ಶ್ರೀಲಂಕಾಗೆ ತೆರಳದ ಟೀಮ್ ಇಂಡಿಯಾ ಆಟಗಾರ!

India vs Sri Lanka Test: ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಆಗಸ್ಟ್ 23 ರಂದು ಕೊಲಂಬೋದ ಎಸ್‌ಎಸ್‌ಸಿ ಮೈದಾನದಲ್ಲಿ ಜರುಗಲಿದೆ.

ಶ್ರೀಲಂಕಾಗೆ ತೆರಳದ ಟೀಮ್ ಇಂಡಿಯಾ ಆಟಗಾರ!
Team India

Updated on: Aug 05, 2026 | 8:32 AM

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಈಗಾಗಲೇ ಲಂಕಾಗೆ ಪ್ರಯಾಣ ಬೆಳೆಸಿದೆ. ಆದರೆ, ಈ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಯುವ ಬ್ಯಾಟರ್ ಸಾಯಿ ಸುದರ್ಶನ್ ಕಾಣಿಸಿಕೊಂಡಿಲ್ಲ. ಕಾಲಿನ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಭಾರತ ತಂಡದೊಂದಿಗೆ ಪ್ರಯಾಣಿಸದೆ, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲೇ (CoE) ಉಳಿದುಕೊಂಡಿದ್ದಾರೆ.

ಬೆಂಗಳೂರಿನಲ್ಲೇ ಉಳಿದ ಸಾಯಿ!

ಟೆಸ್ಟ್ ತಂಡದ ಉಳಿದ ಆಟಗಾರರು ಮಂಗಳವಾರವೇ (ಆಗಸ್ಟ್ 4) ಕೊಲಂಬೊ ತಲುಪಿದ್ದಾರೆ. ಆದರೆ, ಸಾಯಿ ಸುದರ್ಶನ್ ಮಾತ್ರ ತಂಡದ ಜೊತೆ ಪ್ರಯಾಣಿಸಿಲ್ಲ. ಅವರು ಸದ್ಯ ಬೆಂಗಳೂರಿನ ಸಿಇಒನಲ್ಲಿದ್ದು, ವೈದ್ಯಕೀಯ ಸಿಬ್ಬಂದಿಯ ಉಸ್ತುವಾರಿಯಲ್ಲಿ ರಿಹ್ಯಾಬ್​ ಶಿಬಿರದಲ್ಲಿದ್ದಾರೆ.

ಬ್ಯಾಟಿಂಗ್ ಅಭ್ಯಾಸ ಆರಂಭ:

ಸಾಯಿ ಸುದರ್ಶನ್ ಈಗಾಗಲೇ ನೆಟ್ಸ್‌ನಲ್ಲಿ ಲಘು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಇದಾಗ್ಯೂ ಅವರು ಸಂಪೂರ್ಣ ಫಿಟ್​ ಆಗಿರದ ಕಾರಣ ಅವರನ್ನು ಟೀಮ್ ಇಂಡಿಯಾ ಜೊತೆ ಕಳುಹಿಸಿ ಕೊಡಲಾಗಿಲ್ಲ. ಅಂದರೆ ಸಂಪೂರ್ಣ ಫಿಟ್ ಸರ್ಟಿಫಿಕೇಟ್ ಸಿಕ್ಕರೆ ಮಾತ್ರ ಸಾಯಿ ಸುದರ್ಶನ್​ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಸಾಯಿ ಅಲಭ್ಯರಾದರೆ ಬದಲಿ ಆಟಗಾರ ಯಾರು?

ಶ್ರೀಲಂಕಾ ‘ಎ’ ತಂಡದ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಸತತ ಎರಡು ಶತಕ ಸಿಡಿಸಿದ್ದ ಸಾಯಿ ಸುದರ್ಶನ್, ಭಾರತದ ರೆಡ್-ಬಾಲ್ ಕ್ರಿಕೆಟ್‌ನ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಹೊಸ ಭರವಸೆ ಮೂಡಿಸಿದ್ದಾರೆ.

ಒಂದು ವೇಳೆ ಆಗಸ್ಟ್ 15 ರಿಂದ ಶುರುವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸಾಯಿ ಸುದರ್ಶನ್ ಸಂಪೂರ್ಣ ಫಿಟ್ ಆಗದಿದ್ದರೆ, ಮತ್ತೊಬ್ಬ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತ vs ಶ್ರೀಲಂಕಾ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಮೈದಾನ / ಸ್ಥಳ ಸಮಯ (IST)
ಮೊದಲ ಟೆಸ್ಟ್ ಆಗಸ್ಟ್ 15 – 19, 2026 ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲೆ ಬೆಳಗ್ಗೆ 10:00 ಗಂಟೆಗೆ
ಎರಡನೇ ಟೆಸ್ಟ್ ಆಗಸ್ಟ್ 23 – 27, 2026 ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC), ಕೊಲೊಂಬೊ ಬೆಳಗ್ಗೆ 10:00 ಗಂಟೆಗೆ

ಇದನ್ನೂ ಓದಿ: ಕೋಪದಲ್ಲಿ ಒದ್ದ ಚೆಂಡಿನಿಂದ ಪಂದ್ಯವೇ ಟೈ ಆಯ್ತು!

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

Published On - 8:32 am, Wed, 5 August 26

Loading...
Unable to load recommendations.
Follow Us