AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Danish Kaneria: ಮಿಂಚಿನ ವೇಗದಲ್ಲಿರುವ ಟೀಮ್ ಇಂಡಿಯಾವನ್ನು ಪಾಕ್​ಗೆ ಸೋಲಿಸಲು ಸಾಧ್ಯವೇ?: ದಾನಿಶ್ ಕನೇರಿಯಾ

ರಜಾಕ್​ಗೆ ನೇರವಾಗಿ ಒಂದಿಷ್ಟು ಪ್ರಶ್ನೆಗಳನ್ನು ಎಸೆದಿರುವ ಕನೇರಿಯಾ, ಮಿಂಚಿನ ವೇಗದಲ್ಲಿರುವ ಭಾರತದ ಈ ತಂಡವನ್ನು ನಿಮ್ಮಿಂದ ಹಿಡಿಯಲು ಸಾಧ್ಯವೆ? ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿರುವ ಪಾಕಿಸ್ತಾನ ತಂಡದಲ್ಲೇ ಹಲವು ಗೊಂದಲಗಳಿವೆ' ಎಂದು ಚಾಟಿ ಬೀಸಿದ್ದಾರೆ.

Danish Kaneria: ಮಿಂಚಿನ ವೇಗದಲ್ಲಿರುವ ಟೀಮ್ ಇಂಡಿಯಾವನ್ನು ಪಾಕ್​ಗೆ ಸೋಲಿಸಲು ಸಾಧ್ಯವೇ?: ದಾನಿಶ್ ಕನೇರಿಯಾ
Danish Kaneria
TV9 Web
| Updated By: Vinay Bhat|

Updated on:Oct 07, 2021 | 11:59 AM

Share

ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಟೂರ್ನಿ ಹತ್ತಿರವಾಗುತ್ತಿದ್ದಂತೆ ತಂಡಗಳ ಬಲಾ ಬಲಾದ ಬಗ್ಗೆಯೂ ಚರ್ಚೆ ಜೋರಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೆ ಪಾಕಿಸ್ತಾನ ತಂಡದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ (Abdul Razzaq) ಟೀಮ್ ಇಂಡಿಯಾ (Team India) ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಸದ್ಯ ಇದಕ್ಕೆ ಅವರದೇ ತಂಡದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ (Danish Kaneria) ಖಡಕ್ ತಿರುಗೇಟು ನೀಡಿದ್ದಾರೆ. ‘ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಎದುರು ಸುಲಭವಾಗಿ ಜಯ ಸಾಧಿಸಬಹುದು. ವಿರಾಟ್‌ ಕೊಹ್ಲಿ (Virat Kohli) ಮತ್ತು ರೋಹಿತ್‌ ಶರ್ಮಾ (Rohit Sharma) ಅವರನ್ನು ಔಟ್‌ ಮಾಡಿದರೆ ಸಾಕು, ಭಾರತ ತಂಡದ ಉಳಿದವರನ್ನು ಔಟ್ ಮಾಡುವುದು ಬಹಳಾ ಸುಲಭ’ ಎಂದು ರಜಾಕ್ ಹೇಳಿದ್ದರು. ಸದ್ಯ ಇದಕ್ಕೆ ಕನೇರಿಯಾ, ಬಲಿಷ್ಠ ಟೀಮ್ ಇಂಡಿಯಾಗೆ ಪಾಕ್‌ ತಂಡ ಸಾಟಿಯಾಗದು ಎಂದು ಹೇಳಿದ್ದಾರೆ. ‘ರಜಾಕ್ ಹೇಳಿದ ಮಾತು ನಾನ್ಸೆನ್, ಮಿಂಚಿನ ವೇಗದಲ್ಲಿರುವ ಭಾರತದ ಈ ತಂಡವನ್ನು ನಿಮ್ಮಿಂದ ಹಿಡಿಯಲು ಸಾಧ್ಯವೆ? ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿರುವ ಪಾಕಿಸ್ತಾನ ತಂಡದಲ್ಲೇ ಹಲವು ಗೊಂದಲಗಳಿವೆ’ ಎಂದು ಕನೇರಿಯಾ ಸರಿಗಾಗಿ ಚಾಟಿ ಬೀಸಿದ್ದಾರೆ.

ರಜಾಕ್​ಗೆ ನೇರವಾಗಿ ಒಂದಿಷ್ಟು ಪ್ರಶ್ನೆಗಳನ್ನು ಎಸೆದಿರುವ ಕನೇರಿಯಾ, “ಪಾಕ್‌ ತಂಡದ ಬ್ಯಾಟಿಂಗ್‌ ಬಗ್ಗೆ ಹೇಳಿ. ಮ್ಯಾಚ್‌ ಗೆದ್ದುಕೊಡುವವರು ಯಾರು? ಇಂಗ್ಲೆಂಡ್‌ನ ‘ಬಿ’ ತಂಡ ನಮ್ಮನ್ನು ಸೋಲಿಸಿದೆ. ತಂಡದ ಆಯ್ಕೆಯಂತೂ ನಾಚಿಗೆಗೇಡು. ಹೀಗಿರುವಾಗ ಇಂತಹ ಕಳಪೆ ಹೇಳಿಕೆ ಕೊಡುವ ಅಗತ್ಯವಿತ್ತೆ? ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ನಿಮ್ಮಂತ ಆಟಗಾರರಿಂದ ಇಂತಹ ಹೇಳಿಕೆ ತರವಲ್ಲ” ಎಂದು ಕೇಳಿದ್ದಾರೆ.

ಇತ್ತೀಚೆಗಷ್ಟೆ ಪಾಕಿಸ್ತಾನ ತಂಡಕ್ಕೆ ಮಾಜಿ ವೇಗಿ ಉಮರ್‌ ಗುಲ್‌ ಕೂಡ ಟೀಮ್‌ ಇಂಡಿಯಾದ ಕೀ ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್‌ ಶರ್ಮಾ ಅವರನ್ನು ಆದಷ್ಟು ಬೇಗ ಔಟ್‌ ಮಾಡಬೇಕು. ಆಗ ಪಂದ್ಯವನ್ನು ಸುಲಭವಾಗಿ ತಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದು ಎಂದು ಹೇಳಿದ್ದರು.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್‌ 24ರಂದು ಮುಖಾಮುಖಿಯಾಗುವ ಮೂಲಕ 2021ರ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ ಅಭಿಯಾನವನ್ನು ಆರಂಭಿಸಲಿವೆ. ಅಂದಹಾಗೆ 2019ರ ಏಕದಿನ ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿ ಉಭಯ ತಂಡಗಳು ಕಾದಾಟ ನಡೆಸಲಿವೆ. ದುಬೈ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ ಔಟಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳ ಈ ಹೈವೋಲ್ಟೇಜ್‌ ಕಾದಾಟವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Dominic Drakes: ಸಿಎಸ್​ಕೆ ಮಾಸ್ಟರ್ ಪ್ಲಾನ್: ಕೊನೇಯ ಹಂತದಲ್ಲಿ ಧೋನಿ ತಂಡಕ್ಕೆ ಬಂದ ಅಪಾಯಕಾರಿ ಆಲ್ರೌಂಡರ್

Umran Malik: ಬುಮ್ರಾ, ಶಮಿಗೂ ಆಗಲಿಲ್ಲ: ತನ್ನ 2ನೇ ಪಂದ್ಯದಲ್ಲೇ ಐಪಿಎಲ್​ನಲ್ಲಿ ದಾಖಲೆ ಬರೆದ ಉಮ್ರಾನ್ ಮಲಿಕ್

(Danish Kaneria has slammed former Pakistan all-rounder Abdul Razzaq for his statement)

Published On - 11:58 am, Thu, 7 October 21

ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ