AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs PBKS, IPL 2021: ಚೆನ್ನೈ ಕಿಂಗ್ಸ್​​ಗೆ ಸೋಲುಣಿಸಿದ ಪಂಜಾಬ್ ಕಿಂಗ್ಸ್

Chennai Super Kings vs Punjab Kings: ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಪಂಜಾಬ್ ಕಿಂಗ್ಸ್ ತಂಡ 10 ಪಂದ್ಯಗಳನ್ನು ಗೆದ್ದುಕೊಂಡಿದೆ.

CSK vs PBKS, IPL 2021: ಚೆನ್ನೈ ಕಿಂಗ್ಸ್​​ಗೆ ಸೋಲುಣಿಸಿದ ಪಂಜಾಬ್ ಕಿಂಗ್ಸ್
CSK vs PBKS
TV9 Web
| Edited By: |

Updated on:Oct 07, 2021 | 6:57 PM

Share

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 53ನೇ ಪಂದ್ಯದಲ್ಲಿ ಎಂ. ಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (CSK vs PBKS) ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ಫಾಫ್ ಡುಪ್ಲೆಸಿಸ್​ (76) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿದೆ. ಈ ಸಾಧಾರಣ ಸವಾಲು ಬೆನ್ನತ್ತಿದ ಪಂಜಾಬ್​ಗೆ ಕೆಎಲ್ ರಾಹುಲ್ ಭರ್ಜರಿ ಆರಂಭ ಒದಗಿಸಿದರು. ಅಲ್ಲದೆ ಕೇವಲ 42 ಎಸೆತಗಳಲ್ಲಿ ಅಜೇಯ 98 ರನ್ ಬಾರಿಸುವ ಮೂಲಕ ಕೆಎಲ್ ರಾಹುಲ್ 13 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 139 ಪೇರಿಸುವ ಮೂಲಕ ಭರ್ಜರಿ ಜಯ ತಂದುಕೊಟ್ಟರು.

CSK 134/6 (20)

PBKS 139/4 (13)

ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಪಂಜಾಬ್ ಕಿಂಗ್ಸ್ ತಂಡ 10 ಪಂದ್ಯಗಳನ್ನು ಗೆದ್ದುಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡನ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

LIVE NEWS & UPDATES

The liveblog has ended.
  • 07 Oct 2021 06:57 PM (IST)

    ಪ್ಲೇಯರ್ ಆಫ್ ದಿ ಮ್ಯಾಚ್- ಕೆಎಲ್ ರಾಹುಲ್

    CSK 134/6 (20)

    PBKS 139/4 (13)

  • 07 Oct 2021 06:56 PM (IST)

    ಪಂಜಾಬ್ ಪರ ರಾಹುಲ್ ಅಜೇಯ 98 ರನ್

  • 07 Oct 2021 06:47 PM (IST)

    ಪಂಜಾಬ್ ಕಿಂಗ್ಸ್​ಗೆ 6 ವಿಕೆಟ್​ಗಳ ಭರ್ಜರಿ ಜಯ

    CSK 134/6 (20)

    PBKS 139/4 (13)

     

  • 07 Oct 2021 06:47 PM (IST)

    ಮಿಸ್ ಫೀಲ್ಡ್​

    ಬ್ರಾವೊ ಮಿಸ್ ಫೀಲ್ಡಿಂಗ್…ಕೆಎಲ್ ರಾಹುಲ್ ಬ್ಯಾಟ್​ನಿಂದ ಫೋರ್

  • 07 Oct 2021 06:43 PM (IST)

    ಮಾರ್ಕ್ರಮ್ ಔಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಮ್ (13)

    PBKS 126/4 (12.1)

  • 07 Oct 2021 06:42 PM (IST)

    ಕ್ರೀಸ್​ನಲ್ಲಿ ರಾಹುಲ್-ಮಾರ್ಕ್ರಮ್ ಬ್ಯಾಟಿಂಗ್

    CSK 134/6 (20)

    PBKS 126/3 (12)

  • 07 Oct 2021 06:39 PM (IST)

    ರಾಹುಲ್ ಭರ್ಜರಿ ಬ್ಯಾಟಿಂಗ್

    ಬ್ರಾವೊ ಓವರ್​ನಲ್ಲಿ ಮತ್ತೊಂದು ಸಿಕ್ಸ್​…ಈ ಬಾರಿ ಸ್ಟ್ರೈಟ್ ಹಿಟ್​ ಮೂಲಕ ಸಿಕ್ಸ್ ಸಿಡಿಸಿದ ರಾಹುಲ್

  • 07 Oct 2021 06:38 PM (IST)

    ರಾಹುಲ್​-ರಾಕಿಂಗ್

    ಬ್ರಾವೊ ಎಸೆತದಲ್ಲಿ ಬ್ಯೂಟಿಫುಲ್​ ಶಾಟ್..ರಾಹುಲ್ ಬ್ಯಾಟ್​ನಿಂದ ಮತ್ತೊಂದು ಸಿಕ್ಸ್

    PBKS 115/3 (11.2)

      

  • 07 Oct 2021 06:32 PM (IST)

    ಕೆಎಲ್ ಕ್ಲಾಸ್

    ದೀಪಕ್ ಚಹರ್ ಎಸೆತದಲ್ಲಿ ಸ್ಟ್ರೈಟ್ ಸೂಪರ್ ಹಿಟ್​…ಚೆಂಡು ಸ್ಟೇಡಿಯಂನಲ್ಲಿ…ಕೆಎಲ್ ರಾಹುಲ್ ಬ್ಯಾಟ್​ನಿಂದ ಬ್ಯೂಟಿಫುಲ್ ಸಿಕ್ಸ್

    PBKS 100/3 (10.2)

      

  • 07 Oct 2021 06:29 PM (IST)

    10 ಓವರ್ ಮುಕ್ತಾಯ

    PBKS 92/3 (10)

    ಕ್ರೀಸ್​ನಲ್ಲಿ ರಾಹುಲ್-ಮಾರ್ಕ್ರಮ್ ಬ್ಯಾಟಿಂಗ್

  • 07 Oct 2021 06:28 PM (IST)

    ಮಾರ್ಕ್ರಮ್ ಮಾರ್ಕ್​

    ಬ್ರಾವೊ ಎಸೆತಕ್ಕೆ ಡೀಪ್ ಮಿಡ್​ ವಿಕೆಟ್​ನತ್ತ ಬಾರಿಸಿದ ಮಾರ್ಕ್ರಮ್…ಸಿಕ್ಸ್

  • 07 Oct 2021 06:22 PM (IST)

    ಶಾರುಖ್ ಔಟ್

    ಚಹರ್ ಎಸೆತದಲ್ಲಿ ಬಿಗ್​ ಹಿಟ್​ಗೆ ಯತ್ನ… ಬ್ರಾವೊಗೆ ಕ್ಯಾಚ್ ನೀಡಿದ ಶಾರುಖ್ ಖಾನ್ (8)

    PBKS 80/3 (9)

      

  • 07 Oct 2021 06:20 PM (IST)

    ರಾಜಾಹುಲಿ-ರಾಹುಲ್

    ವಾಟ್ ಎ ಶಾಟ್…ದೀಪಕ್ ಚಹರ್ ಎಸೆತಕ್ಕೆ ವಿಕೆಟ್ ಬಿಟ್ಟು ಸ್ವೀಪ್ ಶಾಟ್ ಸಿಕ್ಸ್​ ಸಿಡಿಸಿದ ರಾಹುಲ್

  • 07 Oct 2021 06:15 PM (IST)

    ಕಿಂಗ್ ಖಾನ್ ಹಿಟ್

    ಜಡೇಜಾ ಎಸೆತಕ್ಕೆ ಶಾರುಖ್ ಖಾನ್ ಪವರ್​ಫುಲ್ ಶಾಟ್…ಚೆಂಡು ಸ್ಟೇಡಿಯಂನತ್ತ… ಸಿಕ್ಸ್

  • 07 Oct 2021 06:13 PM (IST)

    ಅರ್ಧಶತಕ ಪೂರೈಸಿದ ರಾಹುಲ್

    25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್

  • 07 Oct 2021 06:12 PM (IST)

    7 ಓವರ್​ ಮುಕ್ತಾಯ

    PBKS 62/2 (7)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್-ಶಾರುಖ್ ಖಾನ್ ಬ್ಯಾಟಿಂಗ್

  • 07 Oct 2021 06:11 PM (IST)

    ಮತ್ತೊಂದು ಬೌಂಡರಿ

    ರಾಹುಲ್ ಬ್ಯಾಟ್​ನಿಂದ ಆಫ್ ​ಸೈಡ್​ನತ್ತ ಆಕರ್ಷಕ ಬೌಂಡರಿ

    PBKS 61/2 (6.5)

      

  • 07 Oct 2021 06:10 PM (IST)

    ರಾಹುಲ್ ಆರ್ಭಟ

    ಶಾರ್ದೂಲ್ ಎಸೆತಕ್ಕೆ ಲೆಗ್​ ಸೈಡ್​ನತ್ತ ಭರ್ಜರಿ ಹೊಡೆತ ಬಾರಿಸಿದ ಕೆಎಲ್ ರಾಹುಲ್…ಸಿಕ್ಸ್

  • 07 Oct 2021 06:08 PM (IST)

    ಪವರ್​ಪ್ಲೇ ಮುಕ್ತಾಯ

    PBKS 51/2 (6)

      

    ಕ್ರೀಸ್​ನಲ್ಲಿ ಕೆಎಲ್ ರಾಹುಲ್-ಶಾರುಖ್ ಖಾನ್ ಬ್ಯಾಟಿಂಗ್

  • 07 Oct 2021 06:04 PM (IST)

    ಅರ್ಧಶತಕ ಪೂರೈಸಿದ ಪಂಜಾಬ್ ಕಿಂಗ್ಸ್​

    ಹ್ಯಾಝಲ್​ವುಡ್​ ಎಸೆತಕ್ಕೆ ಕವರ್ಸ್​ನತ್ತ ಭರ್ಜರಿ ಹೊಡೆತ…ಕೆಎಲ್ ರಾಹುಲ್ ಬ್ಯಾಟ್​ನಿಂದ ಬೌಂಡರಿ

  • 07 Oct 2021 06:02 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    ಶಾರ್ದೂಲ್​ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಸರ್ಫರಾಜ್ ಖಾನ್ (0)

    PBKS 46/2 (5)

     

  • 07 Oct 2021 06:00 PM (IST)

    ಮಯಾಂಕ್ ಔಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಮಯಾಂಕ್ ಅಗರ್ವಾಲ್

    PBKS 46/1 (4.3)

     

  • 07 Oct 2021 05:58 PM (IST)

    ಮಯಾಂಕ್ ಫೋರ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಥರ್ಡ್​ಮ್ಯಾನ್​ನತ್ತ ಬೌಂಡರಿ ಬಾರಿಸಿದ ಮಯಾಂಕ್

    PBKS 46/0 (4.1)

     

  • 07 Oct 2021 05:56 PM (IST)

    ವಾವ್ಹ್…ವಾಟ್ ಎ ಶಾಟ್

    ಕೆಎಲ್ ರಾಹುಲ್ ಅಬ್ಬರ…ಹ್ಯಾಝಲ್​ವುಡ್​ ಎಸೆತಕ್ಕೆ ಲೆಗ್​ ಸೈಡ್​ನತ್ತ ಸೂಪರ್ ಶಾಟ್…ಚೆಂಡು ಸ್ಟೇಡಿಯಂನಲ್ಲಿ…ಸಿಕ್ಸ್

  • 07 Oct 2021 05:54 PM (IST)

    ಸ್ಟ್ರೈಲಿಷ್ಟ್ ಬ್ಯಾಟಿಂಗ್

    ಹ್ಯಾಝಲ್​ವುಡ್ ಎಸೆತದಕ್ಕೆ ಸೂಪರ್ ಆಗಿ ಸ್ಟ್ರೈಟ್​ ಹಿಟ್ ಮೂಲಕ ಫೋರ್ ಬಾರಿಸಿದ ರಾಹುಲ್

  • 07 Oct 2021 05:51 PM (IST)

    3 ಓವರ್ ಮುಕ್ತಾಯ

    PBKS 27/0 (3)

     

  • 07 Oct 2021 05:49 PM (IST)

    ಕೆಎಲ್ ಕ್ಲಾಸಿಕ್

    ದೀಪಕ್ ಚಹರ್ ಎಸೆತದಲ್ಲಿ ಕೆಎಲ್​ ರಾಹುಲ್ ಭರ್ಜರಿ ಹಿಟ್​…ಸಿಕ್ಸ್

  • 07 Oct 2021 05:46 PM (IST)

    2 ಓವರ್ ಮುಕ್ತಾಯ

    PBKS 13/0 (2)

     

  • 07 Oct 2021 05:43 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ದೀಪಕ್ ಚಹರ್  ಮೊದಲ ಓವರ್​ನಲ್ಲಿ ಎರಡು ಬೌಂಡರಿ ಬಾರಿಸಿದ ಕೆಎಲ್ ರಾಹುಲ್

    PBKS 11/0 (1)

     

  • 07 Oct 2021 05:37 PM (IST)

    ಮೊದಲ ಓವರ್

    ಬೌಲಿಂಗ್: ದೀಪಕ್ ಚಹರ್

    ಆರಂಭಿಕರು: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್

  • 07 Oct 2021 05:28 PM (IST)

    ಪಂಜಾಬ್ ಕಿಂಗ್ಸ್​ಗೆ 135 ರನ್​ಗಳ ಟಾರ್ಗೆಟ್

  • 07 Oct 2021 05:24 PM (IST)

    CSK ಪರ ಡುಪ್ಲೆಸಿಸ್​ 76 ರನ್

  • 07 Oct 2021 05:19 PM (IST)

    ಸಿಎಸ್​ಕೆ ಇನಿಂಗ್ಸ್​ ಅಂತ್ಯ

    CSK 134/6 (20)

      

  • 07 Oct 2021 05:19 PM (IST)

    ಬ್ರಾವೊ ಹಿಟ್​

    ಶಮಿ ಎಸೆತದಲ್ಲಿ ಕವರ್ಸ್​​ನತ್ತ ಬಿಗ್ ಹಿಟ್​….ಬ್ರಾವೊ ಬ್ಯಾಟ್​ನಿಂದ ಫೋರ್

  • 07 Oct 2021 05:15 PM (IST)

    ಡುಪ್ಲೆಸಿಸ್​ ಔಟ್

    ಶಮಿ ಎಸೆತದಲ್ಲಿ ಕೀಪರ್​ ಹಿಡಿದ ಸುಲಭ ಕ್ಯಾಚ್​ಗೆ ಡುಪ್ಲೆಸಿಸ್ (76)​ ಔಟ್

    CSK 128/6 (19.3)

      

  • 07 Oct 2021 05:14 PM (IST)

    ಡುಪ್ಲೆ-ಸಿಕ್ಸ್​ಕ್ಸ್​ಕ್ಸ್​

    ಶಮಿ ಎಸೆತದಲ್ಲಿ ಡುಪ್ಲೆಸಿಸ್​ ಸ್ಟ್ರೈಟ್ ಹಿಟ್​…ಸಿಕ್ಸ್

  • 07 Oct 2021 05:14 PM (IST)

    ಕೊನೆಯ ಓವರ್

    ಶಮಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಡುಪ್ಲೆಸಿಸ್ ಭರ್ಜರಿ ಹೊಡೆತ…ಫೋರ್

    CSK 122/5 (19.1)

      

  • 07 Oct 2021 05:11 PM (IST)

    ಡುಪ್ಲೆ-ಸಿಕ್ಸ್

    ಅರ್ಷದೀಪ್ ಸಿಂಗ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್​ ಸ್ಟ್ರೈಟ್​ ಬಿಗ್ ಹಿಟ್….ಭರ್ಜರಿ ಸಿಕ್ಸ್​

    CSK 117/5 (18.5)

      

  • 07 Oct 2021 05:05 PM (IST)

    ರಾಕೆಟ್ ಶಾಟ್

    ಕ್ರಿಸ್ ಜೋರ್ಡನ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫಾಫ್ ಡುಪ್ಲೆಸಿಸ್​ ಸೂಪರ್ ಶಾಟ್…ಫೋರ್

    ಕೊನೆಯ ಎಸೆತದಲ್ಲಿ ಸ್ಟ್ರೈಟ್​ ಹಿಟ್​…ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡುಪ್ಲೆಸಿಸ್

    CSK 108/5 (18)

      

  • 07 Oct 2021 05:04 PM (IST)

    ಅರ್ಧಶತಕ ಪೂರೈಸಿದ ಫಾಫ್ ಡುಪ್ಲೆಸಿಸ್

    46 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಫಾಫ್ ಡುಪ್ಲೆಸಿಸ್

  • 07 Oct 2021 04:57 PM (IST)

    ವೆಲ್ಕಂ ಬೌಂಡರಿ

    ಅರ್ಷದೀಪ್ ಎಸೆತದಲ್ಲಿ ಡುಪ್ಲೆಸಿಸ್​ ಬ್ಯಾಟ್ ಎಡ್ಜ್​…ಫೋರ್

    CSK 93/5 (16.3)

      

  • 07 Oct 2021 04:50 PM (IST)

    CSK 86/5 (16)

    ಕ್ರೀಸ್​ನಲ್ಲಿ ರವೀಂದ್ರ ಜಡೇಜಾ-ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

  • 07 Oct 2021 04:47 PM (IST)

    15 ಓವರ್ ಮುಕ್ತಾಯ

    CSK 82/5 (15)

      

    ಕ್ರೀಸ್​ನಲ್ಲಿ ರವೀಂದ್ರ ಜಡೇಜಾ-ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

  • 07 Oct 2021 04:42 PM (IST)

    CSK 75/5 (14)

    ಕ್ರೀಸ್​ನಲ್ಲಿ ಜಡೇಜಾ-ಡುಪ್ಲೆಸಿಸ್​ ಬ್ಯಾಟಿಂಗ್

  • 07 Oct 2021 04:41 PM (IST)

    ಜಡ್ಡು ಹಿಟ್​

    ಹೆನ್ರಿಕ್ಸ್ ಎಸೆತದಲ್ಲಿ ಸೂಪರ್ ಪ್ಲೇಸ್​ಮೆಂಟ್​…ಜಡೇಜಾ ಬ್ಯಾಟ್​ನಿಂದ ಬೌಂಡರಿ

  • 07 Oct 2021 04:33 PM (IST)

    ಧೋನಿ ಬೌಲ್ಡ್

    ರವಿ ಬಿಷ್ಣೋಯ್ ಗೂಗ್ಲಿ…ಧೋನಿ (12) ಬ್ಯಾಟ್ ಎಡ್ಜ್​…ಬೌಲ್ಡ್

    CSK 61/5 (12)

      

  • 07 Oct 2021 04:31 PM (IST)

    ವಾಟ್ ಎ ಶಾಟ್

    ಬಿಷ್ಣೋಯ್ ಎಸೆತದಲ್ಲಿ ಕವರ್ಸ್​ನತ್ತ ಧೋನಿ ಪವರ್​ಫುಲ್ ಶಾಟ್…ಫೋರ್

    CSK 59/4 (11.3)

      

  • 07 Oct 2021 04:25 PM (IST)

    10 ಓವರ್ ಮುಕ್ತಾಯ

    CSK 53/4 (10)

      

  • 07 Oct 2021 04:25 PM (IST)

    ಡುಡುಡು-ಪ್ಲೆಸಿಸ್

    ಬಿಷ್ಣೋಯ್ ಎಸೆತದಲ್ಲಿ ಡುಪ್ಲೆಸಿಸ್​ ಆರ್ಕಷಕ ಬೌಂಡರಿ

    50 ರನ್ ಪೂರೈಸಿದ ಸಿಎಸ್​ಕೆ

  • 07 Oct 2021 04:23 PM (IST)

    ಧೋನಿ ಶಾಟ್

    ರವಿ ಬಿಷ್ಣೋಯ್ ಎಸೆತದಲ್ಲಿ ಆಫ್​ ಸೈಡ್​ನತ್ತ ಬೌಂಡರಿ ಬಾರಿಸಿದ ಮಹೇಂದ್ರ ಸಿಂಗ್ ಧೋನಿ

    CSK 48/4 (9.2)

      

  • 07 Oct 2021 04:16 PM (IST)

    ರಾಯುಡು ಔಟ್

    ಕ್ರಿಸ್ ಜೋರ್ಡನ್ ಎಸೆತದಲ್ಲಿ ರಾಯುಡು ಆಫ್​ಸೈಡ್​ನತ್ತ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಅರ್ಷದೀಪ್ ಸಿಂಗ್ ಉತ್ತಮ ಕ್ಯಾಚ್…ಅಂಬಾಟಿ ರಾಯುಡು ಔಟ್

    CSK 42/4 (8.3)

      

  • 07 Oct 2021 04:13 PM (IST)

    8 ಓವರ್ ಮುಕ್ತಾಯ

    CSK 39/3 (8)

      

    ಕ್ರೀಸ್​ನಲ್ಲಿ ಅಂಬಟಿ ರಾಯುಡು-ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

  • 07 Oct 2021 04:07 PM (IST)

    ಸ್ಟನ್ನಿಂಗ್ ಕ್ಯಾಚ್: ರಾಬಿನ್ ಉತ್ತಪ್ಪ ಔಟ್

    ಕ್ರಿಸ್ ಜೋರ್ಡನ್ ಎಸೆತದಲ್ಲಿ ರಾಬಿನ್ ಉತ್ತಪ್ಪ ಭರ್ಜರಿ ಹೊಡೆತ…ಬೌಂಡರಿ ಲೈನ್​​ನಿಂದ ಓಡಿ ಬಂದು ಅದ್ಭುತವಾಗಿ ಕ್ಯಾಚ್ ಹಿಡಿದ ಹರ್ಪ್ರೀತ್ ಬ್ರಾರ್

    CSK 32/3 (6.5)

     

  • 07 Oct 2021 04:03 PM (IST)

    ಪವರ್​ಪ್ಲೇ ಮುಕ್ತಾಯ: ಪಂಜಾಬ್ ಭರ್ಜರಿ ಬೌಲಿಂಗ್

    ಮೊದಲ 6 ಓವರ್​ನಲ್ಲಿ ಕೇವಲ 30 ರನ್​ ನೀಡಿ 2 ವಿಕೆಟ್ ಪಡೆದ ಪಂಜಾಬ್ ಬೌಲರುಗಳು

    CSK 30/2 (6)

     

  • 07 Oct 2021 04:00 PM (IST)

    ಮೊಯೀನ್ ಅಲಿ ಔಟ್

    ಅರ್ಷದೀಪ್ ಸಿಂಗ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಮೊಯೀನ್ ಅಲಿ (0)

  • 07 Oct 2021 03:59 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಅರ್ಷದೀಪ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಫಾಫ್​ ಡುಪ್ಲೆಸಿಸ್

    CSK 28/1 (5.2)

     

  • 07 Oct 2021 03:49 PM (IST)

    CSK 19/1 (4)

    ಕ್ರೀಸ್​ನಲ್ಲಿ ಮೊಯೀನ್ ಅಲಿ-ಫಾಪ್ ಡುಪ್ಲೆಸಿಸ್​ ಬ್ಯಾಟಿಂಗ್

  • 07 Oct 2021 03:48 PM (IST)

    ರುತುರಾಜ್ ಔಟ್

    ಅರ್ಷದೀಪ್ ಎಸೆತದಲ್ಲಿ ಶಾರೂಖ್ ಖಾನ್​ಗೆ ಸುಲಭ ಕ್ಯಾಚ್ ನೀಡಿದ ರುತುರಾಜ್ ಗಾಯಕ್ವಾಡ್ (12)

  • 07 Oct 2021 03:43 PM (IST)

    3 ಓವರ್ ಮುಕ್ತಾಯ

    CSK 13/0 (3)

     

    ಕ್ರೀಸ್​ನಲ್ಲಿ ರುತುರಾಜ್-ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

  • 07 Oct 2021 03:39 PM (IST)

    ಕ್ರೀಸ್​ನಲ್ಲಿ ರುತುರಾಜ್-ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

    CSK 11/0 (2)

     

  • 07 Oct 2021 03:36 PM (IST)

    ಮೊದಲ ಬೌಂಡರಿ

    ಹರ್ಪ್ರೀತ್ ಬ್ರಾರ್ ಎಸೆತದಲ್ಲಿ ರುತುರಾಜ್ ಬಿಗ್ ಹಿಟ್​…ಮಿಡ್ ವಿಕೆಟ್​ನತ್ತ ಬೌಂಡರಿ…ಫೋರ್

  • 07 Oct 2021 03:35 PM (IST)

    ಮೊದಲ ಓವರ್ ಮುಕ್ತಾಯ

    CSK 3/0 (1)

     

  • 07 Oct 2021 03:33 PM (IST)

    ಮೊದಲ ಓವರ್

    ಬೌಲಿಂಗ್: ಮೊಹಮ್ಮದ್ ಶಮಿ

    ಆರಂಭಿಕರು: ರುತುರಾಜ್ ಗಾಯಕ್ವಾಡ್-ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

  • 07 Oct 2021 03:13 PM (IST)

    ಕಣಕ್ಕಿಳಿಯುವ ಕಲಿಗಳು

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

    ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡನ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

  • 07 Oct 2021 03:09 PM (IST)

    ಟಾಸ್ ವಿಡಿಯೋ

  • 07 Oct 2021 03:06 PM (IST)

    ಉಭಯ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

    ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡನ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್

  • 07 Oct 2021 03:02 PM (IST)

    ಟಾಸ್ ಗೆದ್ದ ಪಂಜಾಬ್ ಕಿಂಗ್ಸ್: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Published On - Oct 07,2021 2:59 PM

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್