ಕರ್ನಾಟಕ ಟು ಪಾಕಿಸ್ತಾನ: ಉಗ್ರನ ಜತೆ ಸಂಪರ್ಕ ಶಂಕೆ ಮೇರೆಗೆ ಬೀದರ್ ಯುವಕ ಅರೆಸ್ಟ್
ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ಆರೋಪ ಹಿನ್ನೆಲೆ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಇಬ್ಬರನ್ನ ಬಂಧಿಸಲಾಗಿತ್ತು. ಇದೀಗ ಉಗ್ರನ ಜತೆ ಸಂಪರ್ಕ ಶಂಕೆ ಹಿನ್ನೆಲೆ ಬೀದರ್ ಮೂಲದ ಯುವಕನನ್ನ ಎನ್ಐಎ ತಂಡ ಬಂಧಿಸಿದೆ. ಇನ್ನು ಬಂಧಿಸಲ್ಪಟ್ಟ ಯುವಕ ಅಪರಾಧ ಹಿನ್ನೆಲೆ ಹೊಂದಿರುವ ಮಾಹಿತಿ ಕೂಡ ಇದೆ.

ಮುಖ್ಯಾಂಶಗಳು
- ಉಗ್ರ ಶಹಜಾದ್ ಭಟ್ಟಿ ಆ್ಯಂಡ್ ಇತರರೊಂದಿಗೆ ಸಂಪರ್ಕ ಶಂಕೆ
- ಬೀದರ್ ಮೂಲದ ಯುವಕನ ಬಂಧನ
- ಅಕ್ಟೋಬರ್ 1ರಂದು ವಿಶಾಲ್ನನ್ನು ಬಂಧಿಸಿರುವ ಎನ್ಐಎ ಟೀಂ
ಬೀದರ್, ಅಕ್ಟೋಬರ್ 03: ಪಾಕಿಸ್ತಾನ ಮೂಲದ ಘೋಷಿತ ಉಗ್ರ ಶಹಜಾದ್ ಭಟ್ಟಿ ಆ್ಯಂಡ್ ಇತರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯಣಕೂರ ಗ್ರಾಮದ ವಿಶಾಲ್ ಮೇತ್ರೆ ಎಂಬಾತನನ್ನು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಎನ್ಐಎ ತಂಡ ಅ.1ರಂದು ಬಂಧಿಸಿದೆ. ಯುಎಪಿಎ ಕಾಯ್ದೆಯಡಿ ವಿಶಾಲ್ ಮೇತ್ರೆಯನ್ನ ಎನ್ಐಎ ತಂಡ ಅರೆಸ್ಟ್ ಮಾಡಿದೆ.
ಲಾರೆನ್ಸ್ ಭಯೋತ್ಪಾದಕ ಗ್ಯಾಂಗ್‌ನಿಂದ ಹೊರಬಂದು ಶಹಜಾದ್ ಭಟ್ಟಿ ಉಗ್ರ ಚಟುವಟಿಕೆ ಕೃತ್ಯ ನಡೆಸುತ್ತಿದ್ದನಂತೆ. ಇತನ್ನೊಂದಿಗೆ ಸಂಪರ್ಕ ಶಂಕೆ ಹಿನ್ನೆಲೆ ಇದೀಗ ಬೀದರ್ ಮೂಲದ ಯುವಕನನ್ನ ಬಂಧಿಸಲಾಗಿದೆ.
ಕೋರ್ಟ್ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ನೀಡುತ್ತೇನೆ ಎಂದ ಎಸ್‌ಪಿ
ಇನ್ನು ಬಂಧಿತ ವಿಶಾಲ್ ಮೇತ್ರೆಗೆ ಅಪರಾಧ ಹಿನ್ನೆಲೆ ಹೊಂದಿರುವ ಬಗ್ಗೆ ಮಾಹಿತಿ ಇದೆ. ‘ಸದ್ಯ ಕೋರ್ಟ್ ಪ್ರಕ್ರಿಯೆ ನಡೆಯುತ್ತಿದ್ದು, ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ’ ಎಸ್‌ಪಿ ಪ್ರದೀಪ್ ಗುಂಟಿ ಪ್ರತಿಕ್ರಿಯಿಸಿದ್ದಾರೆ.
ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿ ಆಗಿದ್ದಾರೆ. ತಲೆ ಕರೆಸಿಕೊಂಡು ಓಡಾಡುತ್ತಿದ್ದ ಮಹಾರಾಷ್ಟ್ರ ಮೂಲದ ಕಿಂಗ್ಪಿನ್ಗಳಾದ ಬಲಬೀರ್ ಸಿಂಗ್ ಮತ್ತು ಶೇರ್ ಜಾಧವ್ ಬಂಧಿತರು. ಬಂಧಿತರಿಂದ 5 ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡು ಮತ್ತು ಐದು ತಲವಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದನಾ ಚರ್ಚೆ: ಟೆಲಿಗ್ರಾಂ ಚಾಟಿಂಗ್‌ನಲ್ಲಿ ಸಿಕ್ಕಿಬಿತ್ತು ಶಂಕಿತರ ಅಸಲಿ ಟಾರ್ಗೆಟ್
ಆರೋಪಿಗಳು ಜ್ಞಾನಸುಧಾ ಶಾಲೆಯ ಹತ್ತಿರದ ರಿಂಗ್ ರೋಡ್ನಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದರು. ಬೀದರ್ ಸಬ್ ಅರ್ಬನ್ ಪೊಲೀಸ್ರು ಎಸ್‌ಪಿ ಪ್ರದೀಪ್ ಗುಂಟೆ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಇಬ್ಬರು ಮಹಾರಾಷ್ಟ್ರದ ವಿವಿಧ ಠಾಣೆಯಲ್ಲಿ ಆರ್ಮ್ ಆ್ಯಕ್ಟ್ನಲ್ಲಿ ಪ್ರಕರಣ ದಾಖಲಾಗಿವೆ. ಸಿಬ್ಬಂದಿಯ ಕಾರ್ಯಕ್ಕೆ ಎಸ್‌ಪಿ ಪ್ರದೀಪ್ ಗುಂಟೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Sat, 3 October 26




