ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಟೂರ್ನಿ ಹತ್ತಿರವಾಗುತ್ತಿದ್ದಂತೆ ತಂಡಗಳ ಬಲಾ ಬಲಾದ ಬಗ್ಗೆಯೂ ಚರ್ಚೆ ಜೋರಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೆ ಪಾಕಿಸ್ತಾನ ತಂಡದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ (Abdul Razzaq) ಟೀಮ್ ಇಂಡಿಯಾ (Team India) ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಸದ್ಯ ಇದಕ್ಕೆ ಅವರದೇ ತಂಡದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ (Danish Kaneria) ಖಡಕ್ ತಿರುಗೇಟು ನೀಡಿದ್ದಾರೆ. ‘ಟಿ-20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಎದುರು ಸುಲಭವಾಗಿ ಜಯ ಸಾಧಿಸಬಹುದು. ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರನ್ನು ಔಟ್ ಮಾಡಿದರೆ ಸಾಕು, ಭಾರತ ತಂಡದ ಉಳಿದವರನ್ನು ಔಟ್ ಮಾಡುವುದು ಬಹಳಾ ಸುಲಭ’ ಎಂದು ರಜಾಕ್ ಹೇಳಿದ್ದರು. ಸದ್ಯ ಇದಕ್ಕೆ ಕನೇರಿಯಾ, ಬಲಿಷ್ಠ ಟೀಮ್ ಇಂಡಿಯಾಗೆ ಪಾಕ್ ತಂಡ ಸಾಟಿಯಾಗದು ಎಂದು ಹೇಳಿದ್ದಾರೆ. ‘ರಜಾಕ್ ಹೇಳಿದ ಮಾತು ನಾನ್ಸೆನ್, ಮಿಂಚಿನ ವೇಗದಲ್ಲಿರುವ ಭಾರತದ ಈ ತಂಡವನ್ನು ನಿಮ್ಮಿಂದ ಹಿಡಿಯಲು ಸಾಧ್ಯವೆ? ವಿಶ್ವಕಪ್ಗೆ ಆಯ್ಕೆ ಮಾಡಲಾಗಿರುವ ಪಾಕಿಸ್ತಾನ ತಂಡದಲ್ಲೇ ಹಲವು ಗೊಂದಲಗಳಿವೆ’ ಎಂದು ಕನೇರಿಯಾ ಸರಿಗಾಗಿ ಚಾಟಿ ಬೀಸಿದ್ದಾರೆ.
ರಜಾಕ್ಗೆ ನೇರವಾಗಿ ಒಂದಿಷ್ಟು ಪ್ರಶ್ನೆಗಳನ್ನು ಎಸೆದಿರುವ ಕನೇರಿಯಾ, “ಪಾಕ್ ತಂಡದ ಬ್ಯಾಟಿಂಗ್ ಬಗ್ಗೆ ಹೇಳಿ. ಮ್ಯಾಚ್ ಗೆದ್ದುಕೊಡುವವರು ಯಾರು? ಇಂಗ್ಲೆಂಡ್ನ ‘ಬಿ’ ತಂಡ ನಮ್ಮನ್ನು ಸೋಲಿಸಿದೆ. ತಂಡದ ಆಯ್ಕೆಯಂತೂ ನಾಚಿಗೆಗೇಡು. ಹೀಗಿರುವಾಗ ಇಂತಹ ಕಳಪೆ ಹೇಳಿಕೆ ಕೊಡುವ ಅಗತ್ಯವಿತ್ತೆ? ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ನಿಮ್ಮಂತ ಆಟಗಾರರಿಂದ ಇಂತಹ ಹೇಳಿಕೆ ತರವಲ್ಲ” ಎಂದು ಕೇಳಿದ್ದಾರೆ.
ಇತ್ತೀಚೆಗಷ್ಟೆ ಪಾಕಿಸ್ತಾನ ತಂಡಕ್ಕೆ ಮಾಜಿ ವೇಗಿ ಉಮರ್ ಗುಲ್ ಕೂಡ ಟೀಮ್ ಇಂಡಿಯಾದ ಕೀ ಬ್ಯಾಟ್ಸ್ಮನ್ಗಳಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಅವರನ್ನು ಆದಷ್ಟು ಬೇಗ ಔಟ್ ಮಾಡಬೇಕು. ಆಗ ಪಂದ್ಯವನ್ನು ಸುಲಭವಾಗಿ ತಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದು ಎಂದು ಹೇಳಿದ್ದರು.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 24ರಂದು ಮುಖಾಮುಖಿಯಾಗುವ ಮೂಲಕ 2021ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಅಭಿಯಾನವನ್ನು ಆರಂಭಿಸಲಿವೆ. ಅಂದಹಾಗೆ 2019ರ ಏಕದಿನ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿ ಉಭಯ ತಂಡಗಳು ಕಾದಾಟ ನಡೆಸಲಿವೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯದ ಟಿಕೆಟ್ಗಳು ಈಗಾಗಲೇ ಸೋಲ್ಡ್ ಔಟಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳ ಈ ಹೈವೋಲ್ಟೇಜ್ ಕಾದಾಟವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
Dominic Drakes: ಸಿಎಸ್ಕೆ ಮಾಸ್ಟರ್ ಪ್ಲಾನ್: ಕೊನೇಯ ಹಂತದಲ್ಲಿ ಧೋನಿ ತಂಡಕ್ಕೆ ಬಂದ ಅಪಾಯಕಾರಿ ಆಲ್ರೌಂಡರ್
Umran Malik: ಬುಮ್ರಾ, ಶಮಿಗೂ ಆಗಲಿಲ್ಲ: ತನ್ನ 2ನೇ ಪಂದ್ಯದಲ್ಲೇ ಐಪಿಎಲ್ನಲ್ಲಿ ದಾಖಲೆ ಬರೆದ ಉಮ್ರಾನ್ ಮಲಿಕ್
(Danish Kaneria has slammed former Pakistan all-rounder Abdul Razzaq for his statement)
Published On - 11:58 am, Thu, 7 October 21