AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಪದಲ್ಲಿ ಒದ್ದ ಚೆಂಡಿನಿಂದ ಪಂದ್ಯವೇ ಟೈ ಆಯ್ತು!

New Delhi Tigers vs Outer Delhi Warriors: ದೆಹಲಿಯಲ್ಲಿ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್​ನ 8ನೇ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ಅದು ಸಹ ಕ್ರೇಝಿ ರನೌಟ್​ನೊಂದಿಗೆ. ಅಂದರೆ ಆಟಗಾರ ಕೋಪದಿಂದ ಒದ್ದ ಚೆಂಡು ವಿಕೆಟ್​ಗೆ ಬಡಿದು ಪಂದ್ಯವೇ ಟೈ ಆದ ವಿಚಿತ್ರ ಘಟನೆ ನಡೆದಿದೆ.

ಕೋಪದಲ್ಲಿ ಒದ್ದ ಚೆಂಡಿನಿಂದ ಪಂದ್ಯವೇ ಟೈ ಆಯ್ತು!
DPL 2026Image Credit source: Fancode
ಝಾಹಿರ್ ಯೂಸುಫ್
|

Updated on: Aug 05, 2026 | 8:11 AM

Share

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ರೋಚಕ ಹೋರಾಟಕ್ಕೆ ಡೆಲ್ಲಿ ಪ್ರೀಮಿಯರ್ ಲೀಗ್ ಸಾಕ್ಷಿಯಾಗಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂ ಡೆಲ್ಲಿ ಟೈಗರ್ಸ್ ಮತ್ತು ಔಟರ್ ಡೆಲ್ಲಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮೊದಲು ಬ್ಯಾಟ್ ಮಾಡಿದ ನ್ಯೂ ಡೆಲ್ಲಿ ಟೈಗರ್ಸ್ ತಂಡವು ನಿಗದಿತ 15 ಓವರ್​ಗಳಲ್ಲಿ 155 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡದ ಬ್ಯಾಟರ್​ಗಳು 14 ಓವರ್​ಗಳ ಮುಕ್ತಾಯದ ವೇಳೆಗೆ 147 ರನ್ ಗಳಿಸಿದ್ದರು. ಅದರಂತೆ ಅಂತಿಮ ಓವರ್​ನಲ್ಲಿ ಗೆಲುವಿಗೆ 9 ರನ್​ಗಳ ಅವಶ್ಯಕತೆಯಿತ್ತು.

ಕೊನೆಯ ಓವರ್​ನ ಮೊದಲ 5 ಎಸೆತಗಳಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ 8 ರನ್​ ಕಲೆಹಾಕಿತು. ಅದರಂತೆ ಕೊನೆಯ ಎಸೆತದಲ್ಲಿ ಗೆಲ್ಲಲು 1 ರನ್​ ಬೇಕಿತ್ತು.

ಕ್ರೇಝಿ ರನೌಟ್!

ಲಕ್ಷ್ಮಣ್ ಎಸೆದ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಬ್ಯಾಟರ್ ಪ್ರಥಮ್ ಸಲೂಜಾ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ನ್ಯೂ ಡೆಲ್ಲಿ ಟೈಗರ್ಸ್ ನಾಯಕ ಹಿಮ್ಮತ್ ಸಿಂಗ್ ಓಡಿ ಬಂದು ಚೆಂಡನ್ನು ಹಿಡಿಯಲು ಪ್ರಯತ್ನಿಸಿದರಾದರೂ, ಕೈಯಿಂದ ಚೆಂಡು ಜಾರಿತು.

ಇತ್ತ ಚೆಂಡಿನೊಂದಿಗೆ ಪಂದ್ಯ ಕೂಡ ಕೈತಪ್ಪಿತು ಎಂಬ ತೀವ್ರ ಕೋಪ ಮತ್ತು ಹತಾಶೆಯಿಂದ ಹಿಮ್ಮತ್ ಸಿಂಗ್ ಚೆಂಡನ್ನು ಕಾಲಿನಿಂದ ಬಲವಾಗಿ ಒದ್ದರು.

ಹಿಮ್ಮತ್ ಸಿಂಗ್ ಒದ್ದ ಚೆಂಡು ನೇರವಾಗಿ ಹೋಗಿ ನಾನ್-ಸ್ಟ್ರೈಕರ್ ಎಂಡ್‌ನ ವಿಕೆಟ್‌ಗೆ ಬಡಿಯಿತು! ಈ ವೇಳೆ ಬ್ಯಾಟರ್ ಕ್ರೀಸ್‌ನಿಂದ ಬಹಳ ದೂರವಿದ್ದ ಕಾರಣ ರನ್-ಔಟ್ ಆದರು. ಹತಾಶೆಯ ಈ ಕಿಕ್​ನಿಂದ ಪಂದ್ಯವು ಟೈನಲ್ಲಿ ಅಂತ್ಯಗೊಂಡಿತು.

ಗೆದ್ದಿದ್ದು ಯಾರು?

ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡವು 6 ಎಸೆತಗಳಲ್ಲಿ ಬರೋಬ್ಬರಿ 20 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ನ್ಯೂ ಡೆಲ್ಲಿ ಟೈಗರ್ಸ್ 3 ಎಸೆತಗಳಲ್ಲಿ 6 ರನ್​ ಗಳಿಸಿ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಔಟರ್ ಡೆಲ್ಲಿ ವಾರಿಯರ್ಸ್ ಪಡೆ ಸೂಪರ್ ಓವರ್​ನಲ್ಲಿ ಸೂಪರ್ ಜಯವನ್ನು ತಮ್ಮದಾಗಿಸಿಕೊಂಡರು.

ನ್ಯೂ ಡೆಲ್ಲಿ  ಟೈಗರ್ಸ್ ಪ್ಲೇಯಿಂಗ್ 11: ಶಿವಂ ಗುಪ್ತಾ (ವಿಕೆಟ್ ಕೀಪರ್) ಲಕ್ಷಯ್ ತರೇಜಾ , ವೈಭವ್ ರಾವಲ್ , ಹಿಮ್ಮತ್ ಸಿಂಗ್ (ನಾಯಕ) , ತನುಜ್ ಪವಾರ್ , ಆರ್ಯನ್ ಶರ್ಮಾ , ಹೃತಿಕ್ ಶೋಕೀನ್ , ಮನೀಶ್ ಸೆಹ್ರಾವತ್ , ಯಶ್ಜೀತ್ , ಪ್ರದ್ಯುಮಾನ್ ಸನನ್ , ಲಕ್ಷ್ಮಣ್.

ಇದನ್ನೂ ಓದಿ: ರೋಹಿತ್ ಶರ್ಮಾ ಸೆಂಚುರಿಯಿಂದ ಅಜಿತ್ ಅಗರ್ಕರ್ ಹುದ್ದೆಗೆ ಕುತ್ತು!

ಔಟರ್ ಡೆಲ್ಲಿ ವಾರಿಯರ್ಸ್ ಪ್ಲೇಯಿಂಗ್ 11: ಯಜಸ್ ಶರ್ಮಾ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ , ಅಕ್ಷಯ್ ಸೈನಿ , ಅಮನ್ ಚೌಧರಿ , ಮೋನು ಶುಕ್ಲಾ , ಹರ್ಷ್ ತ್ಯಾಗಿ , ಪ್ರಥಮ್ ಸಲೂಜಾ , ಶಿವಂ ಶರ್ಮಾ , ಸಿದ್ಧಾಂತ್ ಶರ್ಮಾ (ನಾಯಕ) , ಧನ್ಯಾ ನಕ್ರಾ ,ನವದೀಪ್ ಸೈನಿ.

Follow Us
ಬೆಳಗ್ಗೆ 6 ಗಂಟೆಯಿಂದಲೇ ‘ಟಾಕ್ಸಿಕ್’ ಪ್ರದರ್ಶನ ಆರಂಭ; ಜೋರಾಗಿದೆ ಕ್ರೇಜ್
ಬೆಳಗ್ಗೆ 6 ಗಂಟೆಯಿಂದಲೇ ‘ಟಾಕ್ಸಿಕ್’ ಪ್ರದರ್ಶನ ಆರಂಭ; ಜೋರಾಗಿದೆ ಕ್ರೇಜ್
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತೊಂದು ಶಾಕ್!
ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತೊಂದು ಶಾಕ್!
ದೇಶದಲ್ಲಿ ಹೆಚ್ಚಿದ H1N1 ಭೀತಿ: 'ಆತಂಕ ಬೇಡ' ಎಂದ ಯು.ಟಿ. ಖಾದರ್
ದೇಶದಲ್ಲಿ ಹೆಚ್ಚಿದ H1N1 ಭೀತಿ: 'ಆತಂಕ ಬೇಡ' ಎಂದ ಯು.ಟಿ. ಖಾದರ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ