ಇಂಗ್ಲೆಂಡ್ನಲ್ಲಿ ನಡೆದ ಟಿ20 ಬ್ಲಾಸ್ಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗ್ಲೌಸೆಸ್ಟರ್ಶೈರ್ ತಂಡ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸೋಮರ್ಸೆಟ್ ಮತ್ತು ಗ್ಲೌಸೆಸ್ಟರ್ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗ್ಲೌಸೆಸ್ಟರ್ಶೈರ್ ತಂಡದ ನಾಯಕ ಜ್ಯಾಕ್ ಟೇಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೋಮರ್ಸೆಟ್ ತಂಡ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಗ್ಲೌಸೆಸ್ಟರ್ಶೈರ್ ಬೌಲರ್ಗಳು ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 41 ರನ್ಗಳು ಮಾತ್ರ. ಅಲ್ಲದೆ 42 ರನ್ಗಳಿಗೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳುಹಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಲೂಯಿಸ್ ಗ್ರೆಗೊರಿ 37 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 53 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಸೋಮರ್ಸೆಟ್ ತಂಡವು 19.4 ಓವರ್ಗಳಲ್ಲಿ 124 ರನ್ ಕಲೆಹಾಕಿ ಆಲೌಟ್ ಆಯಿತು.
120 ಎಸೆತಗಳಲ್ಲಿ 125 ರನ್ಗಳ ಸುಲಭ ಗುರಿ ಪಡೆದ ಗ್ಲೌಸೆಸ್ಟರ್ಶೈರ್ ತಂಡಕ್ಕೆ ಮೈಲ್ಸ್ ಹ್ಯಾಮಂಡ್ ಹಾಗೂ ಕ್ಯಾಮರೋನ್ ಬ್ಯಾಂಕ್ರಾಫ್ಟ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 112 ರನ್ಗಳ ಭರ್ಜರಿ ಜೊತೆಯಾಟವಾಡಿದ ಬಳಿಕ ಬ್ಯಾಂಕ್ರಾಫ್ಟ್ (53) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜೇಮ್ಸ್ ಬ್ರೇಸಿ (2) ಸಹ ಔಟಾದರು.
ಆದರೆ ಮತ್ತೊಂದೆಡೆ 58 ರನ್ಗಳೊಂದಿಗೆ ಅಜೇಯರಾಗಿ ಉಳಿದ ಮೈಲ್ಸ್ ಹ್ಯಾಮಂಡ್ 15 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಗ್ಲೌಸೆಸ್ಟರ್ಶೈರ್ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 2024ರ ಟಿ20 ಬ್ಲಾಸ್ಟ್ ಟೂರ್ನಿಯ ಚಾಂಪಿಯನ್ಸ್ ಎನಿಸಿಕೊಂಡಿದ್ದಾರೆ.
Here’s the moment, @Gloscricket fans 😍
The moment you became Vitality Blast champions for the very first time! pic.twitter.com/HVERp8fWOW
— Vitality Blast (@VitalityBlast) September 14, 2024
ಸೋಮರ್ಸೆಟ್ ಪ್ಲೇಯಿಂಗ್ 11: ಟಾಮ್ ಕೊಹ್ಲರ್-ಕ್ಯಾಡ್ಮೋರ್ , ವಿಲ್ ಸ್ಮೀಡ್ , ಟಾಮ್ ಅಬೆಲ್ , ಜೇಮ್ಸ್ ರೆವ್ (ವಿಕೆಟ್ ಕೀಪರ್) , ಸೀನ್ ಡಿಕ್ಸನ್ , ಲೂಯಿಸ್ ಗ್ರೆಗೊರಿ (ನಾಯಕ) , ಬೆನ್ ಗ್ರೀನ್ , ಕ್ರೇಗ್ ಓವರ್ಟನ್ , ರೋಲೋಫ್ ವ್ಯಾನ್ ಡೆರ್ ಮೆರ್ವೆ , ಜೋಶ್ ಡೇವಿ , ಜೇಕ್ ಬಾಲ್.
ಇದನ್ನೂ ಓದಿ: Virat Kohli: ಕೇವಲ 58 ರನ್ಗಳು… ವಿಶ್ವ ದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ
ಗ್ಲೌಸೆಸ್ಟರ್ಶೈರ್ ಪ್ಲೇಯಿಂಗ್ 11: ಮೈಲ್ಸ್ ಹ್ಯಾಮಂಡ್ , ಕ್ಯಾಮರೋನ್ ಬ್ಯಾಂಕ್ರಾಫ್ಟ್ , ಜೇಮ್ಸ್ ಬ್ರೇಸಿ (ವಿಕೆಟ್ ಕೀಪರ್) , ಆಲಿವರ್ ಪ್ರೈಸ್ , ಜ್ಯಾಕ್ ಟೇಲರ್ (ನಾಯಕ) , ಬೆನ್ ಚಾರ್ಲ್ಸ್ವರ್ತ್ , ಟಾಮ್ ಪ್ರೈಸ್ , ಮ್ಯಾಟ್ ಟೇಲರ್ , ಜೋಶ್ ಶಾ , ಡೇವಿಡ್ ಪೇನ್ , ಟಾಮ್ ಸ್ಮಿತ್.