IND vs WI: 245 ದಿನಗಳ ನಂತರ ಸಿಕ್ಕ ಅವಕಾಶವನ್ನು ಕೈಚೆಲ್ಲಿದ ಸಂಜು ಸ್ಯಾಮ್ಸನ್
Sanju Samson: ಬರೋಬ್ಬರಿ 245 ದಿನಗಳ ನಂತರ ಏಕದಿನ ತಂಡಕ್ಕೆ ಮರಳಿದ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ (India vs West Indies) ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ (Sanju Samson) ಅವಕಾಶ ಸಿಕಿರಲಿಲ್ಲ. ಹೀಗಾಗಿ ಏಕದಿನದಲ್ಲಿ 60 ಕ್ಕೂ ಹೆಚ್ಚು ಸರಾಸರಿ ಹೊಂದಿರುವ ಪ್ರತಿಭಾವಂತ ಕ್ರಿಕೆಟಿಗನನ್ನು ಬಿಸಿಸಿಐ (BCCI) ಕಡಿಗಣಿಸುತ್ತದೆ ಎಂದು ಮಾಜಿ ಕ್ರಿಕೆಟಿಗರು ಸೇರಿದಂತೆ ನೆಟ್ಟಿಗರು ಸಹ ಕ್ರಿಕೆಟ್ ಬಿಗ್ಬಾಸ್ಗಳ ವಿರುದ್ಧ ಮುಗಿಬಿದ್ದಿದ್ದರು. ಆ ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ (Team India) ಸಂಜು ಸ್ಯಾಮ್ಸನ್‌ಗೆ ಅಂತಿಮವಾಗಿ ಅವಕಾಶ ನೀಡಲಾಯಿತು. ಆದರೆ ಸಿಕ್ಕ ಅವಕಾಶವನ್ನು ಈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವಾಸ್ತವವಾಗಿ ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಅನುಭವಿಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಈ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು. ಇವರ ಜಾಗದಲ್ಲಿ ಆಡಿದ ಇಬ್ಬರು ಆಟಗಾರರೂ ಸಹ ತಂಡಕ್ಕೆ ನೆರವಾಗಲಿಲ್ಲ.
ಬರೋಬ್ಬರಿ 245 ದಿನಗಳ ನಂತರ ಏಕದಿನ ತಂಡಕ್ಕೆ ಮರಳಿದ ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಸಂಜು ಸ್ಯಾಮ್ಸನ್‌ಗೆ ಈ ಪಂದ್ಯದಲ್ಲಿ ತನ್ನನ್ನು ತಾನು ಸಾಭೀತುಪಡಿಸಲು ಸಾಕಷ್ಟು ಅವಕಾಶಗಳಿತ್ತು. ಆದರೆ ಅದೆಲ್ಲವನ್ನು ಕೈಚೆಲ್ಲಿದ ಸಂಜು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗದೆ ಕೇವಲ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಎಲ್ಲರನ್ನು ನಿರಾಸೆಗೊಳಿಸಿದರು.
ಕೊನೆಯ 10 ಏಕದಿನ ಇನ್ನಿಂಗ್ಸ್ನಲ್ಲಿ ಸಂಜು ಪ್ರದರ್ಶನ ಹೇಗಿದೆ ಗೊತ್ತಾ?
ದೊಡ್ಡ ಜವಬ್ದಾರಿ ಹೊತ್ತಿದ್ದ ಸಂಜು
ಬಾರ್ಬಡೋಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಆರಂಭದ ಹೊರತಾಗಿಯೂ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ತತ್ತರಿಸಿತು. ಹೀಗಾಗಿ ಒಂದೊಳ್ಳೆ ಅವಕಾಶವನ್ನು ಸಂಜು ಸರಿಯಾಗಿ ಬಳಸಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಯಾವ ವಿಕೆಟ್ ನಷ್ಟವಿಲ್ಲದೆ 90 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಆ ಬಳಿಕ 113 ರನ್‌ಗಳಿಗೆ ತನ್ನ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಗಿಲ್ ವಿಕೆಟ್ ಬಳಿಕ ಕ್ರೀಸ್ಗೆ ಬಂದ ಸಂಜು ಸ್ಯಾಮ್ಸನ್, ಇಶಾನ್ ಜೊತೆ ದೊಡ್ಡ ಪಾಲುದಾರಿಕೆಯನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದರು. ಅಲ್ಲದೆ ಆಡುವ ಇಲೆವೆನ್‌ನಲ್ಲಿ ಹೆಚ್ಚು ಅವಕಾಶ ಸಿಗದ ಕಾರಣ ಎಲ್ಲರೂ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು.
ಸ್ಯಾಮ್ಸನ್ ಬ್ಯಾಟ್ ಕೆಲಸ ಮಾಡಲಿಲ್ಲ
ಹೀಗಿರುವಾಗ ಸಿಕ್ಕ ಸಿಕ್ಕ ಅವಕಾಶವನ್ನೇ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಸ್ಯಾಮ್ಸನ್ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಆಯ್ಕೆ ಮಂಡಳಿಗೆ ಉತ್ತರ ಕೊಡುವ ಸಮಯ ಬಂದಾಗ ಸಂಜು ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಮತ್ತೊಮ್ಮೆ ಸ್ಪಿನ್ನರ್ಗೆ ಬಲಿಯಾದ ಸಂಜು ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು.
ಸ್ಯಾಮ್ಸನ್ ಫ್ಲಾಪ್ ಪುನರಾಗಮನ
ಇದಕ್ಕೂ ಮುನ್ನ ಸ್ಯಾಮ್ಸನ್ ಕಳೆದ ವರ್ಷ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದರು. ಕಳೆದ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೈದಾನಕ್ಕಿಳಿದಿದ್ದ ಸಂಜು ಆ ಪಂದ್ಯದಲ್ಲೂ ಕೇವಲ 36 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದರು. ನ್ಯೂಜಿಲೆಂಡ್ ಪ್ರವಾಸದ ನಂತರ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿತ್ತು. ಇದೀಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಂಡದಲ್ಲಿ ಅವಕಾಶ ಪಡೆದ ಸಂಜು ಈ ಪಂದ್ಯದಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ