Umran Malik: ಬುಮ್ರಾ, ಶಮಿಗೂ ಆಗಲಿಲ್ಲ: ತನ್ನ 2ನೇ ಪಂದ್ಯದಲ್ಲೇ ಐಪಿಎಲ್ನಲ್ಲಿ ದಾಖಲೆ ಬರೆದ ಉಮ್ರಾನ್ ಮಲಿಕ್
Fastest Ball in IPL 2021: ಬುಧವಾರ ಅಬುಧಾಬಿಯಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡದ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್ನಿಂದ ಗಮನ ಸೆಳೆದರು. ಈ ಪಂದ್ಯದಲ್ಲಿ ಅವರು ಎಸೆದ ಒಂದು ಚೆಂಡು ಗಂಟೆಗೆ 153 ಕಿಮೀ ವೇಗದಲ್ಲಿ ಚಿಮ್ಮಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2021) ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (RCB vs SRH) ತಂಡ 4 ರನ್ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಎಸ್ಆರ್ಹೆಚ್ (Sunrisers Hyderabad) ತಂಡದ ಯುವ ವೇಗಿ ಉಮ್ರಾನ್ ಮಲಿಕ್ (Umran Malik). 4 ಓವರ್ ಬೌಲಿಂಗ್ ಮಾಡಿದ ಇವರು ಕೇವಲ 21 ರನ್ ನೀಡಿ 1 ವಿಕೆಟ್ ಕಿತ್ತರು. ಅಷ್ಟೇ ಅಲ್ಲದೆ ಐಪಿಎಲ್ 2021 ರಲ್ಲಿ ಹೊಸ ದಾಖಲೆಯನ್ನೂ ಬರೆದರು. ಅದು ಅಂತಿಂತಾ ದಾಖಲೆಯಲ್ಲ. ಟೀಮ್ ಇಂಡಿಯಾದ (Team India) ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ (Jasprit Bumrah), ಮೊಹಮ್ಮದ್ ಶಮಿ (Mohammed Shami) ಸೇರಿದಂತೆ ಈ ಬಾರಿಯ ಐಪಿಎಲ್ನಲ್ಲಿ ಯಾರಿಂದಲೂ ಆಗದ ವಿಶೇಷ ದಾಖಲೆ. ಐಪಿಎಲ್ನಲ್ಲಿ ಅತಿ ವೇಗದ ಎಸೆತ ಹಾಕಿದ ಆಟಗಾರ ಎಂಬ ದಾಖಲೆಯನ್ನು ಉಮ್ರಾನ್ ಬರೆದಿದ್ದಾರೆ.
ಹೌದು, ಯುಎಇಯ ಪಿಚ್ಗಳು ನಿಧಾನಗತಿಯಿಂದ ಕೂಡಿವೆ. ವೇಗದ ಬೌಲರ್ಸ್ಗೆ ಹೇಳಿ ಮಾಡಿಸಿದ ಪಿಚ್ಗಳೇನಲ್ಲ. ಆದರೂ ಕೆಲ ಬೌಲರ್ಗಳು ತಮ್ಮ ಅಸಾಧಾರಣ ಬೌಲಿಂಗ್ ಸ್ಪೀಡ್ನಿಂದ ಗಮನ ಸೆಳೆದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಉದಯೋನ್ಮುಖ ವೇಗದ ಪ್ರತಿಭೆ ಉಮ್ರಾನ್ ಮಲಿಕ್ ಅವರು ಐಪಿಎಲ್ನಲ್ಲಿ ಅತಿ ವೇಗದ ಎಸೆತ ಹಾಕಿದ ದಾಖಲೆ ಬರೆದಿದ್ದಾರೆ.
umran malik Bowling Speed 147,151,152,153,152, 146#1st #wicket for J&K Express Umran Malik in IPL – #umranmalik #IPL2021 #SunrisersHyderabad #jammuandkashmir #umran@IrfanPathan@IPL @SunRisers @OfficeOfLGJandK @listenshahid @hussain_imtiyaz pic.twitter.com/R2xFBnpnNq
— Syed Kamran Ali (@Sayedkamran_jk) October 6, 2021
ಬುಧವಾರ ಅಬುಧಾಬಿಯಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್ನಿಂದ ಗಮನ ಸೆಳೆದರು. ಈ ಪಂದ್ಯದಲ್ಲಿ ಅವರು ಎಸೆದ ಒಂದು ಚೆಂಡು ಗಂಟೆಗೆ 153 ಕಿಮೀ ವೇಗದಲ್ಲಿ ಚಿಮ್ಮಿತ್ತು. ಇದು ಬೌಲರ್ವೊಬ್ಬ ಈ ಐಪಿಎಲ್ನಲ್ಲಿ ಎಸೆದ ಫಾಸ್ಟೆಸ್ಟ್ ಬಾಲ್ ಎನಿಸಿದೆ. ಅಲ್ಲದೆ ಅತಿ ವೇಗವಾಗಿ ಚೆಂಡನ್ನು ಎಸೆದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್ನ ವೇಗದ ಬೌಲರ್ ಲಾಕೀ ಫರ್ಗ್ಯೂಸನ್ ಅವರು ಒಂದು ಪಂದ್ಯದಲ್ಲಿ 152.75 ಕಿಮೀ ವೇಗದಲ್ಲಿ ಬಾಲ್ ಎಸೆದರು. ಅದು ಈ ಐಪಿಎಲ್ನಲ್ಲಿ ಎಸೆದ ಎರಡನೇ ಫಾಸ್ಟೆಸ್ಟ್ ಬಾಲ್ ಎನಿಸಿದೆ. ಮೂರನೇ ಸ್ಥಾನದಲ್ಲೂ ಲಾಕೀ ಫರ್ಗ್ಯೂಸನ್ ಅವರೇ ಇದ್ದು 152.74 ಆಗಿದೆ. ಸದ್ಯ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಮ್ಮು ಕಾಶ್ಮೀರದ 21 ವರ್ಷದ ಉಮ್ರಾನ್ ಮಲಿಕ್ ಅವರು ಹೊಸ ದಾಖಲೆಯನ್ನ ತಮ್ಮ ಹೆಸರಿಗೆ ಬರೆದಿದ್ದಾರೆ.
ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಜೊತೆ ಉಮ್ರಾನ್ ಮಲಿಕ್ ಮಾತುಕತೆ ನಡೆಸಿದರು. ಅಲ್ಲದೆ ಕೊಹ್ಲಿಯಿಂದ ತಮ್ಮ ಜೆರ್ಸಿಯಲ್ಲಿ ಆಟೋಗ್ರಾಫ್ ಕೂಡ ಪಡೆದುಕೊಂಡರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗಿ ತಂಗರಸು ನಟರಾಜನ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಚರಣ ಆರಂಭವಾದ ಬಳಿಕ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಅವರು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾದಾಗ ನಟರಾಜನ್ ಬದಲಾಗಿ ಜಮ್ಮು ಮತ್ತು ಕಾಶ್ಮೀರದ 21 ವರ್ಷ ಹರೆಯದ ಯುವ ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡ ಆಯ್ಕೆ ಮಾಡಿಕೊಂಡಿತು.
ಉಮ್ರಾನ್ ಮಲಿಕ್ ಅವರನ್ನು ತಾತ್ಕಾಲಿಕ ಬದಲಿ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ( ಅಕ್ಟೋಬರ್ 3 ) ದುಬೈ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಸದ್ಯ ಇವರು ತಮ್ಮ ಬೆಂಕಿ ಬೌಲಿಂಗ್ ಮೂಲಕ ಹವಾ ಎಬ್ಬಿಸಿದ್ದು ಮುಂದಿನ ಐಪಿಎಲ್ ದೊಡ್ಡ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವುದು ಖಚಿತ.
Virat Kohli: ಎಸ್ಆರ್ಹೆಚ್ ವಿರುದ್ಧ ಸೋಲು: ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ದೂರಿದ್ದು ಯಾರನ್ನ ಗೊತ್ತಾ?
IPL 2021, KKR vs RR: ಕೋಲ್ಕತ್ತಾ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರ: ಕುತೂಹಲ ಕೆರಳಿಸಿದ ಕೆಕೆಆರ್-ಆರ್ಆರ್ ಪಂದ್ಯ
(Umran Malik create a new record in RCB vs SRH Match He bowls the fastest ball in IPL 2021)