2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಮುಂಬೈ ಇಂಡಿಯನ್ಸ್‌ನ ಕಳಪೆ ಪ್ರದರ್ಶನ ಮುಂದುವರೆದಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಅಭಿಮಾನಿಗಳ ಕೋಪ ಕೂಡ ತಣ್ಣಗಾಗಿಲ್ಲ. ಇದು ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಕಂಡುಬಂತು. ಹಾರ್ದಿಕ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪುನಃ ಕೆಟ್ಟ ಅನುಭವವನ್ನು ಪಡೆದರು. ಆದರೆ, ಈ ಸಂದರ್ಭ ಎಂಐ ಮಾಜಿ ನಾಯಕ ರೋಹಿತ್ ಶರ್ಮಾ ಈರೀತಿ ಮಾಡದಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಮುಂಬೈ ಫೀಲ್ಡಿಂಗ್ ಮಾಡುತ್ತಿರುವ ಸಂದರ್ಭ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಬೊಬ್ಬೆ ಹೊಡೆದು ಗೇಲಿ ಮಾಡುತ್ತಿದ್ದರು. ಆಗ ರೋಹಿತ್ ಬೊಬ್ಬೆ ಹೊಡೆಯವುದನ್ನು ನಿಲ್ಲಿಸುವಂತೆ ಅಭಿಮಾನಿಗಳ ಬಳಿ ಹೇಳಿದ್ದಾರೆ. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಕೈಸನ್ನೆ ಮೂಲಕ ಹಾರ್ದಿಕ್ ವಿರುದ್ಧ ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು.
ಐಪಿಎಲ್ನಲ್ಲಿಂದು ಆರ್ಸಿಬಿ ಪಂದ್ಯ: ಗೆಲ್ಲಬೇಕಾದರೆ ಬದಲಾವಣೆ ಅನಿವಾರ್ಯ
Rohit Sharma saying crowd not to boo Hardik Pandya, Just gentleman things. pic.twitter.com/xSm6cRj3BO
— Prayag (@theprayagtiwari) April 1, 2024
ವೇಗಿ ಟ್ರೆಂಟ್ ಬೌಲ್ಟ್ ಅವರ ಡೈನಾಮಿಕ್ ಸ್ಪೆಲ್ ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಸ್ಪಿನ್ ಬೌಲಿಂಗ್‌ನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನ ವಾಂಖೆಡೆ ಸ್ಟೇಡಿಯಂನಲ್ಲಿ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ರಾಯಲ್ಸ್ ಟಾಸ್ ಗೆದ್ದು ಬೌಲ್ ಆಯ್ಕೆ ಮಾಡಿಕೊಂಡರು. ಮುಂಬೈ ಅನ್ನು 125/9 ಗೆ ಯಶಸ್ವಿಯಾಗಿ ನಿರ್ಬಂಧಿಸಿತು. ರಿಯಾನ್ ಪರಾಗ್ ಅವರ ಅಜೇಯ 54 (39 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ) ರನ್ಗಳ ನೆರವಿನಿಂದ ಆರ್ಆರ್ 15.3 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು.
ಬೆಂಗಳೂರಿನಲ್ಲಿ ಟಾಸ್ ಗೆದ್ದವನೇ ಬಾಸ್; ಪಿಚ್ ಯಾರಿಗೆ ಸಹಕಾರಿ?
ರಾಜಸ್ಥಾನ್ ರಾಯಲ್ಸ್ ತಂಡದ ಸತತ ಮೂರನೇ ಗೆಲುವಿನೊಂದಿಗೆ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಆದರೆ ಮುಂಬೈ ಇಂಡಿಯನ್ಸ್ ತಮ್ಮ ಮೂರನೇ ಸತತ ಸೋಲನ್ನು ಅನುಭವಿಸಿದ್ದು, ರನ್ರೇಟ್ನಲ್ಲಿ ಕೂಡ ಪಾತಾಳಕ್ಕೆ ಕುಸಿದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ