ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ (Stuart Binny) ಎಲ್ಲಾ ಮಾದಿರಿಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಮಾಡಿದ್ದ ಬಿನ್ನಿ, “ನಾನು ಪ್ರಥಮ ದರ್ಜೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬಿನ್ನಿ ಅವರು ಭಾರತ ಪರ ಆರು ಟೆಸ್ಟ್ ಪಂದ್ಯ, 14 ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಿದ್ದಾರೆ. 37 ವರ್ಷದ ಬಿನ್ನಿ ಬಿಸಿಸಿಐಗೆ ಮತ್ತು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಹಕರಿಸಿದ ಕರ್ನಾಟಕ ಕ್ರಿಕೆಟ್ಗೆ ಧನ್ಯವಾದ ತಿಳಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಮತ್ತು 1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ರೋಗರ್ ಬಿನ್ನಿ ಅವರ ಮಗ ಸ್ಟುವರ್ಟ್ ಬಿನ್ನಿ ಆಗಿದ್ದಾರೆ.
Former India and Karnataka all-rounder Stuart Binny announces his retirement from all forms of cricket. @DeccanHerald pic.twitter.com/L3EPZ2zTw2
— Madhu Jawali (@MadhuJawali) August 30, 2021
ಟೆಸ್ಟ್ ಕ್ರಿಕೆಟ್ನಲ್ಲಿ ಇವರು 194 ರನ್ ಗಳಿಸಿದ್ದು 3 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 230 ರನ್ ಗಳಿಸಿದ್ದು 20 ವಿಕೆಟ್ ಕಿತ್ತಿದ್ದಾರೆ. ಅಂತೆಯೆ ಟಿ-20 ಕ್ರಿಕೆಟ್ನಲ್ಲಿ 24 ರನ್ ಗಳಿಸಿದ್ದು 1 ವಿಕೆಟ್ ಪಡೆದಿದ್ದಾರೆ.
Published On - 9:58 am, Mon, 30 August 21