IPL 2021, CSK vs PBKS: ಚೆನ್ನೈ-ಪಂಜಾಬ್​ಗೆ ಲೀಗ್ ಹಂತದ ಕೊನೇಯ ಪಂದ್ಯ: ಗೆದ್ದೇ ಬಿಡುತ್ತಾ ರಾಹುಲ್ ಪಡೆ?

Chennai vs Punjab, IPL 2021: ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಮತ್ತು ಪಂಜಾಬ್ ಕಿಂಗ್ಸ್ ತಂಡ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021, CSK vs PBKS: ಚೆನ್ನೈ-ಪಂಜಾಬ್​ಗೆ ಲೀಗ್ ಹಂತದ ಕೊನೇಯ ಪಂದ್ಯ: ಗೆದ್ದೇ ಬಿಡುತ್ತಾ ರಾಹುಲ್ ಪಡೆ?
CSK vs PBKS

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2021) ಎರಡು ಪಂದ್ಯಗಳು ನಡೆಯಲಿವೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30ಕ್ಕೆ ಶುರುವಾಗಲಿರುವ 53ನೇ ಪಂದ್ಯದಲ್ಲಿ ಎಂ. ಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (CSK vs PBKS) ತಂಡಗಳು ಮುಖಾಮುಖಿ ಆಗಲಿವೆ. ಅಲ್ಲದೆ ಉಭಯ ತಂಡಗಳಿಗೆ ಇದು ಲೀಗ್ ಹಂತದ ಕೊನೇಯ ಪಂದ್ಯವಾಗಿದೆ. ಪಂಜಾಬ್ ಪ್ಲೇ ಆಫ್ (Playoffs) ಕನಸು ಬಹುತೇಕ ಕಮರಿ ಹೋಗಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಕಂಡರಷ್ಟೆ ಸಾಲದು ಇತರೆ ತಂಡಗಳ ಫಲಿತಾಂಶದ ಮೇಲೆ ಕಿಂಗ್ಸ್ ತಂಡದ ಪ್ಲೇ ಆಫ್ ಭವಿಷ್ಯ ನಿಂತಿದೆ. ಇತ್ತ ಸಿಎಸ್​ಕೆ ಸ್ಥಿತಿ ಸುಗಮವಾಗಿದ್ದು, ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ.

ಚೆನ್ನೈ ತಂಡ ಈವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದ್ದು 10 ಪಂದ್ಯಗಳಲ್ಲಿ ಗೆದ್ದಿದೆ. ಮೂರು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 18 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.739 ನೆಟ್​ರೇಟ್​ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡ ಈವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆಲುವು ಕಂಡಿದೆ. ಎಂಟು ಪಂದ್ಯಗಳಲ್ಲಿ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.241 ನೆಟ್​ರೇಟ್​ನೊಂದಿಗೆ ಆರನೇ ಸ್ಥಾನದಲ್ಲಿದೆ.

ಚೆನ್ನೈ ಆಲ್ರೌಂಡರ್ ಪ್ರದರ್ಶನ ನೀಡುತ್ತಿದೆ. ಆರಂಭಿಕ ರುತುರಾಜ್ ಗಾಯಕ್ವಾಡ್ ಅಬ್ಬರಿಸುತ್ತಿದ್ದಾರೆ. ಫಾಫ್ ಡು ಪ್ಲೆಸಿಸ್ ಪ್ರತಿ ಪಂದ್ಯದಲ್ಲಿ ಸ್ಫೋಟಕ ಆರಂಭ ಒದಗಿಸಸುತ್ತಿದ್ದಾರೆ. ಸುರೇಶ್ ರೈನಾಗೆ ಇನ್ನೊಂದು ಪಂದ್ಯ ವಿಶ್ರಾಂತಿ ನೀಡಿ ರಾಬಿನ್ ಉತ್ತಪ್ಪಗೆ ಮತ್ತೊಂದು ಅವಕಾಶ ಕೊಡಬಹುದು. ಮೊಯಿನ್ ಅಲಿ, ಎಂ. ಎಸ್ ಧೋನಿ, ಅಂಬಟಿ ರಾಯುಡು ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ.

ಬೌಲಿಂಗ್​ನಲ್ಲಿ ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಜೋಶ್ ಹ್ಯಾಜ್ಲೆವುಡ್ ಇದ್ದರೆ, ಡ್ವೇನ್ ಬ್ರಾವೋ ಮತ್ತು ಜಡೇಜಾ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಸ್ಯಾಮ್ ಕುರ್ರನ್ ತಂಡದಿಂದ ಹೊರಬಿದ್ದರೂ ಯಾವುದೇ ತೊಂದರೆಯಿಲ್ಲ.

ಇತ್ತ ಪಂಜಾಬ್ ಪರ ಓಪನರ್​ಗಳ ಮೇಲೆಯೇ ಎಲ್ಲ ಅವಲಂಬಿತವಾಗಿದೆ. ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮಿಂಚದಿದ್ದರೆ ಪಂದ್ಯ ಅರ್ಧದಷ್ಟು ಕಳೆದುಕೊಂಡಂತೆ. ನಿಕೋಲಸ್ ಪೂರನ್ ಫಾರ್ಮ್ ಕಳೆದುಕೊಂಡಿದ್ದಾರೆ. ಆ್ಯಡೆನ್ ಮರ್ಕ್ರಮ್ ಕೆಲವೊಂದು ಪಂದ್ಯದಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಶಾರುಕ್ ಖಾನ್ ಹಾಗೂ ಹರ್ಪ್ರೀತ್ ಬ್ರರ್ ಕೂಡ ತಂಡಕ್ಕೆ ಇನ್ನಷ್ಟು ಕೊಡುಗೆ ನೀಡಿದರೆ ಮಾತ್ರ ಗೆಲುವು ಸಾಧ್ಯ. ಬೌಲಿಂಗ್​ನಲ್ಲೂ ಪಂಜಾಬ್ ಪರ ರವಿ ಬಿಷ್ಟೋಯಿ ಬಿಟ್ಟರೆ ಮತ್ಯಾರು ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ.

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಮತ್ತು ಪಂಜಾಬ್ ಕಿಂಗ್ಸ್ ತಂಡ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021: ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ನಮ್ಮ ಪರ್ಪಲ್ ಪಟೇಲ್!

(CSK vs PBKS Chennai Super Kings will take on Punjab Kings in their final league stage encounter of IPL 2021)

Read Full Article

Click on your DTH Provider to Add TV9 Kannada