Virat Kohli: ಎಸ್ಆರ್ಹೆಚ್ ವಿರುದ್ಧ ಸೋಲು: ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ದೂರಿದ್ದು ಯಾರನ್ನ ಗೊತ್ತಾ?
RCB vs SRH, IPL 2021: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದಲ್ಲಿ ಸೋಲು ಕಂಡ ಬಳಿಕ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾತನ್ನು ಹಂಚಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) ಬುಧವಾರದ ಪಂದ್ಯದಲ್ಲಿ ದಾಖಲೆಯ ಸೋಲುಗಳನ್ನು ಕಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs SRH) ತಂಡ ಸೋಲು ಅನುಭವಿಸಿತು. ಕೊನೇಯ ಎಸೆತದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ (Kane Williamson) ಪಡೆ 4 ರನ್ಗಳ ಗೆಲುವು ಪಡೆದುಕೊಂಡರೆ, ವಿರಾಟ್ ಕೊಹ್ಲಿ (Virat Kohli) ಪಡೆಯ ಅಗ್ರಸ್ಥಾನ ಪಡೆಯುವ ಬಯಕ್ಕೆ ಈಡೇರಲಿಲ್ಲ. ಆರ್ಸಿಬಿ (Royal Challengers Bangalore) ಗೆಲುವಿಗಾಗಿ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಎಬಿ ಡಿವಿಲಿಯರ್ಸ್ಗೆ (AB de Villiers) ಕೂಡ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಆರ್ಸಿಬಿ ನಾಯಕ (RCB Captain) ವಿರಾಟ್ ಕೊಹ್ಲಿ ಮಾತನಾಡಿದ್ದು ಸೋಲಿಗೆ ಪ್ರಮುಖ ಕಾರಣವನ್ನು ವಿವರಿಸಿದ್ದಾರೆ.
“ನಮಗೆ ಸಿಕ್ಕ ಟಾರ್ಗೆಟ್ ದೊಡ್ಡ ಮಟ್ಟದ್ದು ಅಲ್ಲದಾಗಿದ್ದರೂ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ನಾವು ಆರಂಭದಲ್ಲೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು. ಹೀಗಾಗಿ ಉತ್ತಮವಾಗಿ ಇನ್ನಿಂಗ್ಸ್ ಬೆಳೆಸಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ರನೌಟ್ ಆಗಿದ್ದು ಪಂದ್ಯದ ಗತಿಯನ್ನು ಬದಲಾಯಿಸಿತು, ಇದು ಟರ್ನಿಂಗ್ ಪಾಯಿಂಟ್ ಆಯಿತು” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
“ಎಬಿ ಡಿವಿಲಿಯರ್ಸ್ ಯಾವಾಗಲೂ ಪಂದ್ಯದಿಂದ ಹೊರಗಿರುವುದಿಲ್ಲ, ಅವರ ಗಮನ ಸಂಪೂರ್ಣ ಆಟದ ಮೇಲೆ ಇರುತ್ತದೆ. ಆದರೆ ಸರಾಗವಾಗಿ ಆಡುತ್ತಿರುವ ಆಟಗಾರನಿಗೆ ಸ್ಟ್ರೈಕ್ ಬಿಟ್ಟುಕೊಡಲು ನಿರ್ಧರಿಸಿದರು. ಅದರಿಂದಾಗಿ ರನ್ ಬೆನ್ನಟ್ಟುವುದಕ್ಕೆ ಪರಿಣಾಮ ಬೀರುವುದಿಲ್ಲ. ಈ ಹಂತದಲ್ಲಿ ಶಹ್ಬಾಜ್ ಅಹ್ಮದ್ ನಿರ್ಣಾಯಕ ಆಟವನ್ನು ಪ್ರದರ್ಶಿಸಿದರು. ಇದೊಂದು ಸಣ್ಣ ಅಂತರದ ಪಂದ್ಯವಾಗಿತ್ತು. ಈ ಸಂದರ್ಭದಲ್ಲಿ ಸನ್‌ರೈಸರ್ಸ್ ಮೈಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಅಂತಿಮ ಹಂತದಲ್ಲಿ ಅವರು ಕೆಲ ಎಸೆತಗಳನ್ನು ಅದ್ಭುತವಾಗಿ ಎಸೆದರು. ಈ ಮೂಲಕ ನಮಗೆ ಅವಕಾಶವನ್ನೇ ನೀಡಲಿಲ್ಲ” ಎಂದು ಪಂದ್ಯ ಮುಗಿದ ಬಳಿಕ ಕೊಹ್ಲಿ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಐಪಿಎಲ್ 2021 ರಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿ ದಾಖಲೆ ಬರೆದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್ ಪ್ರದರ್ಶನದ ಬಗ್ಗೆಯೂ ವಿರಾಟ್ ಕೊಹ್ಲಿ ಪ್ರಶಂಸೆಯ ಮಾತುಗಳನ್ನಾಡಿದರು. ಆತ ಅದ್ಭುತವಾಗಿ ಬೌಲಿಂಗ್ ಮಾಡುವುದನ್ನು ನಾನು ಬಯಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಇನ್ನೂ ಎಸ್ಆರ್ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ, “ಇದು ನಮಗೆ ಅತ್ಯಂತ ಕಷ್ಟದ ಸೀಸನ್ ಆಗಿತ್ತು. ಆದರೆ, ಕೆಲವೊಂದು ವಿಚಾರಗಳಲ್ಲಿ ಸುಧಾರಿಸಿರುವುದು ಸಂತಸ ತಂದಿದೆ. ನಾವು ನೀಡಿದ ಟಾರ್ಗೆಟ್ ಸವಾಲಿನದ್ದಾಗಿತ್ತು. ಎದುರಾಳಿಗೆ ಬೌಲ್ ಮೂಲಕ ಇನ್ನಷ್ಟು ಪ್ರೆಶರ್ ನೀಡಲು ಮುಂದಾದೆವು. ಪವರ್ ಪ್ಲೇನಲ್ಲಿ ಆದಷ್ಟು ಎದುರಾಳಿಯನ್ನು ಕಟ್ಟಿಹಾಕಲು ಯೋಜನೆ ಹಾಕಿಕೊಂಡೆವು ಮತ್ತು ಅದು ಯಶಸ್ವಿಯಾಯಿತು” ಎಂದು ಕೇನ್ ಹೇಳಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಗಿ ಸೊಲು ಕಂಡಿತು. ಈ ಮೂಲಕ ಆರ್ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದೆ.
IPL 2021, KKR vs RR: ಕೋಲ್ಕತ್ತಾ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರ: ಕುತೂಹಲ ಕೆರಳಿಸಿದ ಕೆಕೆಆರ್-ಆರ್ಆರ್ ಪಂದ್ಯ
IPL 2021, CSK vs PBKS: ಚೆನ್ನೈ-ಪಂಜಾಬ್ಗೆ ಲೀಗ್ ಹಂತದ ಕೊನೇಯ ಪಂದ್ಯ: ಗೆದ್ದೇ ಬಿಡುತ್ತಾ ರಾಹುಲ್ ಪಡೆ?
(Virat Kohli told After RCB vs SRH IPl 2021 Match Glenn Maxwell run out was the game changing moment)