿಂಗ್ ಇನ್ನಿಂಗ್ಸ್ನ 97ನೇ ಓವರ್ನಲ್ಲಿ ನಡೆದಿದೆ. ಮೊಹಮ್ಮದ್ ಶಮಿ ಅವರು ಅಲೆಕ್ಸ್ ಕ್ಯಾರಿಗೆ ಚೆಂಡನ್ನು ನೇರವಾಗಿ ಎಸೆದರು. ಬಾಲ್ ಬ್ಯಾಟ್ಗೆ ತಾಗದೆ ಪ್ಯಾಡ್ಗೆ ಬಡಿಯಿತು. ಎಲ್ಬಿಗೆ ಮನವಿ ಮಾಡಿದರು. ಅಂಪೈರ್ ಔಟ್ ನೀಡದ ಪರಿಣಾಮ ವಿಕೆಟ್ ಕೀಪರ್ ಕೆಎಸ್ ಭರತ್ ಬಳಿ ರೋಹಿತ್ ಶರ್ಮಾ ತೆರಳಿ ರಿವ್ಯೂ ತೆಗೆದುಕೊಳ್ಳಬೇಕಾ ಎಂಬ ಚರ್ಚೆ ನಡೆಸಿದರು.
WTC Final 2023: 71/4..! ಆಸೀಸ್ ಬೌಲಿಂಗ್ ದಾಳಿಗೆ ಪತರುಗುಟ್ಟಿದ ವಿಶ್ವ ಕ್ರಿಕೆಟ್ನ ಸೂಪರ್ ಸ್ಟಾರ್ಸ್..!
ಕೊನೆಯದಾಗಿ ರೋಹಿತ್ ನಗುತ್ತಾ ಡಿಆರ್ಎಸ್ ತೆಗೆದುಕೊಳ್ಳಲು ಮುಂದಾದರು. ಆದರೆ, ರಿವ್ಯೂ ತೆಗೆದುಕೊಳ್ಳಲು ನಾಯಕ ಎರಡೂ ಕೈಗಳನ್ನು ಜೋಡಿಸಬೇಕು. ರೋಹಿತ್ ಹೀಗೆ ಮಾಡಲಿಲ್ಲ. ತಮಾಷೆಗೆಂದು ಅರ್ಧದ ವರೆಗೆ ಎರಡು ಕೈಗಳನ್ನು ತಂದು ಹಿಂತೆಗೆದರು. ಇದರಿಂದ ಅಂಪೈರ್ ಸಿಟ್ಟಾದಂತೆ ಕಂಡುಬಂದಿತು. ಐಸಿಸಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೃಹತ್ ಮೊತ್ತ ಗಳಿಸುವ ಗುರಿಯೊಂದಿಗೆ 2ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ಮೊದಲ ದಿನದ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. 146 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹೆಡ್ 163 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ 121 ರನ್ಗೆ ಅಂತ್ಯವಾಯಿತು. ಅಲೆಕ್ಸ್ ಕ್ಯಾರಿ 48 ರನ್ ಗಳಿಸಿದರು. ಅಂತಿಮವಾಗಿ ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರು.
ಭಾರತ ಪರ ನಾಯಕ ರೋಹಿತ್ ಶರ್ಮಾ (15) ಹಾಗೂ ಶುಭ್ಮನ್ ಗಿಲ್(13) ಮೊದಲ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಇಬ್ಬರೂ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಬಳಿಕ ಕ್ರೀಸ್ಗೆ ಬಂದ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್ಗೆ ಅಜಿಂಕ್ಯ ರಹಾನೆ (ಅಜೇಯ 29) ಹಾಗೂ ರವೀಂದ್ರ ಜಡೇಜಾ (48) ಉತ್ತಮ ಇನ್ನಿಂಗ್ ಕಟ್ಟಿ ತಂಡಕ್ಕೆ ನೆರವಾದರು. ರಹಾನೆ ಹಾಗೂ ಶ್ರೀಕರ್ ಭರತ್ (5) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ