ದುಲೀಪ್ ಟ್ರೋಫಿ 2022 (Duleep Trophy 2022)ರ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಪಶ್ಚಿಮ ವಲಯ ಮತ್ತು ಈಶಾನ್ಯ ವಲಯ ನಡುವೆ ನಡೆಯುತ್ತಿದೆ. ಪಂದ್ಯದ ನಾಲ್ಕನೇ ದಿನದಂದು ಭೋಜನ ವಿರಾಮದ ವೇಳೆಗೆ ವೆಸ್ಟ್ ಜೋನ್ ತಂಡ 465 ರನ್‌ಗಳ ಮುನ್ನಡೆಯಲ್ಲಿತ್ತು. ಅದಕ್ಕೂ ಮುನ್ನ ಪಶ್ಚಿಮ ವಲಯ 590 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದೇ ವೇಳೆ ಯಶಸ್ವಿ ಜೈಸ್ವಾಲ್ (Yashasvi Jaiswal) ಅದ್ಭುತ ಪ್ರದರ್ಶನ ನೀಡಿ ದ್ವಿಶತಕ ಬಾರಿಸಿದರು. ಇದು ದುಲೀಪ್ ಟ್ರೋಫಿಯಲ್ಲಿ ಅವರ ಮೊದಲ ದ್ವಿಶತಕವಾಗಿದೆ. ಈ ಕುರಿತು ರಾಜಸ್ಥಾನ್ ರಾಯಲ್ಸ್ (Rajasthan Royals) ವಿಶೇಷವಾಗಿ ಟ್ವೀಟ್ ಮಾಡಿದೆ.
ಯಶಸ್ವಿ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಈ ಕಾರಣಕ್ಕಾಗಿ ರಾಜಸ್ಥಾನ ತನ್ನ ದ್ವಿಶತಕದ ವಿಡಿಯೋವನ್ನು ಟ್ವೀಟ್ ಮಾಡಿದೆ. ಇದರಲ್ಲಿ ದ್ವಿಶತಕ ಬಾರಿಸಿರುವ ಜೈಸ್ವಾಲ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿರುವ, ರಾಜಸ್ಥಾನದ ವೀಡಿಯೋ ಜೊತೆಗೆ, “ದುಲೀಪ್ ಟ್ರೋಫಿಯಲ್ಲಿ ಯಶಸ್ವಿ ತಮ್ಮ ಮೊದಲ ದ್ವಿಶತಕ ಗಳಿಸಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದು ಅಭಿನಂದಿಸಿದೆ.
The moment Yashasvi got to his first #DuleepTrophy 200. ?? pic.twitter.com/q4KFbuA7pQ
— Rajasthan Royals (@rajasthanroyals) September 11, 2022
ಪಶ್ಚಿಮ ವಲಯ ಪರ ಆಡುತ್ತಿರುವ ಯಶಸ್ವಿ, ಮೊದಲ ಇನ್ನಿಂಗ್ಸ್‌ನಲ್ಲಿ 321 ಎಸೆತಗಳನ್ನು ಎದುರಿಸಿ 22 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 228 ರನ್ ಗಳಿಸಿದರು. ಜೊತೆಗೆ ನಾಯಕ ಅಜಿಂಕ್ಯ ರಹಾನೆ ದ್ವಿಶತಕದ ನಂತರ ಅಜೇಯರಾಗಿ ಉಳಿದರು. ರಹಾನೆ 264 ಎಸೆತಗಳಲ್ಲಿ 18 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 207 ರನ್ ಗಳಿಸಿದರು. ಶತಕದ ಬಳಿಕ ಔಟಾದ ಪೃಥ್ವಿ ಶಾ ಅವರು 121 ಎಸೆತಗಳಲ್ಲಿ 113 ರನ್ ಗಳಿಸಿದರು.
ರಹಾನೆ ದ್ವಿಶತಕ
ಇಂಜುರಿಯಿಂದ ಚೇತರಿಸಿಕೊಂಡು ಕ್ರಿಕೆಟ್ಗೆ ಪುನರಾಗಮನ ಮಾಡುತ್ತಿರುವ ರಹಾನೆ, ಜೈಸ್ವಾಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 333 ರನ್‌ಗಳ ಬೃಹತ್ ಜೊತೆಯಾಟ ಆಡಿದರು. ನಾಯಕ ತನ್ನ ಚುರುಕಾದ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಹೊಡೆದರೆ, ಜೈಸ್ವಾಲ್ ಅವರ ನಾಕ್‌ನಲ್ಲಿ 22 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು.
ರೊಂಗ್‌ಸೆನ್ ಜೊನಾಥನ್ ಅವರ ಬೌಲಿಂಗ್‌ನಲ್ಲಿ ಜೈಸ್ವಾಲ್ ಕ್ಯಾಚ್ ನೀಡಿದಾಗ ಮ್ಯಾರಥಾನ್ ಸ್ಟ್ಯಾಂಡ್ ಕೊನೆಗೊಂಡಿತು. ಪಂದ್ಯದ ಮುಕ್ತಾಯದ ವೇಳೆಗೆ, ರಾಹುಲ್ ತ್ರಿಪಾಠಿ (25*) ರಹಾನೆಗೆ ಕಂಪನಿ ನೀಡುತ್ತಿದ್ದರು.
ಇದಕ್ಕೂ ಮುನ್ನ ಆರಂಭಿಕ ಆಟಗಾರ ಪೃಥ್ವಿ ಶಾ ಕೂಡ ಶತಕ ಬಾರಿಸಿದ್ದರಿಂದ ಪಶ್ಚಿಮ ವಲಯ ಈಶಾನ್ಯ ವಲಯದ ಬೌಲರ್‌ಗಳನ್ನು ದಂಡಿಸಿತ್ತು. ವಿಕೆಟ್ ನಷ್ಟವಿಲ್ಲದೆ 116 ರನ್‌ಗಳಿಗೆ ದಿನದಾಟವನ್ನು ಪುನರಾರಂಭಿಸಿದ ಶಾ ಮತ್ತು ಯಶಸ್ವಿ ತಂಡದ ಸ್ಕೋರ್ ಅನ್ನು ಸುಲಭವಾಗಿ 200 ರನ್‌ಗಳ ಗಡಿ ದಾಟಿಸಿದರು. ಶಾ 121 ಎಸೆತಗಳಲ್ಲಿ 113 ರನ್ ಗಳಿಸಿದ್ದಾಗ ಅಂಕುರ್ ಮಲಿಕ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ 206 ರನ್‌ಗಳ ಜೊತೆಯಾಟ ಮುರಿದುಬಿತ್ತು. ಅವರ ನಾಕ್ 11 ಬೌಂಡರಿ ಮತ್ತು ಐದು ಸಿಕ್ಸರ್‌ಗಳಿಂದ ಕೂಡಿತ್ತು.
Published On - 3:28 pm, Sun, 11 September 22