
ನಾಲ್ಕು ವರ್ಷಗಳ ಬಳಿಕ ತವರಿನ ಮೈದಾನದಲ್ಲಿ ಪಂದ್ಯವನ್ನಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಲಿನ ಶಾಕ್ ಎದುರಾಗಿದೆ. ದೊಡ್ಡ ಮೈದಾನದಲ್ಲಿ ಘಟಾನುಘಟಿ ಬ್ಯಾಟರ್ಗಳನ್ನೇ ತಂಡದಲ್ಲಿರಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 155 ರನ್‌ಗಳ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್ ಆಡಿದ ಸಂಜು ಬಳಗ 10 ರನ್‌ಗಳಿಂದ ಸೋತಿತು. ಮಾರ್ಕಸ್ ಸ್ಟೊಯಿನಿಸ್ ಅವರ ಆಲ್ ರೌಂಡ್ ಪ್ರದರ್ಶನದ ಆಧಾರದ ಮೇಲೆ, ಲಕ್ನೋ ಈ ಸೀಸನ್ನ ನಾಲ್ಕನೇ ಗೆಲುವು ದಾಖಲಿಸಿತು.
ಕೊನೆಯ ಓವರ್‌ನಲ್ಲಿ 8 ರನ್ ಗಳಿಸಿದ ರಾಜಸ್ಥಾನ್ ಅಂತಿಮವಾಗಿ 10 ರನ್‌ಗಳಿಂದ ಲಕ್ನೋ ವಿರುದ್ಧ ಸೋಲೊಪ್ಪಿಕೊಂಡಿದೆ.
ಅಂತಿಮ ಓವರ್‌ನಲ್ಲಿ 19 ರನ್‌ಗಳ ಅಗತ್ಯವಿತ್ತು. ಆದರೆ ಒಂದರ ನಂತರ ಒಂದರಂತೆ ಸತತ ಎರಡು ವಿಕೆಟ್‌ಗಳು ಪತನಗೊಂಡಿವೆ. ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ನಂತರ, ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ವಿಕೆಟ್ ಕಳೆದುಕೊಂಡರು.
19ನೇ ಓವರ್‌ನ 4ನೇ ಎಸೆತವನ್ನು ಓವರ್ ಡೀಪ್ ಮಿಡ್ ವಿಕೆಟ್ನಲ್ಲಿ ಪರಾಗ್ ಸಿಕ್ಸರ್ಗಟ್ಟಿದರು. ಇನ್ನು 6 ಎಸೆತಗಳಲ್ಲಿ ರಾಜಸ್ಥಾನ್ ಗೆಲುವಿಗೆ 19 ರನ್ ಬೇಕು
ರಾಜಸ್ಥಾನ್ ಪರ ಬೌಂಡರಿಗಳು ಅಪರೂಪವಾಗಿದ್ದವು. ಆದರೆ 18ನೇ ಓವರ್‌ನಲ್ಲಿ 3 ಬೌಂಡರಿ ಬಂದವು. ಸ್ಟೋಯ್ನಿಸ್ ಎಸೆದ ಈ ಓವರ್‌ನ 2,3,5ನೇ ಎಸೆತವನ್ನು ಪಡಿಕಲ್ ಬೌಂಡರಿಗಟ್ಟಿದರು.
ಲಕ್ನೋ ವಿರುದ್ಧ ಶಿಮ್ರಾನ್ ಹೆಟ್ಮೆಯರ್ ಹೆಚ್ಚು ಅಬ್ಬರಿಸಲು ಸಾಧ್ಯವಾಗಲಿಲ್ಲ ಕೇವಲ 2 ರನ್‌ಗಳಿಗೆ ಅವೇಶ್ ಖಾನ್ ಹೆಟ್ಮೆಯರ್ ವಿಕೆಟ್ ಉರುಳಿಸಿದರು.
ರಾಜಸ್ಥಾನ್ ರಾಯಲ್ಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಸೆಟ್ ಬ್ಯಾಟರ್ ಮತ್ತು ರಾಜಸ್ಥಾನದ ಆರಂಭಿಕ ಆಟಗಾರ ಜೋಸ್ ಬಟ್ಲರ್ 40 ರನ್ ಗಳಿಸಿ ಮರಳಿದ್ದಾರೆ.
ರಾಜಸ್ಥಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸಂಜು ಸ್ಯಾಮ್ಸನ್ ರನೌಟ್ ಆಗಿದ್ದಾರೆ. ಸ್ಯಾಮ್ಸನ್ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾದರು
12ನೇ ಓವರ್‌ನ ಮೊದಲ ಎಸೆತದಲ್ಲಿ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಹೊಡೆದ ಜೈಸ್ವಾಲ್ ಆ ನಂತರ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಆವೇಶ್ ಖಾನ್ಗೆ ಕ್ಯಾಚಿತ್ತು ಔಟಾದರು.
11ನೇ ಓವರ್ ಎಸೆದ ಮಿಶ್ರಾಗೆ ಓವರ್‌ನ ಮೊದಲ ಎಸೆತದಲ್ಲೇ ಬಟ್ಲರ್ ರಿವರ್ ಸ್ವಿಪ್ ಆಡಿ ಬೌಂಡರಿ ಬಾರಿಸಿದರು.
9ನೇ ಓವರ್ ಎಸೆದ ಅಮಿತ್ ಮಿಶ್ರಾ ಅವರ 3ನೇ ಎಸೆತವನ್ನು ಸ್ವಿಪ್ ಶಾಟ್ ಆಡಿದ ಬಟ್ಲರ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು.
ಪವರ್ ಪ್ಲೇ ಕೊನೆಯ ಓವರ್‌ನಲ್ಲಿ ಬೌಂಡರಿ ಬಂದಿದ್ದು ಬಿಟ್ಟರೆ, 7ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಇನ್ನು 8ನೇ ಓವರ್‌ನಲ್ಲಿ ವೈಡ್ ಮೂಲಕ ಬೌಂಡರಿ ಬಂತು.
ಪವರ್ ಪ್ಲೇ ಕೊನೆಯ ಓವರ್‌ನಲ್ಲಿ 3 ಬೌಂಡರಿ ಬಂದವು. ಓವರ್‌ನ ಮೊದಲೆರಡು ಎಸೆತಗಳಲ್ಲಿ ಜೈಸ್ವಾಲ್ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಬಟ್ಲರ್ ಬೌಂಡರಿ ಹೊಡೆದರು.
3 ಮತ್ತು 4ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ 5ನೇ ಓವರ್‌ನ ಮೊದಲ ಎಸೆತದಲ್ಲಿ ಜೈಸ್ವಾಲ್ ಬೌಂಡರಿ ಬಾರಿಸಿದರೆ, ಓವರ್‌ನ 4ನೇ ಎಸೆತದಲ್ಲಿ ಬಟ್ಲರ್ ಸ್ಕ್ವೈರ್ ಲೆಗ್ ಕಡೆ 112 ಮೀ. ಉದ್ದದ ಸಿಕ್ಸರ್ ಬಾರಿಸಿದರು.
ಯದ್ವೀರ್ ಎಸೆದ 2ನೇ ಓವರ್‌ನಲ್ಲಿ ಜೈಸ್ವಾಲ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಇದಲ್ಲದೆ ಈ ಓವರ್‌ನಲ್ಲಿ ವೈಡ್ ಜೊತೆಗೆ ಬೌಂಡರಿ ಕೂಡ ಬಂತು.
ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬುಟ್ಸರ್ ಬ್ಯಾಟಿಂಗ್ ಆರಂಭಿಸಿದ್ದಾರೆ. ನವೀನ್ ಉಲ್ ಹಕ್ ಎಸೆದ ಮೊದಲ ಓವರ್‌ನಲ್ಲಿ ಕೇವಲ 2 ರನ್ ಬಂತು.
ಸಂದೀಪ್ ಶರ್ಮಾ ಎಸೆದ 20ನೇ ಓವರ್‌ನಲ್ಲಿ 3 ವಿಕೆಟ್ ಉರುಳಿದವು. ಈ ಓವರ್‌ನಲ್ಲಿ ಒಂದು ಬೌಂಡರಿ ಬಿಟ್ಟರೆ ಮತ್ತೆ ಹೆಚ್ಚಿನ ರನ್ ಬರಲಿಲ್ಲ. ರಾಜಸ್ಥಾನ್ ಬಿಗಿ ಬೌಲಿಂಗ್ ಮುಂದೆ ಲಕ್ನೋ ತಂಡ 7 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು.
ಕಳೆದ 5 ಓವರ್ಗಳಲ್ಲಿ ಯಾವುದೇ ಬೌಂಡರಿ ಬಂದಿರಲಿಲ್ಲ. ಆದರೆ 19ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ 2 ಬೌಂಡರಿ ಬಂದವು. ಆ ನಂತರ 4ನೇ ಎಸೆತದಲ್ಲೂ ಪೂರನ್ ಬೌಂಡರಿ ಹೊಡೆದರು.
14ನೇ ಓವರ್‌ನಲ್ಲಿ 2 ವಿಕೆಟ್ ಉರುಳಿದ ಮೇಲೆ ಲಕ್ನೋ ಇನ್ನಿಂಗ್ಸ್ ನಿಧಾನಗತಿಯಲ್ಲಿ ಸಾಗುತ್ತಿದೆ. ಈಗಾಗಲೇ 17ನೇ ಓವರ್ ಮುಕ್ತಾಯಗೊಂಡಿದ್ದು, ಈ ಮೂರು ಓವರ್ಗಳಲ್ಲಿ ಯಾವುದೇ ಬೌಂಡರಿ ಬಂದಿಲ್ಲ
14ನೇ ಓವರ್‌ನಲ್ಲಿ ದೀಪಕ್ ಹೂಡಾ ವಿಕೆಟ್ ಪಡೆದ ಬಳಿಕ ಇದೀಗ ಸೆಟ್ ಬ್ಯಾಟರ್ ಕೈಲ್ ಮೈಯರ್ಸ್ರನ್ನು ಅಶ್ವಿನ್ ಪೆವಿಲಿಯನ್ಗೆ ವಾಪಸ್ ಕಳುಹಿಸಿದ್ದಾರೆ. ಅರ್ಧಶತಕ ಗಳಿಸಿದ ನಂತರ ಮೈಯರ್ಸ್ ಔಟಾದರು.
ಮೈಯರ್ಸ್ 13ನೇ ಓವರ್‌ನ ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು.
ದೀಪಕ್ ಹೂಡಾ ಮತ್ತೊಮ್ಮೆ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ ಮತ್ತು ಕೇವಲ 2 ರನ್ ಗಳಿಸಿ ಔಟಾದರು. 14ನೇ ಓವರ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಬಲಿಪಶು ಮಾಡಿದರು.
11ನೇ ಓವರ್‌ನಲ್ಲಿ ರಾಹುಲ್ ವಿಕೆಟ್ ಕಳೆದುಕೊಂಡಿದ್ದ ಲಕ್ನೋ, 12ನೇ ಓವರ್‌ನಲ್ಲಿ ಬದೋನಿ ವಿಕೆಟ್ ಕಳೆದುಕೊಂಡಿತು. ರಾಹುಲ್ ವಿಕೆಟ್ ಬಳಿಕ ಬಂದಿದ್ದ ಬದೋನಿ ರ್ಯಾಂಪ್ ಶಾಟ್ ಆಡುವ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು.
ಅಶ್ವಿನ್ ಎಸೆದ 10ನೇ ಓವರ್‌ನಲ್ಲಿ ಯಾವುದೇ ಬಿಗ್ ಶಾಟ್ ಬರಲಿಲ್ಲ. ಆದರೆ ಹೋಲ್ಡರ್ ಎಸೆದ 11ನೇ ಓವರ್‌ನಲ್ಲಿ ಬಿಗ್ ಶಾಟ್ ಹೊಡೆಯಲು ಯತ್ನಿಸಿದ ರಾಹುಲ್ 4ನೇ ಎಸೆತದಲ್ಲಿ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
ಚಹಾಲ್ ಎಸೆದ 9ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಮೇಯರ್ಸ್, 2ನೇ ಎಸೆತವನ್ನು ಬೌಂಡರಿ ಬಾರಿಸಿದರು. ಇನ್ನು 5ನೇ ಎಸೆತದಲ್ಲಿ ರಾಹುಲ್ ಸಿಕ್ಸ್ ಬಾರಿಸಿದರು.
ಹೋಲ್ಡರ್ ಎಸೆದ ಈ ಓವರ್‌ನ 4ನೇ ಎಸೆತವನ್ನು ಮೇಯರ್ಸ್ ಓವರ್ ಮೇಡ್ ಆಫ್ ಕಡೆ ಆಡಿ ಸಿಕ್ಸರ್ ಬಾರಿಸುವುದರೊಂದಿಗೆ ಅರ್ಧಶತಕದ ಜೊತೆಯಾಟ ಪೂರ್ಣಗೊಳಿಸಿದರು. 6ನೇ ಎಸೆತದಲ್ಲಿ ರಾಹುಲ್ ಕೂಡ ಬೌಂಡರಿ ಬಾರಿಸಿದರು.
ರವಿಚಂದ್ರನ್ ಅಶ್ವಿನ್ ಎಸೆದ ಪವರ್ ಪ್ಲೇನ ಓವರ್‌ನ ಐದನೇ ಎಸೆತದಲ್ಲಿ ಕೆಎಲ್ ರಾಹುಲ್ ಬೌಂಡರಿ ಬಾರಿಸಿದರು.
ಪವರ್ ಪ್ಲೇ ಅಂತ್ಯಕ್ಕೆ ಲಕ್ನೋದ ಸ್ಕೋರ್: 37/0
ಮೂರು ಮತ್ತು ನಾಲ್ಕನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ 5ನೇ ಓವರ್‌ನ 2ನೇ ಎಸೆತದಲ್ಲಿ ಮೇಯರ್ಸ್ ಸಿಕ್ಸರ್ ಬಾರಿಸಿದರೆ, 5ನೇ ಎಸೆತದಲ್ಲಿ ರಾಹುಲ್ ಬೌಂಡರಿ ಹೊಡೆದರು.
ಸಂದೀಪ್ ಶರ್ಮಾ ಓವರ್‌ನ ಎರಡನೇ ಎಸೆತದಲ್ಲಿ ಮೇಯರ್ಸ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಾರಿಸಿದರು.
ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮೇಯರ್ಸ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಟ್ರೆಂಟ್ ಬೌಲ್ಟ್ ರಾಜಸ್ಥಾನ್ ಪರ ಬೌಲಿಂಗ್ ಆರಂಭಿಸಿದ್ದು, ಈ ಓವರ್‌ನಲ್ಲಿ ಯಾವುದೇ ರನ್ ಬರಲಿಲ್ಲ.
ಸಂಜು ಸ್ಯಾಮ್ಸನ್ (ನಾಯಕ-ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಜೇಸನ್ ಹೋಲ್ಡರ್, ಧ್ರುವ್ ಜುರೈಲ್, ರವಿಚಂದ್ರನ್ ಅಶ್ವಿನ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್.
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಯುಧವೀರ್ ಸಿಂಗ್, ಅವೇಶ್ ಖಾನ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:01 pm, Wed, 19 April 23