
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ನಡೆದ 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಭರ್ಜರಿ ಪ್ರದರ್ಶನ ತೋರಿ 24 ರನ್ಗಳ ಜಯ ಸಾಧಿಸಿತು. ಫಾಫ್ ಡುಪ್ಲೆಸಿಸ್ (Faf Duplessis) ಹಾಗೂ ವಿರಾಟ್ ಕೊಹ್ಲಿ (Virat Kohli) ಆಕರ್ಷಕ ಅರ್ಧಶತಕ ಸಿಡಿಸಿ ಬರೋಬ್ಬರಿ 137 ರನ್ಗಳ ಜೊತೆಯಾಟ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಈ ಗೆಲುವಿನ ಮೂಲಕ 6 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ. ಅಲ್ಲದೆ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಆರ್ಸಿಬಿ ಆಟಗಾರರ ಕೈಯಲ್ಲಿದೆ.
ಆರ್ಸಿಬಿ ಹಾಗೂ ಪಂಜಾಬ್ ನಡುವಣ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಕಠಿಣವಾದ ಪಿಚ್ನಲ್ಲಿ ರನ್ ಗಳಿಸಲು ಕಷ್ಟಪಟ್ಟ ಉಭಯ ತಂಡಗಳಿಗೆ ಬೌಲರ್ಗಳು ಮಾರಕವಾಗಿ ಪರಿಣಮಿಸಿದರು. ಮೊಹಾಲಿಯ ಬೌನ್ಸ್ ಪಿಚ್ನಲ್ಲಿ ವೇಗಿಗಳು ಯಶಸ್ಸು ಸಾಧಿಸಿದರು. ಒಂದು ಹಂತದಲ್ಲಿ ಲಯ ಕಳೆದುಕೊಂಡ ಪಂಜಾಬ್ ನಾಯಕ ಸ್ಯಾಮ್ ಕುರ್ರನ್ ಅವರು ಫಾಫ್ ಡುಪ್ಲೆಸಿಸ್ಗೆ ಮಾರಕ ಬಾಲ್ ಎಸೆದರು. ಈ ಸಂದರ್ಭ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ.
IPL 2023 Points Table: ಪಾಯಿಂಟ್ಸ್ ಟೇಬಲ್ನಲ್ಲಿ ಮೇಲೇರಿದ RCB
16ನೇ ಓವರ್ನಲ್ಲಿ ಸ್ಯಾಮ್ ಕುರ್ರನ್ ಮೊದಲ ಎಸೆತವನ್ನು ಹಾಕುವಾಗ ಲಯ ತಪ್ಪಿ ಚೆಂಡು ಯಾವುದೇ ಪಿಚ್ ಆಗದೆ ನೇರವಾಗಿ ಸ್ಟ್ರೈಕ್ನಲ್ಲಿದ್ದ ಡುಪ್ಲೆಸಿಸ್ ಮುಖದ ಹತ್ತಿರದಿಂದ ಸಾಗಿತು. ನಿಯಂತ್ರಣ ತಪ್ಪಿ ಫಾಫ್ ಅಲ್ಲೆ ಕೆಳಗೆ ಬಿದ್ದರು. ಬಳಿಕ ಸ್ಯಾಮ್ ಅವರು ಡುಪ್ಲೆಸಿಸ್ ಬಳಿ ಬಂದು ಕ್ಷಮೆ ಕೇಳಿದರು. ಹೀಗೆ ಕ್ಷಮೆ ಕೇಳಿ ಹಿಂತಿರುಗುವಾಗ ನಾನ್ಸ್ಟ್ರೈಕ್ನಲ್ಲಿದ್ದ ವಿರಾಟ್ ಕೊಹ್ಲಿ ಅವರು ಕುರ್ರನ್ಗೆ ತಮಾಷೆಯಾಗಿ ಹೊಡೆಯಲು ಮುಂದಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
— LePakad7 (@AreBabaRe2) April 20, 2023
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಫಾಫ್ ಡುಪ್ಲೆಸಿಸ್ ಅವರ ಅಜೇಯ 84 ಮತ್ತು ವಿರಾಟ್ ಕೊಹ್ಲಿ ಅವರ 59 ರನ್ಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ಹರ್ಪ್ರೀತ್ ಬ್ರಾರ್ 2 ವಿಕೆಟ್ ಪಡೆದರು. ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ಪರ ಪ್ರಭ್ಸಿಮ್ರಾನ್ ಸಿಂಗ್ 46 ಹಾಗೂ ಜಿತೇಶ್ ಶರ್ಮಾ 41 ರನ್ ಗಳಿಸಿದರು. ಪಂಜಾಬ್ 18.2 ಓವರ್ನಲ್ಲಿ 150 ರನ್ಗೆ ಆಲೌಟ್ ಆಯಿತು. ಆರ್ಸಿಬಿ ಪರ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:47 am, Fri, 21 April 23