AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy 2026: ದುಲೀಪ್ ಟ್ರೋಫಿ ಟೂರ್ನಿ ಎಂದರೇನು?

ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ. ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳಿದ್ದು, ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

Duleep Trophy 2026: ದುಲೀಪ್ ಟ್ರೋಫಿ ಟೂರ್ನಿ ಎಂದರೇನು?
Duleep Trophy 2026
ಝಾಹಿರ್ ಯೂಸುಫ್
|

Updated on: Aug 23, 2026 | 7:56 AM

Share

Duleep Trophy 2026: ದುಲೀಪ್ ಟ್ರೋಫಿ 2026 ಆಗಸ್ಟ್ 23 ರಿಂದ ಶುರುವಾಗಲಿದೆ. ಈ ಬಾರಿಯ ಟೂರ್ನಿಯು ಎಲ್ಲಾ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿದೆ. ವಿಶೇಷ ಎಂದರೆ ಈ ಬಾರಿ ಕಣಕ್ಕಿಳಿಯಲಿರುವ 6 ತಂಡಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ 2026ರ ದುಲೀಪ್ ಟ್ರೋಫಿಯಲ್ಲಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಏನಿದು ದುಲೀಪ್ ಟ್ರೋಫಿ?

ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ.

ದುಲೀಪ್ ಟ್ರೋಫಿ ಯಾವಾಗ ಶುರುವಾಯಿತು?

ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?

ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

  • ಕೇಂದ್ರ ವಲಯ
  • ದಕ್ಷಿಣ ವಲಯ
  • ಪೂರ್ವ ವಲಯ
  • ಪಶ್ಚಿಮ ವಲಯ
  • ಉತ್ತರ ವಲಯ
  • ಈಶಾನ್ಯ ವಲಯ

ದುಲೀಪ್ ಟ್ರೋಫಿಯ ವಲಯ ರಾಜ್ಯಗಳಾವುವು?

  • ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
  • ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
  • ಕೇಂದ್ರ ವಲಯ : ಛತ್ತೀಸ್‌ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
  • ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
  • ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
  • ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ.

ಈ ರಾಜ್ಯಗಳ ಆಟಗಾರರು ಆಯಾ ವಲಯಗಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಈ ವಲಯಗಳ ತಂಡಗಳನ್ನು ಎಲೈಟ್​​ ಹಾಗೂ ಇಂಡಿಯಾ ರೆಡ್, ಬ್ಲೂ, ಗ್ರೀನ್… ಹೆಸರಿನಲ್ಲಿ ಕಣಕ್ಕಿಳಿಸಲಾಗಿತ್ತು. ಆದರೆ ಈ ಬಾರಿ ಮತ್ತೆ ವಲಯಗಳ ರೂಪದಲ್ಲೇ ತಂಡಗಳನ್ನು ಕಣಕ್ಕಿಳಿಸಲಾಗುತ್ತಿದೆ.

ಇದನ್ನೂ ಓದಿ: 70 ಕೋಟಿ ರೂ. ನಷ್ಟ: ಟೀಮ್ ಇಂಡಿಯಾ ಕಣಕ್ಕಿಳಿದರೆ 500 ಕೋಟಿ ರೂ. ಲಾಭ!

ದುಲೀಪ್ ಟ್ರೋಫಿಯ ಹಿಂದಿನ ವಿಜೇತರು ಯಾರು?

  • 1961–62 – ಪಶ್ಚಿಮ ವಲಯ
  • 1962–63 – ಪಶ್ಚಿಮ ವಲಯ
  • 1963–64 – ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 1964–65 – ಪಶ್ಚಿಮ ವಲಯ
  • 1965–66 – ದಕ್ಷಿಣ ವಲಯ
  • 1966–67 – ದಕ್ಷಿಣ ವಲಯ
  • 1967–68 – ದಕ್ಷಿಣ ವಲಯ
  • 1968–69 – ಪಶ್ಚಿಮ ವಲಯ
  • 1969–70 – ಪಶ್ಚಿಮ ವಲಯ
  • 1970–71 – ದಕ್ಷಿಣ ವಲಯ
  • 1971–72 – ಕೇಂದ್ರ ವಲಯ
  • 1972–73 – ಪಶ್ಚಿಮ ವಲಯ
  • 1973–74 – ಕೇಂದ್ರ ವಲಯ
  • 1974–75 – ದಕ್ಷಿಣ ವಲಯ
  • 1975–76 – ದಕ್ಷಿಣ ವಲಯ
  • 1976–77 – ಪಶ್ಚಿಮ ವಲಯ
  • 1977–78 – ಪಶ್ಚಿಮ ವಲಯ
  • 1978–79 – ಉತ್ತರ ವಲಯ
  • 1979–80 – ಉತ್ತರ ವಲಯ
  • 1980–81 – ಪಶ್ಚಿಮ ವಲಯ
  • 1981–82 – ಪಶ್ಚಿಮ ವಲಯ
  • 1982–83 – ಉತ್ತರ ವಲಯ
  • 1983–84 – ಉತ್ತರ ವಲಯ
  • 1984–85 – ದಕ್ಷಿಣ ವಲಯ
  • 1985–86 – ಪಶ್ಚಿಮ ವಲಯ
  • 1986–87 – ದಕ್ಷಿಣ ವಲಯ
  • 1987–88 – ಉತ್ತರ ವಲಯ
  • 1988–89 – ಉತ್ತರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 1989–90 – ದಕ್ಷಿಣ ವಲಯ
  • 1990–91 – ಉತ್ತರ ವಲಯ
  • 1991–92 – ಉತ್ತರ ವಲಯ
  • 1992–93 – ಉತ್ತರ ವಲಯ
  • 1993–94 – ಉತ್ತರ ವಲಯ
  • 1994–95 – ಉತ್ತರ ವಲಯ
  • 1995–96 – ದಕ್ಷಿಣ ವಲಯ
  • 1996–97 – ಕೇಂದ್ರ ವಲಯ
  • 1997–98 – ಕೇಂದ್ರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 1998–99 – ಕೇಂದ್ರ ವಲಯ
  • 1999–2000 – ಉತ್ತರ ವಲಯ
  • 2000–01 – ಉತ್ತರ ವಲಯ
  • 2001–02 – ಪಶ್ಚಿಮ ವಲಯ
  • 2002–03 – ಎಲೈಟ್ ಸಿ
  • 2003–04 – ಉತ್ತರ ವಲಯ
  • 2004–05 – ಕೇಂದ್ರ ವಲಯ
  • 2005–06 – ಪಶ್ಚಿಮ ವಲಯ
  • 2006–07 – ಉತ್ತರ ವಲಯ
  • 2007–08 – ಉತ್ತರ ವಲಯ
  • 2008–09 – ಪಶ್ಚಿಮ ವಲಯ
  • 2009–10 – ಪಶ್ಚಿಮ ವಲಯ
  • 2010–11 – ದಕ್ಷಿಣ ವಲಯ
  • 2011–12 – ಪೂರ್ವ ವಲಯ
  • 2012–13 – ಪೂರ್ವ ವಲಯ
  • 2013–14 – ಉತ್ತರ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 2014–15 – ಕೇಂದ್ರ ವಲಯ
  • 2016–17 – ಇಂಡಿಯಾ ಬ್ಲೂ
  • 2017–18 – ಇಂಡಿಯಾ ರೆಡ್
  • 2018–19 – ಇಂಡಿಯಾ ಬ್ಲೂ
  • 2019–20 – ಇಂಡಿಯಾ ರೆಡ್
  • 2022–23 – ಪಶ್ಚಿಮ ವಲಯ
  • 2023 – ದಕ್ಷಿಣ ವಲಯ
  • 2024/25- ಇಂಡಿಯಾ ಎ
  • 2025/26- ದಕ್ಷಿಣ ವಲಯ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ