ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಝಿಂಬಾಬ್ವೆ (Zimbabwe) ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 27 ರನ್ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾ ತಂಡಕ್ಕೆ ಚರಿತ್ ಅಸಲಂಕಾ ಹಾಗೂ ಏಂಜೆಲೋ ಮ್ಯಾಥ್ಯೂಸ್ ಆಸರೆಯಾದರು. ಐದನೇ ವಿಕೆಟ್ಗೆ 118 ರನ್ಗಳ ಜೊತೆಯಾಟವಾಡಿದರು.
39 ಎಸೆತಗಳನ್ನು ಎದುರಿಸಿದ ಅಸಲಂಕಾ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 69 ರನ್ ಬಾರಿಸಿದರೆ, ಏಂಜೆಲೋ ಮ್ಯಾಥ್ಯೂಸ್ ಅಜೇಯ 66 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಶ್ರೀಲಂಕಾ ತಂಡವು 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
174 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡಕ್ಕೆ ಕ್ರೇಗ್ ಎರ್ವಿನ್ ಅತ್ಯುತ್ತಮ ಆರಂಭ ಒದಗಿಸಿದರು. 54 ಎಸೆತಗಳನ್ನು ಎದುರಿಸಿದ ಕ್ರೇಗ್ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 70 ರನ್ ಬಾರಿಸಿದರು. ಇನ್ನು ಬ್ರಿಯಾನ್ ಬೆನೆಟ್ 25 ರನ್ಗಳನ್ನು ಸಿಡಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದ ಕುಸಿತಕ್ಕೊಳಗಾದ ಝಿಂಬಾಬ್ವೆ ತಂಡಕ್ಕೆ ಕೊನೆಯ ಓವರ್ನಲ್ಲಿ 20 ರನ್ಗಳ ಅವಶ್ಯಕತೆಯಿತ್ತು.
ಏಂಜೆಲೋ ಮ್ಯಾಥ್ಯೂಸ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಲ್ಯೂಕ್ ಜೊಂಗ್ವೆ ಭರ್ಜರಿ ಸಿಕ್ಸ್ ಸಿಡಿಸಿದರು. ಆದರೆ ಇದು ನೋ ಬಾಲ್ ಆಗಿತ್ತು. ಫ್ರೀ ಹಿಟ್ ಎಸೆತದಲ್ಲಿ ಜೊಂಗ್ವೆ ಫೋರ್ ಬಾರಿಸುವಲ್ಲಿ ಯಶಸ್ವಿಯಾದರು. ಇನ್ನು 2ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಬಾರಿಸಿದರು.
ಆದರೆ 3ನೇ ಎಸೆತದಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ. ಪರಿಣಾಮ 3 ಎಸೆತಗಳಲ್ಲಿ 3 ರನ್ ಬೇಕಿತ್ತು. ಈ ಹಂತದಲ್ಲಿ ಜೊಂಗ್ವೆ ನೀಡಿದ ಕ್ಯಾಚ್ ಅನ್ನು ಮಹೀಶ್ ತೀಕ್ಷಣ ಕೈಚೆಲ್ಲಿದರು. ಇತ್ತ ಝಿಂಬಾಬ್ವೆ ತಂಡವು 1 ರನ್ ಕಲೆಹಾಕಿತು.
2 ಎಸೆತಗಳಲ್ಲಿ 2 ರನ್ ಬೇಕಿದ್ದ ವೇಳೆ ಕ್ಲೈವ್ ಮದಂಡೆ ಭರ್ಜರಿ ಸಿಕ್ಸ್ ಬಾರಿಸಿದರು. ಈ ಮೂಲಕ 19.5 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿ ಝಿಂಬಾಬ್ವೆ ತಂಡವು ರೋಚಕ ಜಯ ಸಾಧಿಸಿತು.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಲ್ ಮೆಂಡಿಸ್ ( ವಿಕೆಟ್ ಕೀಪರ್ ) , ಕುಸಲ್ ಪೆರೇರಾ , ಸದೀರ ಸಮರವಿಕ್ರಮ , ಚರಿತ್ ಅಸಲಂಕ , ಏಂಜೆಲೋ ಮ್ಯಾಥ್ಯೂಸ್ , ದಾಸುನ್ ಶನಕ , ವನಿಂದು ಹಸರಂಗ (ನಾಯಕ) , ಮಹೀಶ್ ತೀಕ್ಷಣ , ದುಷ್ಮಂತ ಚಮೀರ , ದಿಲ್ಶನ್ ಮಧುಶಂಕ.
ಇದನ್ನೂ ಓದಿ: Finn Allen: ಬರೋಬ್ಬರಿ 16 ಸಿಕ್ಸ್: ತೂಫಾನ್ ಶತಕ ಸಿಡಿಸಿದ ಫಿನ್ ಅಲೆನ್
ಝಿಂಬಾಬ್ವೆ ಪ್ಲೇಯಿಂಗ್ 11: ಕ್ರೇಗ್ ಎರ್ವಿನ್ , ಟಿನಾಶೆ ಕಮುಂಹುಕಾಮ್ವೆ , ಬ್ರಿಯಾನ್ ಬೆನೆಟ್ , ಸೀನ್ ವಿಲಿಯಮ್ಸ್ , ಸಿಕಂದರ್ ರಾಝ (ನಾಯಕ) , ರಿಯಾನ್ ಬರ್ಲ್ , ಕ್ಲೈವ್ ಮದಂಡೆ ( ವಿಕೆಟ್ ಕೀಪರ್ ) , ಲ್ಯೂಕ್ ಜೊಂಗ್ವೆ , ವೆಲ್ಲಿಂಗ್ಟನ್ ಮಸಕಡ್ಜಾ , ರಿಚರ್ಡ್ ನಾಗರವಾ , ಬ್ಲೆಸ್ಸಿಂಗ್ ಮುಜರಾಬಾನಿ.