ದಾಖಲೆಯ 86ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ..!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಇದು ಅವರ 55ನೇ ಏಕದಿನ ಶತಕವಾಗಿದ್ದು, ಮೂರು ಮಾದರಿಗಳಲ್ಲಿ 86ನೇ ಶತಕವಾಗಿದೆ. ಕೇವಲ 74 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಶತಕ ಪೂರೈಸಿದ ಕೊಹ್ಲಿ, ಸಿಕ್ಸರ್ ಮೂಲಕ ಮೈಲಿಗಲ್ಲು ತಲುಪಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದರು. ಈ ಮೂಲಕ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ದಾಖಲೆ ಬರೆದರು.

ದಾಖಲೆಯ 86ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ..!
ವಿರಾಟ್ ಕೊಹ್ಲಿ
Image Credit source: BCCI X

Updated on: Sep 27, 2026 | 10:39 PM

ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಇದು ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ 55ನೇ ಏಕದಿನ ಶತಕವಾಗಿದ್ದು, ಮೂರು ಮಾದರಿಗಳಲ್ಲೂ 86ನೇ ಶತಕವಾಗಿದೆ. ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ ಏಕದಿನ ಕ್ರಿಕೆಟ್​ನಲ್ಲಿ 55 ಶತಕ, ಟೆಸ್ಟ್ ಮಾದರಿಯಲ್ಲಿ 30 ಶತಕ ಹಾಗೂ ಟಿ20 ಮಾದರಿಯಲ್ಲಿ ಒಂದು ಶತಕ ಬಾರಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಕೊಹ್ಲಿ 74 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ತಮ್ಮ ಶತಕವನ್ನು ಪೂರೈಸಿದರು. ಮತ್ತೊಂದು ಸ್ಮರಣೀಯ ಸಂಗತಿಯೆಂದರೆ ಕೊಹ್ಲಿ ಈ ಶತಕವನ್ನು ಸಿಕ್ಸರ್ ಬಾರಿಸುವ ಮೂಲಕ ಪೂರೈಸಿದರು. ಕೊಹ್ಲಿ ಸಿಕ್ಸರ್ ಮೂಲಕ ಶತಕ ಪೂರೈಸುತ್ತಿದ್ದಂತೆ ಇಡೀ ಮೈದಾನವೇ ಹುಚ್ಚೆದ್ದು ಕುಣಿದು ಕುಪ್ಪಳಿಸಿತು.

ಸತತ ಎರಡನೇ ಏಕದಿನ ಶತಕ

ತಿರುವನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೂರು ಶತಕಗಳು ದಾಖಲಾದವು. ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರ ಜಸ್ಟಿನ್ ಗ್ರೀವ್ಸ್ ಅವರ ಚೊಚ್ಚಲ ಶತಕದೊಂದಿಗೆ ಇದು ಪ್ರಾರಂಭವಾಯಿತು. ನಂತರ, ಭಾರತದ ನಾಯಕ ಶುಭ್​ಮನ್ ಗಿಲ್ ತಮ್ಮ 10 ನೇ ಏಕದಿನ ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಸತತ ಎರಡನೇ ಏಕದಿನ ಶತಕ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 10 ನೇ ಶತಕವನ್ನು ಪೂರೈಸಿದರು.

ಮೊದಲ ಬಾರಿಗೆ ಈ ರೀತಿಯ ಶತಕ

ವೆಸ್ಟ್ ಇಂಡೀಸ್ ನೀಡಿದ 296 ರನ್‌ಗಳ ಗುರಿಗೆ ಉತ್ತರವಾಗಿ 70 ರನ್‌ಗಳಿಗೂ ಹೆಚ್ಚು ಆರಂಭಿಕ ಪಾಲುದಾರಿಕೆಯ ನಂತರ ಕ್ರೀಸ್‌ಗೆ ಬಂದ ಕೊಹ್ಲಿ ಸಿಕ್ಸರ್ ಮೂಲಕ ತಮ್ಮ ಮೊದಲ ಬೌಂಡರಿ ಕಲೆಹಾಕಿದರು. ವಿಂಡೀಸ್ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ ಸಿಕ್ಸರ್‌ನೊಂದಿಗೆ ಅರ್ಧಶತಕವನ್ನು ಮತ್ತು ಕೇವಲ 74 ಎಸೆತಗಳಲ್ಲಿ ಸಿಕ್ಸರ್‌ನೊಂದಿಗೆ ತಮ್ಮ ಶತಕವನ್ನು ಪೂರೈಸಿದರು. ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ ಈ ರೀತಿಯಾಗಿ ಶತಕ ಗಳಿಸಿದ್ದು ಇದು ಮೊದಲ ಬಾರಿಗೆ.

ಮೊಹಮ್ಮದ್ ಅಜರುದ್ದೀನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಲಾ 60 ಶತಕ

ವಿರಾಟ್ ಕೊಹ್ಲಿ ತಮ್ಮ 55 ನೇ ಏಕದಿನ ಶತಕ ಬಾರಿಸುವ ಮೂಲಕ ಅನೇಕ ಐತಿಹಾಸಿಕ ದಾಖಲೆಗಳನ್ನು ಮುರಿದಿದ್ದಾರೆ. ಈ ಶತಕದೊಂದಿಗೆ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಲಿಸ್ಟ್ ಎ ವೃತ್ತಿಜೀವನದಲ್ಲಿ 60 ನೇ ಶತಕ ಪೂರೈಸಿದರು. ಇದಕ್ಕೂ ಮೊದಲು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಈಗ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಲಾ 60 ಶತಕಗಳನ್ನು ಪೂರೈಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 pm, Sun, 27 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us