
ಬೆಂಗಳೂರು (ಡಿ. 12): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದ ಸೋಲಿನ ನಂತರ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ್ದಾರೆ. ಈ ಸೋಲನ್ನು ಕಲಿಕೆಯ ಪ್ರಕ್ರಿಯೆಯ ಭಾಗ ಎಂದು ಹೇಳಿದ್ದು ತಮ್ಮ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯ ಕೊರತೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ನಾವು ಮೊದಲು ಬೌಲಿಂಗ್ ಮಾಡಿದಾಗ, ನಮಗೆ ಹೆಚ್ಚಿನ ಕೆಲಸವಿರಲಿಲ್ಲ ಎಂದು ಹೇಳಿದರು. ಈ ವಿಕೆಟ್‌ನಲ್ಲಿ ಸರಿಯಾದ ಲೆಂಗ್ತ್‌ನ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೌಲರ್‌ಗಳಿಗೆ ಸಮಯ ಹಿಡಿಯಿತು ಎಂದು ಅವರು ಒಪ್ಪಿಕೊಂಡರು.
“ಹೌದು, ಇದು ಕಲಿಕೆಯ ಪ್ರಕ್ರಿಯೆ. ನಾವು ಕಲಿಯಬೇಕು ಮತ್ತು ಮುಂದುವರಿಯಬೇಕು ಅಷ್ಟೆ. ಸ್ವಲ್ಪ ಇಬ್ಬನಿ ಬಿದ್ದಿತ್ತು, ಮತ್ತು ನಮ್ಮ ಮೊದಲ ಯೋಜನೆ ಕೆಲಸ ಮಾಡದಿದ್ದರೆ, ನಮಗೆ ಎರಡನೇ ಪ್ಲ್ಯಾನ್ ಇರಬೇಕಿತ್ತು, ಆದರೆ ನಾವು ಅದನ್ನು ಅನುಸರಿಸಲಿಲ್ಲ” ಎಂದು ಸೂರ್ಯಕುಮಾರ್ ಹೇಳಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಹೇಗೆ ಬೌಲಿಂಗ್ ಮಾಡಿದರು ಎಂಬುದನ್ನು ತಾವು ನೋಡಿದ್ದೇವೆ, ಈಗ ಅದರಿಂದ ನಾವು ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇವೆ ಎಂದು ಸೂರ್ಯ ಹೇಳಿದರು.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಭಿಷೇಕ್ ಶರ್ಮಾ ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದಿತ್ತು ಎಂದು ನಾಯಕ ಒಪ್ಪಿಕೊಂಡಿದ್ದಾರೆ. “ಗಿಲ್ ಮತ್ತು ನಾನು ಉತ್ತಮ ಆರಂಭ ನೀಡಬೇಕಿತ್ತು, ಏಕೆಂದರೆ ನಾವು ಯಾವಾಗಲೂ ಅಭಿಷೇಕ್ ಅವರನ್ನು ಅವಲಂಬಿಸಲು ಸಾಧ್ಯವಿಲ್ಲ. ನಾನು, ಶುಭ್‌ಮನ್ ಮತ್ತು ಇತರ ಕೆಲವು ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು” ಎಂದು ಹೇಳಿದರು.
Gautam Gambhir: ಅರ್ಶ್ದೀಪ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ್: ಇದು ಕೋಚ್ ಲಕ್ಷಣವೇ?
“ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ದೀರ್ಘ ಸ್ವರೂಪದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿದ್ದೇವೆ. ಇಂದು (ಡಿ. 11) ಅವರು ಅದೇ ರೀತಿಯಲ್ಲಿ ಬ್ಯಾಟಿಂಗ್ ಮಾಡಬೇಕೆಂದು ನಾವು ಬಯಸಿದ್ದೇವೆ. ದುರದೃಷ್ಟವಶಾತ್, ಅದು ಕೆಲಸ ಮಾಡಲಿಲ್ಲ” ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ