
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಒಟ್ಟು 132 ರನ್ ಕಲೆಹಾಕಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಝೋನ್ ತಂಡ ಪ್ರಥಮ ಇನಿಂಗ್ಸ್ನಲ್ಲಿ 266 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಈಸ್ಟ್ ಝೋನ್ ತಂಡವು ವೈಭವ್ ಸೂರ್ಯವಂಶಿಯ 92 ರನ್ಗಳ ಅಮೋಘ ಇನಿಂಗ್ಸ್ ನೆರವಿನೊಂದಿಗೆ 266 ರನ್ ಗಳಿಸಿ ಆಲೌಟ್ ಆಯಿತು.
ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಸೆಂಟ್ರಲ್ ಝೋನ್ ತಂಡವನ್ನು ಕೇವಲ 158 ರನ್ಗಳಿಗೆ ಆಲೌಟ್ ಮಾಡುವಲ್ಲಿ ಈಸ್ಟ್ ಝೋನ್ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಈಸ್ಟ್ ಝೋನ್ ಪರ ಮುಕೇಶ್ ಕುಮಾರ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿ ಮಿಂಚಿದರು.
159 ರನ್ಗಳ ಸುಲಭ ಗುರಿ ಪಡೆದ ಈಸ್ಟ್ ಝೋನ್ ತಂಡಕ್ಕೆ ಭರ್ಜರಿ ಆರಂಭ ಒದಗಿಸುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಆ ಬಳಿಕ ಎಂದಿನಿಂತೆ ಹೊಡಿಬಡಿ ಆಟಕ್ಕೆ ಮುಂದಾದರು. ಪರಿಣಾಮ ಯುವ ದಾಂಡಿಗನ ಬ್ಯಾಟ್ನಿಂದ 2 ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ 43 ಎಸೆತಗಳಲ್ಲಿ 40 ರನ್ ಮೂಡಿಬಂತು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವೈಭವ್ ಸೂರ್ಯವಂಶಿ (40) ವಿಕೆಟ್ ಕೈಚೆಲ್ಲಿದರು.
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 92 ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 40 ರನ್ ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ನೂರಕ್ಕೂ ಅಧಿಕ ರನ್ ಕಲೆಹಾಕಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಪೃಥ್ವಿ ಶಾ ಹೆಸರಿನಲ್ಲಿತ್ತು. 2022 ರ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ಪರ ಕಣಕ್ಕಿಳಿದಿದ್ದ ಪೃಥ್ವಿ ಎರಡು ಇನಿಂಗ್ಸ್‌ಗಳಿಂದ ಒಟ್ಟು 202 ರನ್ ಗಳಿಸಿದ್ದರು. ಈ ವೇಳೆ ಅವರ ವಯಸ್ಸು ವಯಸ್ಸು 22 ವರ್ಷ 316 ದಿನಗಳು.
ಇದೀಗ 15ನೇ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಒಟ್ಟು 132 ರನ್ ಕಲೆಹಾಕುವ ಮೂಲಕ ವೈಭವ್ ಸೂರ್ಯವಂಶಿ, ನಿರ್ಣಾಯಕ ಪಂದ್ಯದಲ್ಲಿ ಒಟ್ಟು 100+ ಸ್ಕೋರ್ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
4⃣,6⃣,4⃣,4⃣, 🇼
Vaibhav Sooryavanshi 🆚 Yash Thakur battle part 2⃣ 🔥#DuleepTrophy | #CZvEZ
Scorecard ▶️ https://t.co/kyExeix2VY pic.twitter.com/wX8L5AHdTB
— BCCI Domestic (@BCCIdomestic) September 1, 2026
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ವೈಭವ್ ಸೂರ್ಯವಂಶಿ ನೀಡಿದ 40 ರನ್ಗಳ ಕೊಡಗೆಯೊಂದಿಗೆ ಈಸ್ಟ್ ಝೋನ್ ತಂಡವು 15 ಓವರ್ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 62 ರನ್ ಕಲೆಹಾಕಿದೆ. ಇನ್ನು ತಂಡದ ಗೆಲುವಿಗೆ ಕೇವಲ 97 ರನ್ಗಳ ಅವಶ್ಯಕತೆಯಿದೆ.
ಸೆಂಟ್ರಲ್ ಝೋನ್ ಪ್ಲೇಯಿಂಗ್ 11: ಅಮನ್ ಮೊಖಡೆ , ಆರ್ಯನ್ ಜುಯಲ್ (ವಿಕೆಟ್ ಕೀಪರ್) , ಕುನಾಲ್ ಚಾಂಡೇಲಾ , ಯಶ್ ರಾಥೋಡ್ , ರಜತ್ ಪಾಟಿದಾರ್ (ನಾಯಕ) , ರಿಂಕು ಸಿಂಗ್ , ಸರಾಂಶ್ ಜೈನ್ , ಹರ್ಷ್ ದುಬೆ , ಅರ್ಷದ್ ಖಾನ್ , ಯಶ್ ಠಾಕೂರ್ , ಆರ್ಯನ್ ಪಾಂಡೆ.
ಇದನ್ನೂ ಓದಿ: ಅಝರ್ ಸಿಡಿಲಬ್ಬರ.. 42 ಸಿಕ್ಸರ್, 3 ಭರ್ಜರಿ ಸೆಂಚುರಿ, ಹೊಸ ದಾಖಲೆ!
ಈಸ್ಟ್ ಝೋನ್ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ವೈಭವ್ ಸೂರ್ಯವಂಶಿ , ಕುಮಾರ್ ಕುಶಾಗ್ರ , ಸುದೀಪ್ ಕುಮಾರ್ ಘರಾಮಿ , ಇಶಾನ್ ಕಿಶನ್ (ನಾಯಕ) , ವಿರಾಟ್ ಸಿಂಗ್ , ಮುಹಮ್ಮದ್ ಖುರೈಶಿ , ಅನುಕೂಲ್ ರಾಯ್ , ಅಭಿಜಿತ್ ಕೆ ಸರ್ಕಾರ್ , ಮೊಹಮ್ಮದ್ ಶಮಿ , ಮುಖೇಶ್ ಕುಮಾರ್.