ಬಾರ್ಬಡೊಸ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ (West Indies vs India) ಹೀನಾಯ ಪ್ರದರ್ಶನ ತೋರಿ ಸೋಲುಂಡಿದೆ. ಸರಣಿ ಗೆಲ್ಲುವ ಕನಸಿನಲ್ಲಿದ್ದ ಟೀಮ್ ಇಂಡಿಯಾಕ್ಕೆ ಕೆರಿಬಿಯನ್ ಪಡೆ ಶಾಕ್ ನೀಡಿತು. ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚದ ಭಾರತ ಕಳಪೆ ಆಟವಾಡಿದರೆ ವೆಸ್ಟ್ ಇಂಡೀಸ್ 6 ವಿಕೆಟ್ಗಳ ಜಯದೊಂದಿಗೆ ಸರಣಿ ಸಮಬಲ ಸಾಧಿಸಿದೆ. ಈ ಪಂದ್ಯದಿಂದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದ ಜವಾಬ್ದಾರಿ ಹೊತ್ತಿದ್ದರು. ರೆಸ್ಟ್ನಲ್ಲಿದ್ದ ಕೊಹ್ಲಿ ವಾಟರ್ ಬಾಯ್ ಕೂಡ ಕಾಣಿಸಿಕೊಂಡರು.
ಎರಡನೇ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ ಡ್ರಿಂಕ್ಸ್ ಬ್ರೇಕ್ ವೇಳೆ ಯುಜ್ವೇಂದ್ರ ಚಹಲ್ ಜೊತೆ ವಾಟರ್ ಬಾಯ್ ಆಗಿ ಮೈದಾನಕ್ಕೆ ಬಂದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
1 hi to ❤️ hai, kitne baar jeetoge? King Kohli turns water boy!
.
.#INDvWIAdFreeonFanCode #INDvWI pic.twitter.com/CYE2uvNAC2— FanCode (@FanCode) July 29, 2023
IND vs WI: ಕೊಹ್ಲಿ- ರೋಹಿತ್ ಇಲ್ಲದ ಟೀಂ ಇಂಡಿಯಾಕ್ಕೆ ಸೋಲಿನ ಶಾಕ್! ಸರಣಿಯಲ್ಲಿ ಸಮಬಲ ಸಾಧಿಸಿದ ವಿಂಡೀಸ್
ಅಂದಹಾಗೆ ಕೊಹ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಇಲ್ಲದಿದ್ದಾಗ ವಾಟರ್ ಬಾಯ್ ಆಗಿ ಕಾಣಿಸಿಕೊಂಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ 2017 ರಲ್ಲಿ ನಾಯಕನಾಗಿದ್ದಾಗ ಧರ್ಮಶಾಲದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಡುವೆ ಆಟಗಾರರಿಗೆ ನೀರು ತಂದುಕೊಟ್ಟಿದ್ದರು. ಆಗ ಕೊಹ್ಲಿ ಭುಜದ ನೋವಿನಿಂದ ಬಳಲುತ್ತಿದ್ದರು. ಕೇವಲ ಕೊಹ್ಲಿ ಮಾತ್ರವಲ್ಲ, ಎಂಎಸ್ ಧೋನಿ ಕೂಡ ಪ್ಲೇಯಿಂಗ್ ಇಲೆವೆನ್ನಲ್ಲಿ ಇಲ್ಲದಿದ್ದಾಗ ಮೈದಾನಕ್ಕೆ ನೀರು ತಂದುಕೊಟ್ಟಿದ್ದರು.
ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಬಳಿಕ ದಿಢೀರ್ ಕುಸಿತ ಕಂಡಿತು. ಓಪನರ್ಗಳಾದ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಮೊದಲ ವಿಕೆಟ್ಗೆ 90 ರನ್ಗಳ ಜೊತೆಯಾಟ ಆಡಿದರು. ಗಿಲ್ 34 ರನ್ ಗಳಿಸಿದರೆ, ಕಿಶನ್ 55 ರನ್ ಬಾರಿಸಿ ಔಟಾದರು. ನಂತರ ಬಂದ ಬ್ಯಾಟರ್ಗಳ ಪೈಕಿ ಸೂರ್ಯಕುಮಾರ್ ಯಾದವ್ 24 ರನ್ ಗಳಿಸಿದ್ದೇ ಹೆಚ್ಚು. ಭಾರತ 40.5 ಓವರ್ಗಳಲ್ಲಿ 181 ರನ್ಗಳಿಗೆ ಆಲೌಟ್ ಆಯಿತು. ವಿಂಡೀಸ್ ಪರ ಗುಡ್ಕೇಶ್ ಮೋತಿ ಮತ್ತು ರೊಮಾರಿಯೊ ಶೆಫರ್ಡ್ ತಲಾ 3 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ನಾಯಕ ಶಾಯ್ ಹೋಪ್ ಕ್ರೀಸ್ ಕಚ್ಚಿ ನಿಂತು ಜಯ ತಂದುಕೊಟ್ಟರು. ಬ್ರಾಂಡನ್ ಕಿಂಗ್ 15, ಖೈಲ್ ಮೇಯರ್ಸ್ 36 ರನ್ ಗಳಿಸಿದರೆ, ಹೋಪ್ ಅಜೇಯ 63 ಮತ್ತು ಕೇಸಿ ಕಾರ್ಟಿ ಅಜೇಯ 48 ರನ್ ಬಾರಿಸಿದರು. ವಿಂಡೀಸ್ 36.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ 6 ವಿಕೆಟ್ಗಳ ಜಯ ಸಾಧಿಸಿತು. ಭಾರತ ಪರ ಶಾರ್ದೂಲ್ ಥಾಕೂರ್ 3 ವಿಕೆಟ್ ಕಿತ್ತರು. ಸದ್ಯ ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ