AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishan Kishan Record: ಸಚಿನ್ ದಾಖಲೆ ಪುಡಿ ಪುಡಿ ಮಾಡಿ ಧೋನಿ ರೆಕಾರ್ಡ್ ಸರಿಗಟ್ಟಿದ ಇಶಾನ್ ಕಿಶನ್

India vs West Indies 2nd ODI: ಭರ್ಜರಿ ಅರ್ಧಶತಕದ ಮೂಲಕ ಇಶಾನ್ ಕಿಶನ್ ನೂತನ ದಾಖಲೆ ನಿರ್ಮಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ಎಂಎಸ್ ಧೋನಿ ದಾಖಲೆಯನ್ನು ಕಿಶನ್ ಸರಿಗಟ್ಟಿದ್ದಾರೆ.

Vinay Bhat
|

Updated on: Jul 30, 2023 | 10:10 AM

ಕೆರಿಬಿಯನ್ ನಾಡಲ್ಲಿ ಇಶಾನ್ ಕಿಶನ್ ಅದ್ಭುತ ಫಾರ್ಮ್ ಮುಂದುವರೆದಿದೆ. ಟೆಸ್ಟ್ ಸರಣಿ ಬಳಿಕ ಏಕದಿನ ಸರಣಿಯಲ್ಲೂ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮೊದಲ ಏಕದಿನದಲ್ಲಿ 52 ರನ್ ಕಲೆಹಾಕಿದ್ದ ವಿಕೆಟ್ ಕೀಪರ್, ಬ್ಯಾಟರ್ ಎರಡನೇ ಪಂದ್ಯದಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿ 55 ರನ್ ಚಚ್ಚಿದರು.

1 / 7
ದ್ವಿತೀಯ ಏಕದಿನದಲ್ಲಿ ಭಾರತ 181 ರನ್​ಗಳಿಗೆ ಆಲೌಟ್ ಆಗುವ ಹೀನಾಯ ಪ್ರದರ್ಶನ ತೋರಿತು. ಇದರಲ್ಲಿ ಗರಿಷ್ಠ ರನ್ ಗಳಿಸಿದ್ದು ಇಶಾನ್ ಕಿಶನ್. ಶುಭ್​ಮನ್ ಗಿಲ್ ಜೊತೆಗೂಡಿ 90 ರನ್​ಗಳ ಕಾಣಿಕೆ ನೀಡಿದರು. ಕಿಶನ್ ಬ್ಯಾಟ್​ನಿಂದ ಆರು ಫೋರ್ ಮತ್ತು 1 ಸಿಕ್ಸರ್ ಬಂದವು.

2 / 7
ಭರ್ಜರಿ ಅರ್ಧಶತಕದ ಮೂಲಕ ಕಿಶನ್ ನೂತನ ದಾಖಲೆ ನಿರ್ಮಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ಎಂಎಸ್ ಧೋನಿ ದಾಖಲೆಯನ್ನು ಕಿಶನ್ ಸರಿಗಟ್ಟಿದ್ದಾರೆ.

3 / 7
ಕಿಶನ್ ಕೆರಿಬಿಯನ್ ನಾಡಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಬ್ಯಾಕ್ ಟು ಬ್ಯಾಕ್ ಏಕದಿನ ಅರ್ಧ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡರು. 2017 ರಲ್ಲಿ ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಧೋನಿ ಈ ಸಾಧನೆ ಮಾಡಿದ್ದರು.

4 / 7
ಅಂದು ಧೋನಿ ನಾರ್ತ್ ಸೌಂಡ್‌ನಲ್ಲಿ ನಡೆದ ಮೂರನೇ ಏಕದಿನದಲ್ಲಿ 79 ಎಸೆತಗಳಲ್ಲಿ 78 ರನ್ ಮತ್ತು ನಾಲ್ಕನೇ ODI ನಲ್ಲಿ 114 ಎಸೆತಗಳಲ್ಲಿ 54 ರನ್ ಗಳಿಸಿದ್ದರು. ಇದೀಗ ಕಿಶನ್ ಇವರ ದಾಖಲೆಯನ್ನು ಸರಿಗಟ್ಟಿದ್ದಾರೆ.

5 / 7
ಇದರ ಜೊತೆಗೆ ಇಶಾನ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಮುರಿದಿದ್ದಾರೆ. ಕಿಶನ್ ಐದು ಇನ್ನಿಂಗ್ಸ್‌ಗಳ ನಂತರ ಭಾರತ ಪರ ಓಪನರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಲುಪಿದ್ದಾರೆ. ತೆಂಡೂಲ್ಕರ್ ಅವರು ಆರಂಭಿಕನಾಗಿ ಮೊದಲ ಐದು ಇನ್ನಿಂಗ್ಸ್​ನಲ್ಲಿ ಗಳಿಸಿದ್ದು 321 ರನ್‌. ಕಿಶನ್ ಇದೀಗ 348 ರನ್ ಗಳಿಸಿದ್ದಾರೆ.

6 / 7
ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಪ್ರದರ್ಶನ ತೋರಿ ಸೋಲು ಕಂಡಿದೆ. ಭಾರತ ನೀಡಿದ 182 ರನ್​ಗಳ ಟಾರ್ಗೆಟ್ ಅನ್ನು ವೆಸ್ಟ್ ಇಂಡೀಸ್ 36.4 ಓವರ್​ಗಳಲ್ಲಿ ಮುಟ್ಟಿ 6 ವಿಕೆಟ್​ಗಳ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂಕಗಳ ಅಂತರದ ಮುನ್ನಡೆ ಪಡೆದುಕೊಂಡಿದೆ.

7 / 7
Follow us
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?

ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ

VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು

ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ

ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ

VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!

ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?

Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ

ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್