ಒಂದು ತಿಂಗಳ ವಿರಾಮದ ನಂತರ ಟೀಂ ಇಂಡಿಯಾ (Team India) ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್‌ನಲ್ಲಿ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು (India vs West Indies) ಎದುರಿಸಲಿದೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ (WTC Final) ಸೋತ ನಂತರ ಇದು ಟೀಂ ಇಂಡಿಯಾದ ಮೊದಲ ಟೆಸ್ಟ್ ಪಂದ್ಯವಾಗಿದೆ. ಕೆರಿಬಿಯನ್ ನಾಡಲ್ಲಿ ರೋಹಿತ್ (Rohit Sharma) ಪಡೆ ಎರಡು ರೆಡ್ ಬಾಲ್ ಪಂದ್ಯಗಳ ಹೊರತಾಗಿ, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಮುಂಬರುವ ಪಂದ್ಯಗಳು ಭಾರತ ತಂಡ ಮತ್ತು ಆಟಗಾರರಿಗೆ ಬಹಳ ನಿರ್ಣಾಯಕವಾಗಿದ್ದು, ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಟೀಂ ಇಂಡಿಯಾ ಏಷ್ಯಾಕಪ್ (Asia Cup) ಹಾಗೂ ಏಕದಿನ ವಿಶ್ವಕಪ್ (ICC ODI World Cup) ಆಡಲಿದೆ. ಹೀಗಾಗಿ ತಂಡದಲ್ಲಿ ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದು ಅವಶ್ಯಕವಾಗಿದೆ. ಈಗಾಗಲೇ ಇಂಜುರಿಯಿಂದಾಗಿ ಹಲವು ಸ್ಟಾರ್ ಆಟಗಾರರು ಕೆಲವು ತಿಂಗಳುಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಇಂಜುರಿಯಿಂದ ಚೇತರಿಸಿಕೊಂಡು ಒಬ್ಬೋಬ್ಬರಾಗಿಯೇ ತಂಡಕ್ಕೆ ಎಂಟ್ರಿಕೊಡಲು ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಅಂತಹವರಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಒಬ್ಬರಾಗಿದ್ದು, 2023ರ ಮಾರ್ಚ್ನಿಂದ ತಂಡದಿಂದ ಹೊರಗುಳಿದಿರುವ 28 ವರ್ಷದ ಅಯ್ಯರ್ ತನ್ನ ತರಬೇತಿಯನ್ನು ಪುನರಾರಂಭಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಯ್ಯರ್ ಅಭ್ಯಾಸದ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್‌ನಲ್ಲಿ ಅಯ್ಯರ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
Good News : ??
Mr ODI #ShreyasIyer is back.. ?
Latest reports have claimed that Shreyas Iyer will be 100% fit for the World Cup. He might play in the Asia Cup as well. pic.twitter.com/s7wnqRcOdq
— ? (@hrathod__) July 11, 2023
WTC Final 2023: ಟೀಂ ಇಂಡಿಯಾದಿಂದ ಸ್ಟಾರ್ ಬ್ಯಾಟರ್ಗೆ ಕೋಕ್! ಶ್ರೇಯಸ್ ಬದಲು ಯಾರಿಗೆ ಸ್ಥಾನ..?
ಇಲ್ಲಿಯವರೆಗೆ ಟೀಂ ಇಂಡಿಯಾ ಪರ ಒಟ್ಟು 42 ಏಕದಿನ ಪಂದ್ಯಗಳನ್ನಾಡಿರುವ ಅಯ್ಯರ್, 46.60 ರ ಸರಾಸರಿಯಲ್ಲಿ 1631 ರನ್ ಕಲೆಹಾಕಿದ್ದಾರೆ. ಅಲ್ಲದೆ ಭಾರತದ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಆಟಗಾರರಾಗಿರುವ ಅಯ್ಯರ್ ಫಿಟ್ ಆದರೆ, ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿರುವ ಅಯ್ಯರ್ ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬುದು ಅಧಿಕೃತವಾಗಿಲ್ಲ. ಆದರೂ ಏಕದಿನ ವಿಶ್ವಕಪ್‌ಗೂ ಮೊದಲು ಅಯ್ಯರ್ ಕೆಲವು ಪಂದ್ಯಗಳನ್ನು ಟೀಂ ಇಂಡಿಯಾ ಪರ ಆಡುವ ಸಾಧ್ಯತೆಗಳಿವೆ. ವೆಸ್ಟ್ ಇಂಡೀಸ್ ವಿರುದ್ಧದ ಎಲ್ಲಾ ಮಾದರಿಯ ಸರಣಿಯ ಹೊರತಾಗಿ, ಭಾರತವು ಆಗಸ್ಟ್‌ನಲ್ಲಿ ಐರ್ಲೆಂಡ್ ತಂಡವನ್ನು ಮೂರು ಟಿ20 ಪಂದ್ಯಗಳಲ್ಲಿ ಎದುರಿಸಲಿದೆ. ನಂತರ ಏಷ್ಯಾಕಪ್‌ನಲ್ಲಿ ಆಡಲಿದೆ. ಆ ಬಳಿಕ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ವದೇಶದಲ್ಲಿ ಏಕದಿನ ಸರಣಿಯನ್ನು ಸಹ ಆಡಲಿದೆ. ಹೀಗಾಗಿ ಮಾರ್ಚ್ ತಿಂಗಳಲ್ಲಿ ಆಸೀಸ್ ವಿರುದ್ಧ ಕೊನೆಯ ಪಂದ್ಯನ್ನಾಡಿದ್ದ ಅಯ್ಯರ್, ವಿಶ್ವಕಪ್‌ಗೂ ಮುನ್ನ ಉಳಿದಿರುವ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ