ದೀಪಾವಳಿ ಸೋಲಿಗೆ ಫೈನಲ್‌ನಲ್ಲಿ ಸೇಡು; ಪಾಕ್ ಆಟಗಾರರಿಗೆ ತಕ್ಕ ಉತ್ತರ ಕೊಟ್ವಿ ಎಂದ ಯುವ ಕ್ರಿಕೆಟಿಗ
ಭಾರತ U19 ತಂಡ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಇದು ಲೀಗ್ ಹಂತದಲ್ಲಿ ಅನುಭವಿಸಿದ್ದ ಸೋಲಿಗೆ ತಕ್ಕ ತಿರುಗೇಟಾಗಿದೆ ಎಂದು ರಜತ್ ಬಾಘೇಲ್ ಹೇಳಿದ್ದಾರೆ. ಹಿಂದಿನ ಪಂದ್ಯದಲ್ಲಿ ಪಾಕ್ ಆಟಗಾರರ ವರ್ತನೆಗೆ ಪ್ರತಿಯಾಗಿ ಭಾರತೀಯ ಆಟಗಾರರ ಸಂಭ್ರಮಕ್ಕೆ ಗೆಲುವು ತೃಪ್ತಿ ತಂದಿದೆ. ದೀಪಾವಳಿ ಸೋಲಿನ ನೋವನ್ನು ಈ ಗೆಲುವು ಮರೆಸಿದೆ ಎಂದು ರಜತ್ ತಿಳಿಸಿದರು.

ಪಾಕಿಸ್ತಾನ ವಿರುದ್ಧ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ, ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವು ತಂಡಕ್ಕೆ ವಿಶೇಷ ಕ್ಷಣವಾಗಿದ್ದು, ಟೂರ್ನಿಯ ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ್ದ ಸೋಲಿಗೆ ತಕ್ಕ ತಿರುಗೇಟು ನೀಡಿದಂತಾಗಿದೆ. ಈ ಹಿಂದೆ ದೀಪಾವಳಿ ಸಮಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದರಿಂದ ತಂಡದ ಆಟಗಾರರು ಬೇಸರಗೊಂಡಿದ್ದರು. ಆದರೆ, ಫೈನಲ್‌ನಲ್ಲಿ ಅದೇ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ ಎಂದು ಭಾರತದ ಯುವ ಆಟಗಾರ ರಜತ್ ಬಾಘೇಲ್ ಹೇಳಿದ್ದಾರೆ.
ತುಂಬಾ ವಿಶೇಷವಾದ ಅನುಭವ
ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಜತ್ ಬಾಘೇಲ್, ‘ಇದು ನಿಜಕ್ಕೂ ತುಂಬಾ ವಿಶೇಷವಾದ ಅನುಭವ. ದೀಪಾವಳಿ ಸಮಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಾಗ ನಮ್ಮ ಹಬ್ಬದ ಸಂಭ್ರಮವೇ ಕಳೆದುಹೋಗಿತ್ತು. ಆದರೆ, ಈಗ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಅದಕ್ಕೆ ತಕ್ಕ ತಿರುಗೇಟು ನೀಡಿದ್ದೇವೆ. ಇದು ಫೈನಲ್ ಪಂದ್ಯವಾಗಿದ್ದರಿಂದ ನಮಗೆ ಗೆಲುವು ಮಾತ್ರ ಮುಖ್ಯವಾಗಿತ್ತು. ಕೊನೆಯ ಎಸೆತದವರೆಗೂ ಗೆಲ್ಲಬಹುದು ಎಂಬ ನಂಬಿಕೆ ನಮ್ಮ ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಇತ್ತು’ ಎಂದು ರಜತ್ ಹೇಳಿದ್ದಾರೆ.
ಪಾಕ್ ಆಟಗಾರರಿಗೆ ತಿರುಗೇಟು
ಫೈನಲ್ ಪಂದ್ಯ ಗೆದ್ದ ಬಳಿಕ ಭಾರತ ತಂಡದ ಆಟಗಾರರು ಸಂಭ್ರಮಿಸಿದ ರೀತಿಯ ಬಗ್ಗೆಯೂ ರಜತ್ ಮಾತನಾಡಿದ್ದು, ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ತೋರಿದ್ದ ವರ್ತನೆಗೆ ಈ ಬಾರಿ ತಕ್ಕ ಉತ್ತರ ನೀಡಿದ್ದೇವೆ. ಗೆಲುವಿನ ಬಳಿಕ ನಮಗೆ ತುಂಬಾ ತೃಪ್ತಿಯಾಯಿತು. ಆ ಕ್ಷಣವನ್ನು ನಾವು ತುಂಬಾ ಸಂಭ್ರಮಿಸಿದ್ದೇವೆ. ಹಿಂದಿನ ಪಂದ್ಯದಲ್ಲಿ ಅವರು ಮೈದಾನದಲ್ಲಿ ಸಾಕಷ್ಟು ವರ್ತನೆ ತೋರಿದ್ದರು. ಹೀಗಾಗಿ ಈ ಬಾರಿ ನಾವು ಅವರಿಗೆ ತಕ್ಕ ಉತ್ತರ ನೀಡಿದ್ದೇವೆ’ ಎಂದರು.
ರಣರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಏಷ್ಯಾಕಪ್ ಗೆದ್ದ ಭಾರತ ಯುವ ಪಡೆ
ಆ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿರಲಿಲ್ಲ
ಇನ್ನು ಸಂಭ್ರಮಾಚರಣೆಯ ಬಗ್ಗೆ ಮಾತನಾಡಿದ ಅವರು, ‘ಹಿಂದಿನ ಪಂದ್ಯದಲ್ಲಿ ಮೊದಲು ಪಾಕಿಸ್ತಾನದ ಆಟಗಾರರೇ ಇಂತಹ ವರ್ತನೆ ತೋರಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಆಟಗಾರರು ಸಂಭ್ರಮಿಸಿದ್ದಾರೆ, ಸಂಭ್ರಮಾಚರಣೆಯ ವಿಚಾರಕ್ಕೆ ಬಂದರೆ, ಹಿಂದಿನ ಪಂದ್ಯದಲ್ಲಿ ಅವರೇ ಮೊದಲು ಇದನ್ನು ಆರಂಭಿಸಿದ್ದರು. ಬಹುಶಃ ಆ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿರಲಿಲ್ಲ. ಆದರೆ, ಎದುರಿನಿಂದ ಅಂತಹ ವರ್ತನೆ ಬಂದಿರದಿದ್ದರೆ ನಾವು ಕೂಡ ಈ ರೀತಿ ಸಂಭ್ರಮಿಸುತ್ತಿರಲಿಲ್ಲ’ ಎಂದು ರಜತ್ ಸ್ಪಷ್ಟಪಡಿಸಿದರು.
