ಪಾಕ್ ವಿರುದ್ಧದ ಗೆಲುವು ಮರೆಯಲಾಗದ ಅನುಭವ: ರಾಹುಲ್ ದ್ರಾವಿಡ್ ಪುತ್ರ

ಭಾರತದ ಯುವ ಪಡೆ ಅಂಡರ್-19 ಏಷ್ಯಾಕಪ್ ಗೆದ್ದಿದೆ. ಅನ್ವಯ್ ದ್ರಾವಿಡ್ ತಂಡದಲ್ಲಿದ್ದು, ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದ ರೋಚಕ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಕೊನೆಯ ಎಸೆತದವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಭಾರತ 338 ರನ್‌ಗಳ ಗುರಿ ಬೆನ್ನಟ್ಟಿ ಒಂದು ವಿಕೆಟ್‌ನಿಂದ ಗೆದ್ದಿತು. ಈ ಗೆಲುವು ಮರೆಯಲಾಗದು ಎಂದು ಅನ್ವಯ್ ಸಂತಸ ವ್ಯಕ್ತಪಡಿಸಿದ್ದಾರೆ.

ಪಾಕ್ ವಿರುದ್ಧದ ಗೆಲುವು ಮರೆಯಲಾಗದ ಅನುಭವ: ರಾಹುಲ್ ದ್ರಾವಿಡ್ ಪುತ್ರ
Anvay Dravid

Updated on: Nov 15, 2026 | 9:45 PM

ಓಮನ್​ನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತದ ಯುವ ಪಡೆ ಟ್ರೋಫಿಯೊಂದಿಗೆ ಭಾರತಕ್ಕೆ ಆಗಮಿಸಿದೆ. ಈ ಯುವ ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಈ ತಂಡದಲ್ಲಿ ಕರ್ನಾಟಕದ ಅನ್ವಯ್ ದ್ರಾವಿಡ್ ಕೂಡ ಸ್ಥಾನ ಪಡೆದಿದ್ದರು. ಇಡೀ ಟೂರ್ನಿಯಲ್ಲಿ ಅನ್ವಯ್ ಅವರ ಪ್ರದರ್ಶನ ಸಾಧಾರಣವಾಗಿತ್ತಾದರೂ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿತು. ಫೈನಲ್ ಪಂದ್ಯದಲ್ಲಿ 19 ರನ್​ಗಳ ಇನ್ನಿಂಗ್ಸ್ ಆಡಿದ ಅನ್ವಯ್ ನಿರ್ಣಾಯಕ ಸಮಯದಲ್ಲಿ ರನೌಟ್​ಗೆ ಬಲಿಯಾದರು. ಆದಾಗ್ಯೂ ವಿಕೆಟ್ ಕೀಪಿಂಗ್​ನಲ್ಲಿ ತಂಡಕ್ಕೆ ನೆರವಾದರು. ಇದೀಗ ತವರಿಗೆ ಮರಳಿರುವ ದ್ರಾವಿಡ್ ಫೈನಲ್ ಪಂದ್ಯದ ಗೆಲುವಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ

ಪಾಕಿಸ್ತಾನ ವಿರುದ್ಧದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದಿರುವುದು ಅದ್ಭುತ ಅನುಭವ ಎಂದು ಅನ್ವಯ್ ದ್ರಾವಿಡ್ ಹೇಳಿದ್ದಾರೆ. ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಏಷ್ಯಾಕಪ್ ಟ್ರೋಫಿ ಎತ್ತಿಹಿಡಿದ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Loading...

ಪಂದ್ಯ ನಿಜಕ್ಕೂ ಅದ್ಭುತವಾಗಿತ್ತು

ಈ ಬಗ್ಗೆ ಮತನಾಡಿರುವ ಮಾಜಿ ಟೀಂ ಇಂಡಿಯಾ ನಾಯಕ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್, ‘ನಿನ್ನೆ ನಡೆದ ಪಂದ್ಯ ನಿಜಕ್ಕೂ ಅದ್ಭುತವಾಗಿತ್ತು. ಕೊನೆಯ ಎಸೆತದಲ್ಲಿ ನಾವು ಗೆಲುವು ಸಾಧಿಸಿದೆವು. ಏಷ್ಯಾಕಪ್ ಗೆದ್ದಿರುವುದು ತುಂಬಾ ಖುಷಿ ನೀಡಿದೆ. ಅದರಲ್ಲೂ ಇಷ್ಟು ರೋಚಕ ಪಂದ್ಯದಲ್ಲಿ ಗೆದ್ದಿರುವುದು ವಿಶೇಷ ಅನುಭವ. ಒಂದು ಹಂತದಲ್ಲಿ ನಾವು ಸೋಲಿನ ಅಂಚಿನಲ್ಲಿದ್ದೇವೆ ಎಂದು ಅನಿಸಿತ್ತು. ಆದರೆ ಅಲ್ಲಿಂದ ಮತ್ತೆ ಪಂದ್ಯಕ್ಕೆ ಮರಳಿ ಗೆಲುವು ಸಾಧಿಸಿದ್ದು ಅದ್ಭುತವಾಗಿತ್ತು. ರಾಹುಲ್ ದ್ರಾವಿಡ್ ಕೂಡ ಆಗಾಗ ಕೆಲವು ಸಲಹೆಗಳನ್ನು ನೀಡುತ್ತಾರೆ. ಆದರೆ ಹೆಚ್ಚು ಮಾತನಾಡುವುದಿಲ್ಲ’ ಎಂದು ಹೇಳಿದರು.

ದೀಪಾವಳಿ ಸೋಲಿಗೆ ಫೈನಲ್‌ನಲ್ಲಿ ಸೇಡು; ಪಾಕ್ ಆಟಗಾರರಿಗೆ ತಕ್ಕ ಉತ್ತರ ಕೊಟ್ವಿ ಎಂದ ಯುವ ಕ್ರಿಕೆಟಿಗ

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿತು. ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿ ಒಂದು ವಿಕೆಟ್‌ನಿಂದ ಗೆಲುವು ಸಾಧಿಸಿತು. ಈ ಮೂಲಕ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us