ಏಷ್ಯಾಕಪ್- ವಿಶ್ವಕಪ್​ಗೂ ಮುನ್ನ ಬಾಂಗ್ಲಾ ಏಕದಿನ ತಂಡಕ್ಕೆ ನಾಯಕನ ಆಯ್ಕೆ..!

|

Updated on: Aug 11, 2023 | 3:11 PM

Bangladesh ODI Captain: ಏಷ್ಯಾಕಪ್ ಮತ್ತು 2023ರ ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ತಂಡಕ್ಕೆ ನಾಯಕನ ಆಯ್ಕೆಯಾಗಿದೆ. ತಮೀಮ್ ಇಕ್ಬಾಲ್ ಹಠಾತ್ ನಿವೃತ್ತಿ ನಿರ್ಧಾರದಿಂದ ತೆರವಾಗಿದ್ದ ಬಾಂಗ್ಲಾದೇಶ ಏಕದಿನ ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ ಮತ್ತೆ ಆಯ್ಕೆಯಾಗಿದ್ದಾರೆ.

1 / 7
ಏಷ್ಯಾಕಪ್ ಮತ್ತು 2023ರ ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ತಂಡಕ್ಕೆ ನಾಯಕನ ಆಯ್ಕೆಯಾಗಿದೆ. ತಮೀಮ್ ಇಕ್ಬಾಲ್ ಹಠಾತ್ ನಿವೃತ್ತಿ ನಿರ್ಧಾರದಿಂದ ತೆರವಾಗಿದ್ದ ಬಾಂಗ್ಲಾದೇಶ ಏಕದಿನ ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ ಮತ್ತೆ ಆಯ್ಕೆಯಾಗಿದ್ದಾರೆ.

2 / 7
ಇದೀಗ ಏಕದಿನ ನಾಯಕತ್ವವಹಿಸಿಕೊಂಡಿರುವ ಶಕೀಬ್ ಈ ಮೂಲಕ ಎಲ್ಲಾ ಮೂರು ಸ್ವರೂಪಗಳ ನಾಯಕರಾಗಿದ್ದಾರೆ. ಕಳೆದ ವರ್ಷವೇ ಮತ್ತೊಮ್ಮೆ ಟೆಸ್ಟ್ ಮತ್ತು ಟಿ20 ನಾಯಕತ್ವವನ್ನು ಪಡೆದಿದ್ದ ಶಕೀಬ್ ಇದೀಗ ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ.

3 / 7
ವಾಸ್ತವವಾಗಿ, ಈ ಹಿಂದೆ ಏಕದಿನ ತಂಡದ ನಾಯಕತ್ವವಹಿಸಿಕೊಂಡಿದ ತಮೀಮ್ ಇಕ್ಬಾಲ್ ಅಫ್ಘಾನ್ ವಿರುದ್ಧದ ಏಕದಿನ ಸರಣಿಯಲ್ಲಿ ಹಠಾತ್ ನಿವೃತ್ತಿ ಘೋಷಿಸಿದ್ದರು. ಆದರೆ ಆ ಬಳಿಕ ಪ್ರಧಾನಿ ಅವರ ಸೂಚನೆ ಮೇರೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆದರೆ ಗಾಯದ ಕಾರಣ ಅವರು ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ.

4 / 7
2009 ಮತ್ತು 2011 ರ ನಡುವೆ 49 ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶದ ನಾಯಕರಾಗಿದ್ದ ಶಕೀಬ್, ಕೊನೆಯ ಬಾರಿಗೆ 2017 ರಲ್ಲಿ ಏಕದಿನ ತಂಡದ ನಾಯಕರಾಗಿದ್ದರು.

5 / 7
ಬಿಸಿಬಿ ಈ ವಾರದ ಆರಂಭದಲ್ಲಿ ತುರ್ತು ಸಭೆ ನಡೆಸಿತು ಆದರೆ ಅದರಲ್ಲಿ ನಾಯಕನ ಹೆಸರನ್ನು ನಿರ್ಧರಿಸಲಿಲ್ಲ. ನಾಯಕತ್ವದ ರೇಸ್​ನಲ್ಲಿ ಶಕೀಬ್ ಜೊತೆಗೆ ಲಿಟ್ಟನ್ ದಾಸ್ ಮತ್ತು ಮೆಹಿದಿ ಹಸನ್ ಮಿರಾಜ್ ಕೂಡ ಇದ್ದರು. ಬಿಸಿಬಿ ಅಧ್ಯಕ್ಷ ಹಸನ್ ಅವರ ಒಲವು ಶಕೀಬ್ ಮೇಲೆ ಇದ್ದಿದ್ದರಿಂದ ಅಂತಿಮವಾಗಿ ಇವರಿಗೆ ನಾಯಕತ್ವ ನೀಡಲಾಗಿದೆ.

6 / 7
ಗಾಯದ ಕಾರಣ, ತಮೀಮ್ ಅವರು ಆಗಸ್ಟ್ 30 ರಿಂದ ಪ್ರಾರಂಭವಾಗುವ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದಾರೆ. ಸೆಪ್ಟೆಂಬರ್ 21ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭದ ವೇಳೆಗೆ ಫಿಟ್ ಆಗುವ ಭರವಸೆಯನ್ನು ತಮೀಮ್ ಹೊಂದಿದ್ದಾರೆ. ಇದಾದ ಬಳಿಕ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ.

7 / 7
ಸಂಭಾವ್ಯ ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್, ಮೊಹಮ್ಮದ್ ನಯಿಮ್, ಮಹಮ್ಮದುಲ್ಲಾ, ನಜ್ಮುಲ್ ಹೊಸೈನ್ ಶಾಂಟೋ, ತೌಹಿದ್ ಹೃದಯೋಯ್, ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಇಬಾದತ್ ಹೊಸೈನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್.