RR vs RCB: ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ ಆರ್​ಸಿಬಿ: ಇಲ್ಲಿದೆ ಎಕ್ಸ್ ರಿಯಾಕ್ಷನ್

|

Updated on: May 23, 2024 | 9:31 AM

RCB vs RR, IPL 2024 Eliminator Troll: ಮೊದಲ ಸೀಸನ್‌ನಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಆರ್​ಸಿಬಿ ಈ ಬಾರಿ ಕೂಡ ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಋತುವಿನಿಂದ ಹೊರಬಿದ್ದ ನಂತರ ಎಕ್ಸ್​ನಲ್ಲಿ ಮೀಮ್‌ಗಳ ಮಹಾಪೂರವೇ ಕಾಣುತ್ತಿದೆ.

RR vs RCB: ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ ಆರ್​ಸಿಬಿ: ಇಲ್ಲಿದೆ ಎಕ್ಸ್ ರಿಯಾಕ್ಷನ್
RCB
Follow us on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಟ್ರೋಫಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಸತತ ಆರು ಗೆಲುವಿನ ನಂತರದ ಒಂದು ಸೋಲು ಫಾಫ್ ಪಡೆಯನ್ನು ಪಂದ್ಯಾವಳಿಯಿಂದ ಹೊರಬೀಳುವಂತೆ ಮಾಡಿತು. ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ್ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸೋಲಿನ ಬೆನ್ನಲ್ಲೇ ಆರ್​ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

ಮೊದಲ ಸೀಸನ್‌ನಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಆರ್​ಸಿಬಿ ಈ ಬಾರಿ ಕೂಡ ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಋತುವಿನಿಂದ ಹೊರಬಿದ್ದ ನಂತರ ಎಕ್ಸ್​ನಲ್ಲಿ ಮೀಮ್‌ಗಳ ಮಹಾಪೂರವೇ ಕಾಣುತ್ತಿದೆ.

ಪೋಸ್ಟ್ ಮ್ಯಾಚ್​ನಲ್ಲಿ ಆರ್​ಸಿಬಿ ಸೋಲಿಗೆ ನಾಯಕ ಡುಪ್ಲೆಸಿಸ್ ದೂರಿದ್ದು ಯಾರನ್ನ?

 

 

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಸಂಜು ಸ್ಯಾಮ್ಸನ್‌ ತಂಡ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್‌ ಕಳುಹಿಸಿತು. ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಅಶ್ವಿನ್ ಬೌಲಿಂಗ್ ನಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ತೋರಿದರು. ಆರ್​ಸಿಬಿ ಪರ ರಜತ್ ಪಾಟಿದರ್ 34, ಕೊಹ್ಲಿ 33 ಹಾಗೂ ಲುಮ್ರೂರ್ 32 ರನ್ ಗಳಿಸಿದರಷ್ಟೆ. ಇದಾದ ಬಳಿಕ ಆರ್​ಆರ್ ತಂಡ 6 ಎಸೆತಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು. ಆರ್​ಆರ್​ ಪರ ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36 ಹಾಗೂ ಶ್ರಿಮ್ರೋನ್ ಹೆಟ್ಮೇರ್ 26 ರನ್ ಸಿಡಿಸಿದರು.

ರವಿಚಂದ್ರನ್ ಅಶ್ವಿನ್ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆಲುವಿನ ಹೀರೋ ಆದರು. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಶ್ವಿನ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್‌ಗಳಿಗೆ 2 ವಿಕೆಟ್ ಪಡೆದರು. ಅವರ ಬಿಗಿ ಬೌಲಿಂಗ್‌ನಿಂದಾಗಿ ಆರ್‌ಸಿಬಿ ತಂಡ ಕೇವಲ 172 ರನ್‌ಗಳ ಸ್ಕೋರ್ ತಲುಪಲು ಸಾಧ್ಯವಾಯಿತು. ಅಶ್ವಿನ್ ಅವರ ಅಮೋಘ ಆಟಕ್ಕಾಗಿ ಪಂದ್ಯಶ್ರೇಷ್ಠರಾಗಿಯೂ ಆಯ್ಕೆಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ