T20 World Cup 2022: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಮುಂದಿದೆ 2 ಸವಾಲು..!

| Updated By: ಝಾಹಿರ್ ಯೂಸುಫ್

Updated on: Oct 13, 2022 | 10:32 PM

T20 World Cup 2022: ಅಭ್ಯಾಸ ಪಂದ್ಯಗಳಲ್ಲೇ ಮೇಲುಗೈ ಸಾಧಿಸುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.

T20 World Cup 2022: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಮುಂದಿದೆ 2 ಸವಾಲು..!
Team India
Follow us on

T20 World Cup 2022: ಟಿ20 ವಿಶ್ವಕಪ್​ಗಾಗಿ ಭರ್ಜರಿ ಸಿದ್ದತೆಯಲ್ಲಿರುವ ಟೀಮ್ ಇಂಡಿಯಾ (Team India) ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದೆ. ವೆಸ್ಟರ್ನ್​ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ 13 ರನ್​ಗಳಿಸಿದರೆ ಜಯ ಸಾಧಿಸಿದ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ 36 ರನ್​ಗಳಿಂದ ಹೀನಾಯ ಸೋಲನುಭವಿಸಿದೆ. ಇದೀಗ ಈ ಸೋಲಿನೊಂದಿಗೆ ಟೀಮ್ ಇಂಡಿಯಾ ಮುಂದಿನ ಪಂದ್ಯಗಳಿಗೆ ಸಜ್ಜಾಗಬೇಕಿದೆ. ಅಂದರೆ ಭಾರತ ತಂಡವು ಇನ್ನೂ ಎರಡು ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ. ಐಸಿಸಿಯು ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ಪ್ರತಿ ತಂಡಗಳಿಗೆ 2 ಅಭ್ಯಾಸ ಪಂದ್ಯಗಳನ್ನು ನಿಗದಿಪಡಿಸಿದೆ. ಅದರಂತೆ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ.

ಭಾರತ ತಂಡವು ಅಕ್ಟೋಬರ್ 23 ರಂದು ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 17 ರಂದು ಆಸ್ಟ್ರೇಲಿಯಾ ಹಾಗೂ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ದ ಪಂದ್ಯಗಳನ್ನಾಡಬೇಕಿದೆ.

ಈ ಎರಡೂ ತಂಡಗಳು ಟಿ20 ವಿಶ್ವಕಪ್​ನಲ್ಲಿ ಗ್ರೂಪ್-1 ನಲ್ಲಿರುವ ತಂಡಗಳು. ಅಂದರೆ ಟೀಮ್ ಇಂಡಿಯಾ ಗ್ರೂಪ್​-2 ನಲ್ಲಿದ್ದು, ಈ ತಂಡಗಳನ್ನು ಸೂಪರ್-12 ಸುತ್ತಿನಲ್ಲಿ ಎದುರಿಸುವುದಿಲ್ಲ. ಆದರೆ ಈ ತಂಡಗಳು ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾಗೆ ಎದುರಾಗಬಹುದು.

ಇದನ್ನೂ ಓದಿ
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಹೀಗಾಗಿ ಅಭ್ಯಾಸ ಪಂದ್ಯಗಳಲ್ಲೇ ಮೇಲುಗೈ ಸಾಧಿಸುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ಅದರಲ್ಲೂ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಸೋತಿರುವ ಟೀಮ್ ಇಂಡಿಯಾ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ರೂಪಿಸಿಕೊಳ್ಳಲು ಈ ಎರಡು ಅಭ್ಯಾಸ ಪಂದ್ಯಗಳು ಸಹಕಾರಿ. ಹಾಗಾಗಿ ಟೀಮ್ ಇಂಡಿಯಾ ಪಾಲಿಗೆ ಮುಂದಿನ 2 ಅಭ್ಯಾಸ ಪಂದ್ಯಗಳು ಮಹತ್ವ ಪಡೆದುಕೊಂಡಿದೆ.

ಟಿ20 ವಿಶ್ವಕಪ್​ ಗ್ರೂಪ್​ಗಳು ಹೀಗಿವೆ:

ಗ್ರೂಪ್- 1 ತಂಡಗಳು:

  • ಆಸ್ಟ್ರೇಲಿಯಾ
  • ಇಂಗ್ಲೆಂಡ್
  • ನ್ಯೂಜಿಲೆಂಡ್
  • ಅಫ್ಘಾನಿಸ್ತಾನ್
  • ಅರ್ಹತಾ ಸುತ್ತಿನ ಬಿ ಗ್ರೂಪ್​ನ ವಿನ್ನರ್ ತಂಡ
  • ಅರ್ಹತಾ ಸುತ್ತಿನ ಎ ಗ್ರೂಪ್​ನ ರನ್ನರ್ ತಂಡ

ಗ್ರೂಪ್- 2 ತಂಡಗಳು:

  • ಭಾರತ
  • ಪಾಕಿಸ್ತಾನ್
  • ಸೌತ್ ಆಫ್ರಿಕಾ
  • ಬಾಂಗ್ಲಾದೇಶ್
  • ಅರ್ಹತಾ ಸುತ್ತಿನ ಬಿ ಗ್ರೂಪ್​ನ ರನ್ನರ್​ ಅಪ್ ತಂಡ
  • ಅರ್ಹತಾ ಸುತ್ತಿನ ಎ ಗ್ರೂಪ್​ನ ವಿನ್ನರ್​ ತಂಡ

ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:

  • ಅಕ್ಟೋಬರ್-17: ಭಾರತ vs ಆಸ್ಟ್ರೇಲಿಯಾ- ಗಾಬಾ ಸ್ಟೇಡಿಯಂ
  • ಅಕ್ಟೋಬರ್-19: ಭಾರತ vs ನ್ಯೂಜಿಲೆಂಡ್- ಗಾಬಾ ಸ್ಟೇಡಿಯಂ
  • ಅಕ್ಟೋಬರ್-23 : ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
  • ಅಕ್ಟೋಬರ್-27: ಭಾರತ vs ಅರ್ಹತಾ ಸುತ್ತಿನ A ಗ್ರೂಪ್​ನ ರನ್ನರ್​ ಅಪ್ ತಂಡ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ
  • ಅಕ್ಟೋಬರ್- 30: ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ
  • ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್
  • ನವೆಂಬರ್-6: ಭಾರತ vs ಅರ್ಹತಾ ಸುತ್ತಿನ B ಗ್ರೂಪ್​ನ ​ವಿನ್ನರ್ ತಂಡ

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್