ಟೀಂ ಇಂಡಿಯಾವನ್ನು ಟಿ20 ಚಾಂಪಿಯನ್ ಮಾಡಿದ ಬಳಿಕ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತೊರೆದಿದ್ದ ಕನ್ನಡಿಗ ರಾಹುಲ್ ದ್ರಾವಿಡ್, ಮತ್ತೊಮ್ಮೆ ಐಪಿಎಲ್ ಅಖಾಡಕ್ಕಿಳಿದಿದ್ದಾರೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ಗೆ ಬಲಿಷ್ಠ ತಂಡವನ್ನು ಕಟ್ಟುವ ಸವಾಲು ಎದುರಾಗಿದೆ. ಇದಲ್ಲದೆ ಧಾರಣ ಪಟ್ಟಿಯಲ್ಲಿ ಯಾರಿಗೆಲ್ಲ ಅವಕಾಶ ನೀಡಬೇಕು ಎಂಬುದು ಕೂಡ ತಲೆನೋವಾಗಿದೆ. ಆದಾಗ್ಯೂ ಬಿಸಿಸಿಐ ನಿಯಮದಂತೆ ತಂಡದ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿರುವ ರಾಹುಲ್ ದ್ರಾವಿಡ್, ಮುಂದಿನ ಆವೃತ್ತಿಯ ಹರಾಜಿಗೂ ಮುನ್ನ ತಂಡದಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಅದರಂತೆ ತಂಡದ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಮತ್ತು ಸಂದೀಪ್ ಶರ್ಮಾ ಅವರನ್ನು ಉಳಿಸಿಕೊಳ್ಳುವಲ್ಲಿ ಫ್ರಾಂಚೈಸಿ ಯಶಸ್ವಿಯಾಗಿದೆ. ಇದರ ಜೊತೆಗೆ ಧ್ರುವ್ ಜುರೆಲ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ. ಉಳಿದಂತೆ ಜೋಸ್ ಬಟ್ಲರ್, ಯುಜ್ವೇಂದ್ರ ಚಹಾಲ್, ಟ್ರೆಂಟ್ ಬೌಲ್ಟ್ ಮತ್ತು ರವಿಚಂದ್ರನ್ ಅಶ್ವಿನ್ ಸೇರಿದಂತೆ ಉಳಿದ ಆಟಗಾರರು ಹರಾಜಿಗೆ ಬಿಡುಗಡೆಯಾಗಿದ್ದಾರೆ.
ಮೊದಲೆರಡು ಆಯ್ಕೆಯಾಗಿ ತಂಡದಲ್ಲಿ ಉಳಿದುಕೊಂಡಿರುವ ನಾಯಕ ಸಂಜು ಸ್ಯಾಮ್ಸನ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಫ್ರಾಂಚೈಸಿ ತಲಾ 18 ಕೋಟಿ ರೂ.ಗೆ ಉಳಿಸಿಕೊಂಡಿದೆ. ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ಗೆ 14 ಕೋಟಿ ರೂ. ನೀಡಿದ್ದರೆ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ಗೂ 14 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ವಿದೇಶಿ ಆಟಗಾರನಾಗಿ ಶಿಮ್ರಾನ್ ಹೆಟ್ಮೆಯರ್ ಅವರನ್ನು 11 ಕೋಟಿ ರೂ.ಗೆ ಉಳಿಸಿಕೊಂಡಿದ್ದರೆ, ಸಂದೀಪ್ ಶರ್ಮಾ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಂಡಿದೆ.
ರಾಜಸ್ಥಾನ ತಂಡವು ತನ್ನ ದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾದ ಜೋಸ್ ಬಟ್ಲರ್‌ರನ್ನು ತಂಡದಿಂದ ಕೈಬಿಟ್ಟಿದೆ. ಬಟ್ಲರ್ ಅವರ ಫಾರ್ಮ್ ಮತ್ತು ಫಿಟ್‌ನೆಸ್ ಮೊದಲಿನಂತಿಲ್ಲದ ಕಾರಣ ರಾಜಸ್ಥಾನ ಈ ನಿರ್ಧಾರ ತೆಗೆದುಕೊಂಡಿದೆ. ಜತೆಗೆ ಟ್ರೆಂಟ್ ಬೌಲ್ಟ್ ರನ್ನು ತಂಡದಿಂದ ಹೊರಗಿಟ್ಟಿರುವುದು ಕಠಿಣ ನಿರ್ಧಾರವಾಗಿದೆ. ಇನ್ನು ಮುಂದೆ ಈ ತಂಡಕ್ಕೆ ಆರ್‌ಟಿಎಂ ಸಹ ಉಳಿದಿಲ್ಲದ ಕಾರಣ ತಂಡವು ಹರಾಜಿನಲ್ಲಿ ಯಾವ ಆಟಗಾರರ ಮೇಲೆ ಬಾಜಿ ಕಟ್ಟುತ್ತದೆ ಎಂಬುದು ಈಗ ಪ್ರಶ್ನೆಯಾಗಿದೆ.
ಜೋಸ್ ಬಟ್ಲರ್, ಡೊನೊವನ್ ಫೆರೇರಾ, ಕೃನಾಲ್ ರಾಥೋಡ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್ ಕಾಡ್ಮೋರ್, ಅಬಿದ್ ಮುಷ್ತಾಕ್, ನಾಂದ್ರೆ ಬರ್ಗರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Thu, 31 October 24