IND vs PAK, ICC World Cup: ರೋಹಿತ್ ಔಟಾಗಬಾರದೆಂದು ತಾನೇ ರನೌಟ್ ಆಗಲು ಮುಂದಾದ ಕೊಹ್ಲಿ?: ವಿಡಿಯೋ ವೈರಲ್

|

Updated on: Oct 15, 2023 | 8:20 AM

Virat Kohli-Rohit Sharma Run out mix-up, India vs Pakistan: ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಇನ್ನಿಂಗ್ಸ್​ನ ಒಂಬತ್ತನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ಸರಿಯಾದ ಕಾಲ್ ಸಿಗದ ಕಾರಣ ವಿರಾಟ್ ಕೊಹ್ಲಿ ಬಹುತೇಕ ರನ್ ಔಟ್ ಆಗುವಲ್ಲಿ ಇದ್ದರು. ಇಲ್ಲಿ ಕೊಹ್ಲಿ ಅವರು ರೋಹಿತ್​ರನ್ನು ಬಚಾವ್ ಮಾಡುವಂತಿತ್ತು. ವಿಡಿಯೋ ನೋಡಿ.

IND vs PAK, ICC World Cup: ರೋಹಿತ್ ಔಟಾಗಬಾರದೆಂದು ತಾನೇ ರನೌಟ್ ಆಗಲು ಮುಂದಾದ ಕೊಹ್ಲಿ?: ವಿಡಿಯೋ ವೈರಲ್
Virat Kohli Rohit Sharma Run Out
Follow us on

ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಶನಿವಾರ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ಸಾಕಷ್ಟು ಮನೋರಂಜನೆ ನೀಡಿತು. ಊಹಿಸಲಾಗದ ರೀತಿಯಲ್ಲಿ ಪಾಕಿಸ್ತಾನ ಬ್ಯಾಟರ್​ಗಳು ದಿಢೀರ್ ಪೆವಿಲಿಯನ್ ಸೇರಿಕೊಂಡರೆ, ಭಾರತ ಪರ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ತನ್ನ ಗೆಲುವಿನ ಓಟವನ್ನು ಮುಂದುವರೆಸುವ ಜೊತೆಗೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿತು. ಇದರ ನಡುವೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತನ್ನ ವಿಕೆಟ್ ಅನ್ನು ರೋಹಿತ್ ಶರ್ಮಾ ಅವರಿಗಾಗಿ ತ್ಯಾಗ ಮಾಡಲು ಕೂಡ ಮುಂದಾಗಿದ್ದರು.

ಭಾರತ ಬ್ಯಾಟಿಂಗ್ ಇನ್ನಿಂಗ್ಸ್​ನ ಒಂಬತ್ತನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ಸರಿಯಾದ ಕಾಲ್ ಸಿಗದ ಕಾರಣ ವಿರಾಟ್ ಕೊಹ್ಲಿ ಬಹುತೇಕ ರನ್ ಔಟ್ ಆಗುವಲ್ಲಿ ಇದ್ದರು. ಇದು ರೋಹಿತ್​ರನ್ನು ಬಚಾವ್ ಮಾಡುವಂತಿತ್ತು. ಹ್ಯಾರಿಸ್ ರೌಫ್ ಬೌಲಿಂಗ್​ನಲ್ಲಿ ರೋಹಿತ್ ಅವರು ಮಿಡ್ ಆನ್ ಕಡೆಗೆ ಬ್ಯಾಟ್ ಬೀಸಿದರು. ಆದರೆ, ಚೆಂಡು ಅಲ್ಲೆ ಪಕ್ಕದಲ್ಲಿದ್ದ ಶಾಹಿನ್ ಅಫ್ರಿದಿ ಕೈ ಸೇರಿತು.

ಇದನ್ನೂ ಓದಿ
ಕೊಹ್ಲಿ ಬಳಿ ಓಡಿ ಬಂದು ಸಹಿ ಮಾಡಿದ ಜೆರ್ಸಿ ಕೇಳಿದ ಬಾಬರ್ ಅಝಂ: ವಿಡಿಯೋ ನೋಡಿ
ಪಾಕಿಸ್ತಾನ ನೀಡಿದ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ ರೋಹಿತ್ ಶರ್ಮಾ
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತೇ?
IND vs PAK ಪಂದ್ಯದಲ್ಲಿ ವಿರಾಟ್ ಕೊಹ್ಲಿಯಿಂದ ನಡೆಯಿತು ದೊಡ್ಡ ತಪ್ಪು

ಬಂದಿದ್ದಕ್ಕೆ ಧನ್ಯವಾದ, ಬಾಯ್, ಬಾಯ್: ವಿಕೆಟ್ ಕಿತ್ತಾಗ ಹಾರ್ದಿಕ್ ಕೋಪದಲ್ಲಿ ಆಡಿದ ಮಾತು ವೈರಲ್

ರೋಹಿತ್ ಒಂದು ರನ್​ಗೆಂದು ಓಡಲು ಶುರುಮಾಡಿದರು. ರೋಹಿತ್ ಕ್ರೀಸ್​ ಬಿಟ್ಟು ಅರ್ಧ ಪಿಚ್​ನತ್ತ ಬಂದಾಗ ಅಫ್ರಿದಿ ಚೆಂಡನ್ನು ವಿಕೆಟ್ ಕೀಪರ್ ಕಡೆ ಎಸೆಯಲು ಮುಂದಾದರು. ಆಗ ತಕ್ಷಣ ರೋಹಿತ್ ಪುನಃ ಕ್ರೀಸ್​ಗೆ ಹಿಂತಿರುಗಲು ಮನಸ್ಸು ಮಾಡಿದರು. ಹಾಗೆ ರೋಹಿತ್ ತಿರುಗಿ ಹೋಗಿದ್ದರೆ ಖಚಿತವಾಗಿ ಔಟ್ ಆಗುತ್ತಿದ್ದರು. ಆದರೆ, ಕೊಹ್ಲಿ ರೋಹಿತ್​ರನ್ನು ಬಾ ಎಂದು ಕರೆದು ನಾಯಕನನ್ನು ಉಳಿಸಲು ನಿರ್ಧರಿಸಿ ಓಡಿದರು. ಆದರೆ, ಶಾಹಿನ್ ವಿಕೆಟ್ ಕೀಪರ್ ಕಡೆ ಎಸೆದ ಚೆಂಡು ವಿಕೆಟ್​ಗೆ ಬಡಿಯದೆ ಅತ್ತ ಸಾಗಿತು. ಹೀಗಾಗಿ ಕೊಹ್ಲಿ ಕೂಡ ರನೌಟ್​ನಿಂದ ಪಾರಾದರು.

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ರನೌಟ್ ಆಗಬಹುದಿದ್ದ ವಿಡಿಯೋ:

 

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಈ ಘಟನೆ ನಡೆದು ಮುಂದಿನ ಓವರ್‌ನಲ್ಲಿ ನಿರ್ಗಮಿಸಿದರು. ಕೊಹ್ಲಿ 18 ಎಸೆತಗಳಲ್ಲಿ 16 ರನ್ ಗಳಿಸಿದ್ದಾಗ ಹಸನ್ ಅಲಿ ಎಸೆತದಲ್ಲಿ ನವಾಜ್‌ಗೆ ಕ್ಯಾಚ್ ನೀಡಿದರು. ಕೊಹ್ಲಿ ಔಟಾದ ನಂತರ, ಶ್ರೇಯಸ್ ಅಯ್ಯರ್ ಜೊತೆಗೂಡಿ ರೋಹಿತ್ ಮನಬಂದಂತೆ ಬ್ಯಾಟ್ ಬೀಸಿ ತಂಡಕ್ಕೆ ಬೇಗನೆ ಗೆಲುವು ತಂದುಕೊಟ್ಟರು. ಹಿಟ್​ಮ್ಯಾನ್ 63 ಎಸೆತಗಳಲ್ಲಿ 6 ಫೋರ್, 6 ಸಿಕ್ಸರ್ ಚಚ್ಚಿ 86 ರನ್ ಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ