Hardik Pandya, IND vs PAK: ಬಂದಿದ್ದಕ್ಕೆ ಧನ್ಯವಾದ, ಬಾಯ್, ಬಾಯ್: ವಿಕೆಟ್ ಕಿತ್ತಾಗ ಹಾರ್ದಿಕ್ ಕೋಪದಲ್ಲಿ ಆಡಿದ ಮಾತು ವೈರಲ್
India vs Pakistan, ICC World Cup 2023: ಐಸಿಸಿ ಏಕದಿನ ವಿಶ್ವಕಪ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಇಮಾಮ್ ಉಲ್ ಹಖ್ ಅವರ ವಿಕೆಟ್ ಕಿತ್ತರು. ಈ ಸಂದರ್ಭ ಇಮಾಮ್ ಪೆವಿಲಿಯನ್ಗೆ ಹೋಗುವಾಗ ಹಾರ್ದಿಕ್ ಆಡಿದ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ನ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ರೋಚಕತೆ ಸೃಷ್ಟಿಸುತ್ತಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿರುವ ಪಾಕಿಸ್ತಾನ 100 ರನ್ಗು ಮೊದಲೇ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ವಿಕೆಟ್ ಮೊಹಮ್ಮದ್ ಸಿರಾಜ್ ಪಡೆದುಕೊಂಡರೆ, ಎರಡನೇ ವಿಕೆಟ್ ಅನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಿತ್ತರು. ಈ ಸಂದರ್ಭ ಪಾಂಡ್ಯ ಕೊಟ್ಟ ರಿಯಾಕ್ಷನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕ್ರೀಸ್ ಕಚ್ಚಿ ನಿಂತು ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಇಮಾಮ್-ಉಲ್-ಹಖ್ ವಿಕೆಟ್ ಭಾರತಕ್ಕೆ ಮುಖ್ಯವಾಗಿತ್ತು. ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರಿತ್ ಬುಮ್ರಾ ಬೌಲಿಂಗ್ನಲ್ಲಿ ಇಮಾಮ್ ಅರಾಮವಾಗಿ ಬ್ಯಾಟ್ ಬೀಸುತ್ತಿದ್ದರು. ಹೀಗಾಗಿ ನಾಯಕ ರೋಹಿತ್ಗೆ ಬೌಲಿಂಗ್ ಬದಲಾವಣೆ ಅನಿವಾರ್ಯವಾಯಿತು. ಈ ಸಂದರ್ಭ ಬೌಲಿಂಗ್ ಮಾಡಲು ಬಂದಿದ್ದು ಹಾರ್ದಿಕ್ ಪಾಂಡ್ಯ. ಆದರೆ, ಪಾಂಡ್ಯ ಅವರ ಎರಡನೇ ಎಸೆತದಲ್ಲಿ ಇಮಾಮ್ ಚೆಂಡನ್ನು ಫೋರ್ಗೆ ಅಟ್ಟಿದರು. ಈ ಸಂದರ್ಭ ಪಾಂಡ್ಯ ಹೊಸ ಸ್ಟ್ರಾಟಜಿ ಮಾಡಿದರು.
ಭಾರತ-ಪಾಕಿಸ್ತಾನ ಪಂದ್ಯ ಆರಂಭಕ್ಕೂ ಮುನ್ನ ಅಪರೂಪದ ಘಟನೆ: ರಾಷ್ಟ್ರಗೀತೆ ಹಾಡುವಾಗ ಏನಾಯಿತು ನೋಡಿ
ತನ್ನ ಮೂರನೇ ಎಸೆತವನ್ನು ಹಾಕುವುದಕ್ಕೂ ಮುನ್ನ ಹಾರ್ದಿಕ್ ಅವರು ಕೈ ಮುಗಿದು ವೈಡ್ ಆಫ್ ಸ್ಟಂಪ್ ಮೂಲಕ ಚೆಂಡನ್ನು ಎಸೆದರು. ಇದನ್ನು ಬ್ಯಾಕ್ ಫುಟ್ ಡ್ರೈವ್ನಲ್ಲಿ ಆಡಲು ಇಮಾಮ್ ಯತ್ನಿಸಿದರು. ಆದರೆ, ಚೆಂಡು ಕೊಂಚ ಟರ್ನ್ ಆಗಿದ್ದರಿಂದ ಬ್ಯಾಟ್ ತುದಿಗೆ ತಾಗಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಕೈ ಸೇರಿತು. 38 ಎಸೆತಗಳಲ್ಲಿ 6 ಫೋರ್ ಬಾರಿಸಿ 36 ರನ್ ಗಳಿಸಿದ್ದ ಇಮಾಮ್ ಉಲ್ ಹಖ್ ಔಟಾದರು. ಹೀಗೆ ಇಮಾಮ್ ಪೆವಿಲಿಯನ್ಗೆ ತೆರಳುವ ಸಂದರ್ಭ ಹಾರ್ದಿಕ್ ಕೋಪದಲ್ಲಿ ತಮ್ಮ ಕೈಯಿಂದ ಬಾಯ್.. ಬಾಯ್.. ಎಂದು ಸನ್ನೆ ಮಾಡಿದ್ದಾರೆ. ಜೊತೆಗೆ ”ಇಲ್ಲಿದೆ ಬಂದಿದ್ದಕ್ಕೆ ಧನ್ಯವಾದ” ಎಂದು ಹೇಳಿದ್ದಾರೆ. ಇದರ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಇಮಾಮ್ ಉಲ್ ಹಖ್ ಔಟಾದಾಗ ಹಾರ್ದಿಕ್ ಪಾಂಡ್ಯ ಕೊಟ್ಟ ರಿಯಾಕ್ಷನ್ ವಿಡಿಯೋ:
Bye, bye – Imam Ul Haq…!!!
Thank you for coming, says Hardik Pandya. pic.twitter.com/KBenNA82po
— Mufaddal Vohra (@mufaddal_vohra) October 14, 2023
#HardikPandya Mantra 😁#INDvPAKpic.twitter.com/ER4aiYqwoT
— 😇 (@pa1s_tweets) October 14, 2023
ಪಾಕ್ ಪರ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ ಶಫೀಖ್ ಹಾಗೂ ಇಮಾನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 8 ಓವರ್ ಆಗುವ ಹೊತ್ತಿಗೆ 41 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್ನಲ್ಲಿ ಶಫೀಖ್ (20) ಎಲ್ಬಿ ಬಲೆಗೆ ಸಿಲುಕಿದರು. ನಂತರ ಇಮಾಮ್ ಕೂಡ ಬೇಗನೆ ಪೆವಿಲಿಯನ್ ಸೇರಿಕೊಂಡರು. ಮೊಹಮ್ಮದ್ ರಿಜ್ವಾನ್ ಬಂದ ಕೂಡಲೇ ಜಡೇಜಾ ಅವರ ಎಸೆತದಲ್ಲಿ ಎಲ್ಬಿ ಬೆಲೆಗೆ ಸಿಲುಕಿದರು. ಅಂಪೈರ್ ಕೂಡ ಔಟ್ ತೀರ್ಮಾನ ಕೊಟ್ಟರು. ಆದರೆ, ಪಾಕ್ ರಿವ್ಯೂ ಪಡೆದುಕೊಂಡು ಬಚಾವ್ ಆಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ