Ind vs Pak ICC World Cup LIVE Score: ಪಾಕ್ ಪಡೆಗೆ ಸೋಲುಣಿಸಿದ ಟೀಮ್ ಇಂಡಿಯಾ
Ind vs Pak ICC World Cup 2023 LIVE Score and Updates in Kannada: ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಕೇವಲ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 86 ರನ್ ಬಾರಿಸಿದ ಹಿಟ್ಮ್ಯಾನ್ ಸ್ಪೋಟಕ ಇನಿಂಗ್ಸ್ ಆಡಿದರು.

ಏಕದಿನ ವಿಶ್ವಕಪ್ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಭಾರತ ತಂಡವು ಅಮೋಘ ಗೆಲುವು ದಾಖಲಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್ಗಳು ಪಾಕಿಸ್ತಾನ್ ತಂಡವನ್ನು 42.5 ಓವರ್ಗಳಲ್ಲಿ 191 ರನ್ಗಳಿಗೆ ಆಲೌಟ್ ಮಾಡಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಕೇವಲ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 86 ರನ್ ಬಾರಿಸಿದ ಹಿಟ್ಮ್ಯಾನ್ ಸ್ಪೋಟಕ ಇನಿಂಗ್ಸ್ ಆಡಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 30.3 ಓವರ್ಗಳಲ್ಲಿ 192 ರನ್ಗಳ ಗುರಿ ಬೆನ್ನತ್ತಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಭಾರತ (ಪ್ಲೇಯಿಂಗ್ 11): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ್ (ಪ್ಲೇಯಿಂಗ್ 11): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಝ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹಸನ್ ಅಲಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.
LIVE NEWS & UPDATES
-
Ind vs Pak ICC World Cup LIVE Score: ಟೀಮ್ ಇಂಡಿಯಾಗೆ ಭರ್ಜರಿ ಜಯ
ಮೊಹಮ್ಮದ್ ನವಾಝ್ ಎಸೆದ 31ನೇ ಓವರ್ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಶ್ರೇಯಸ್ ಅಯ್ಯರ್.
ಈ ಫೋರ್ನೊಂದಿಗೆ 62 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಯ್ಯರ್.
ಭಾರತ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ.
ಪಾಕಿಸ್ತಾನ್– 191 (42.5)
ಭಾರತ– 192/3 (30.3)
-
Ind vs Pak ICC World Cup LIVE Score: 30 ಓವರ್ಗಳು ಮುಕ್ತಾಯ
ಹಸನ್ ಅಲಿ ಎಸೆದ 30ನೇ ಓವರ್ನ 2ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್.
ಟೀಮ್ ಇಂಡಿಯಾಗೆ ಕೇವಲ 6 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 186/3 (30)
-
-
Ind vs Pak ICC World Cup LIVE Score: ಕೆಎಲ್ ಕ್ಲಾಸಿ ಶಾಟ್
ಮೊಹಮ್ಮದ್ ನವಾಝ್ ಎಸೆದ 29ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಕೆಎಲ್ ರಾಹುಲ್.
29 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಯಾ ಮೊತ್ತ 182 ರನ್ಗಳು.
126 ಎಸೆತಗಳಲ್ಲಿ ಭಾರತ ತಂಡಕ್ಕೆ ಕೇವಲ 10 ರನ್ಗಳ ಗುರಿ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಾಹುಲ್ ಬ್ಯಾಟಿಂಗ್.
IND 182/3 (29)
-
Ind vs Pak ICC World Cup LIVE Score: ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್
ಗೆಲುವಿನತ್ತ ದಾಪುಗಾಲಿಡುತ್ತಿರುವ ಟೀಮ್ ಇಂಡಿಯಾ.
27 ಓವರ್ಗಳಲ್ಲಿ ಟೀಮ್ ಇಂಡಿಯಾ ಸ್ಕೋರ್ 170 ರನ್ಗಳು.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂಬ ಕೆಎಲ್ ರಾಹುಲ್ ಬ್ಯಾಟಿಂಗ್.
IND 170/3 (27)
ಶುಭ್ಮನ್ ಗಿಲ್ (16), ವಿರಾಟ್ ಕೊಹ್ಲಿ (16) ಹಾಗೂ ರೋಹಿತ್ ಶರ್ಮಾ (86) ಔಟ್.
-
Ind vs Pak ICC World Cup LIVE Score: 25 ಓವರ್ಗಳು ಮುಕ್ತಾಯ
25 ಓವರ್ಗಳ ಮುಕ್ತಾಯದ ವೇಳೆಗೆ 165 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಭಾರತ ತಂಡಕ್ಕೆ ಗೆಲ್ಲಲು 25 ಓವರ್ ಗಳಲ್ಲಿ ಕೇವಲ 27 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ (41) ಹಾಗೂ ಕೆಎಲ್ ರಾಹುಲ್ (4) ಬ್ಯಾಟಿಂಗ್.
IND 165/3 (25)
-
-
Ind vs Pak ICC World Cup LIVE Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ
ಶಾಹೀನ್ ಶಾ ಅಫ್ರಿದಿ ಎಸೆದ 22ನೇ ಓವರ್ನ 4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ರೋಹಿತ್ ಶರ್ಮಾ.
63 ಎಸೆತಗಳಲ್ಲಿ 86 ರನ್ ಬಾರಿಸಿ ಶತಕ ವಂಚಿತರಾಗಿ ಹಿಂತಿರುಗಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 156/3 (21.4)
-
Ind vs Pak ICC World Cup LIVE Score: ಭರ್ಜರಿ ಸಿಕ್ಸರ್
ಮೊಹಮ್ಮದ್ ನವಾಝ್ ಎಸೆದ 21ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್.
ನಾಲ್ಕನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 38 ರನ್ಗಳ ಅವಶ್ಯಕತೆ.
IND 154/2 (21)
-
Ind vs Pak ICC World Cup LIVE Score: 20 ಓವರ್ಗಳು ಮುಕ್ತಾಯ
ಶಾದಾಬ್ ಖಾನ್ ಎಸೆದ 20ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
20 ಓವರ್ಗಳ ಮುಕ್ತಾಯದ ವೇಳೆಗೆ 142 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಭಾರತ ತಂಡಕ್ಕೆ ಗೆಲ್ಲಲು ಇನ್ನು ಕೇವಲ 50 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
IND 142/2 (20)
-
Ind vs Pak ICC World Cup LIVE Score: ಅಯ್ಯರ್-ಸಿಕ್ಸರ್
ಶಾದಾಬ್ ಖಾನ್ ಎಸೆದ 18ನೇ ಓವರ್ನ ಮೂರನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಟೀಮ್ ಇಂಡಿಯಾಗೆ ಕೇವಲ 66 ರನ್ಗಳ ಅವಶ್ಯಕತೆ.
IND 126/2 (18)
-
Ind vs Pak ICC World Cup LIVE Score: ಆಕರ್ಷಕ ಬೌಂಡರಿ
ಶಾದಾಬ್ ಖಾನ್ ಎಸೆದ 3ನೇ ಎಸೆತದಲ್ಲಿ ಸೂಪರ್ ಸ್ಕ್ವೇರ್ ಡ್ರೈವ್ ಮೂಲಕ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
PAK 191 (42.5)
IND 116/2 (16)
-
Ind vs Pak ICC World Cup LIVE Score: ರೋಹಿಟ್-ಶಾಟ್
ಹ್ಯಾರಿಸ್ ರೌಫ್ ಎಸೆದ 15ನೇ ಓವರ್ನ ಮೊದಲ ಎಸೆತದಲ್ಲೇ ಪುಲ್ ಶಾಟ್ ಮೂಲಕ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
15 ಓವರ್ಗಳ ಮುಕ್ತಾಯದ ವೇಳೆಗೆ 111 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಶುಭ್ಮನ್ ಗಿಲ್ (16) ಹಾಗೂ ವಿರಾಟ್ ಕೊಹ್ಲಿ (16) ಔಟ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (61) ಹಾಗೂ ಶ್ರೇಯಸ್ ಅಯ್ಯರ್ (16) ಬ್ಯಾಟಿಂಗ್.
IND 111/2 (15)
-
Ind vs Pak ICC World Cup LIVE Score: ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ
36 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ.
14 ಓವರ್ಗಳಲ್ಲಿ ಶತಕ ಪೂರೈಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 101/2 (14)
-
Ind vs Pak ICC World Cup LIVE Score: ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್
ಹ್ಯಾರಿಸ್ ರೌಫ್ ಎಸೆದ 13ನೇ ಓವರ್ನ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 96/2 (13)
ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ..ಔಟ್.
-
Ind vs Pak ICC World Cup LIVE Score: ಅಯ್ಯರ್ ಮಾರ್ಕ್
ಹಸನ್ ಅಲಿ 12ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್.
12 ಓವರ್ ಮುಕ್ತಾಯದ ವೇಳೆಗೆ 88 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 88/2 (12)
-
Ind vs Pak ICC World Cup LIVE Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ
ಹಸನ್ ಅಲಿ ಎಸೆದ 10ನೇ ಓವರ್ನ ಕೊನೆಯ ಎಸೆತದಲ್ಲಿ ಲಾಂಗ್ ಆನ್ನಲ್ಲಿ ಸುಲಭ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ.
18 ಎಸೆತಗಳಲ್ಲಿ 16 ರನ್ಗಳಿಸಿ ವಿಕೆಟ್ ಒಪ್ಪಿಸಿದ ಕಿಂಗ್ ಕೊಹ್ಲಿ.
10 ಓವರ್ ಮುಕ್ತಾಯದ ವೇಳೆಗೆ 79 ರನ್ ಕಲೆಹಾಕಿದ ಟೀಮ್ ಇಂಡಿಯಾ.
IND 79/2 (10)
-
Ind vs Pak ICC World Cup LIVE Score: ಹಿಟ್ಮ್ಯಾನ್ ಸಿಡಿಲಬ್ಬರ
ಹ್ಯಾರಿಸ್ ರೌಫ್ ಎಸೆದ 9ನೇ ಓವರ್ನ 2ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
5ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹಿಟ್ಮ್ಯಾನ್.
IND 77/1 (9)
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
-
Ind vs Pak ICC World Cup LIVE Score: ರೋ-ಹಿಟ್ ಶರ್ಮಾ
ಮೊಹಮ್ಮದ್ ನವಾಝ್ ಎಸೆದ 8ನೇ ಓವರ್ನ 4ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಬಾರಿಸಿದ ರೋಹಿತ್ ಶರ್ಮಾ.
8 ಓವರ್ಗಳ ಮುಕ್ತಾಯದ ವೇಳೆಗೆ 63 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
IND 63/1 (8)
-
Ind vs Pak ICC World Cup LIVE Score: ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್
ಶಾಹೀನ್ ಶಾ ಅಫ್ರಿದಿ ಎಸೆದ 7ನೇ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ.
7ನೇ ಓವರ್ನಲ್ಲೇ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ.
IND 54/1 (7)
-
Ind vs Pak ICC World Cup LIVE Score: ಹಸನ್ ಅಲಿ ಉತ್ತಮ ಬೌಲಿಂಗ್
6ನೇ ಓವರ್ನಲ್ಲಿ ಕೇವಲ 1 ರನ್ ನೀಡಿದ ಹಸನ್ ಅಲಿ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 39/1 (6)
ಶುಭ್ಮನ್ ಗಿಲ್ (16) ಔಟ್.
-
Ind vs Pak ICC World Cup LIVE Score: 5 ಓವರ್ಗಳು ಮುಕ್ತಾಯ
ಶಾಹೀನ್ ಅಫ್ರಿದಿ ಎಸೆದ 5ನೇ ಓವರ್ನ ಕೊನೆಯ ಎಸೆತದಲ್ಲಿ ಕ್ಲಾಸಿಕ್ ಕವರ್ ಡ್ರೈವ್ ಬಾರಿಸಿದ ವಿರಾಟ್ ಕೊಹ್ಲಿ…ಫೋರ್ ರನ್ಸ್.
5 ಓವರ್ಗಳ ಮುಕ್ತಾಯದ ವೇಳೆಗೆ 38 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 38/1 (5)
-
Ind vs Pak ICC World Cup LIVE Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ
ಶಾಹೀನ್ ಅಫ್ರಿದಿ ಎಸೆದ 3ನೇ ಓವರ್ನ 5ನೇ ಎಸೆತದಲ್ಲಿ ಸ್ಕ್ವೇರ್ ಕಟ್ಗೆ ಯತ್ನಿಸಿದ ಶುಭ್ಮನ್ ಗಿಲ್…ಕ್ಯಾಚ್.
11 ಎಸೆತಗಳಲ್ಲಿ 16 ರನ್ ಬಾರಿಸಿ ನಿರ್ಗಮಿಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
IND 23/1 (3)
-
Ind vs Pak ICC World Cup LIVE Score: ಶುಭ್ಮನ್ ಸೂಪರ್ ಶಾಟ್
ಹಸನ್ ಅಲಿ ಎಸೆದ 2ನೇ ಓವರ್ನ ಮೂರನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್.
5ನೇ ಎಸೆತದಲ್ಲಿ ಶುಭ್ಮನ್ ಗಿಲ್ ಆಕರ್ಷಕ ಕವರ್ ಡ್ರೈವ್…ಫೋರ್.
6ನೇ ಎಸೆತದಲ್ಲಿ ಹಿಂಬದಿಯತ್ತ ಮತ್ತೊಂದು ಫೋರ್ ಬಾರಿಸಿದ ಗಿಲ್.
IND 22/0 (2)
-
Ind vs Pak ICC World Cup LIVE Score: ಟೀಮ್ ಇಂಡಿಯಾ ಶುಭಾರಂಭ
ಶಾಹೀನ್ ಶಾ ಅಫ್ರಿದಿ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.
ಮೂರನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್.
ಮೊದಲ ಓವರ್ನಲ್ಲೇ 10 ರನ್ ಕಲೆಹಾಕಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ.
IND 10/0 (1)
-
Ind vs Pak ICC World Cup LIVE Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಟೀಮ್ ಇಂಡಿಯಾ ಆರಂಭಿಕರು: ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ.
ಪಾಕ್ ಪರ ಮೊದಲ ಓವರ್: ಶಾಹೀನ್ ಶಾ ಅಫ್ರಿದಿ
ಭಾರತ ತಂಡದ ಬ್ಯಾಟಿಂಗ್ ಲೈನಪ್: ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್
-
Ind vs Pak ICC World Cup LIVE Score: ಭಾರತಕ್ಕೆ 192 ರನ್ಗಳ ಗುರಿ
ಭಾರತ ತಂಡಕ್ಕೆ 192 ರನ್ಗಳ ಗುರಿ ನೀಡಿದ ಪಾಕಿಸ್ತಾನ್ ತಂಡ
Innings Break!
A cracker of a bowling performance from #TeamIndia! 👌 👌
Jasprit Bumrah, Kuldeep Yadav, Ravindra Jadeja, Hardik Pandya & Mohd. Siraj share the spoils with 2️⃣ wickets each!
Scorecard ▶️ https://t.co/H8cOEm3quc#CWC23 | #INDvPAK | #MeninBlue pic.twitter.com/omDQZnAbg7
— BCCI (@BCCI) October 14, 2023
-
Ind vs Pak ICC World Cup LIVE Score: ಭಾರತೀಯ ಬೌಲರ್ಗಳ ಮಿಂಚಿಂಗ್
ಮೊಹಮ್ಮದ್ ಸಿರಾಜ್- 2 ವಿಕೆಟ್
ಹಾರ್ದಿಕ್ ಪಾಂಡ್ಯ- 2 ವಿಕೆಟ್
ಜಸ್ಪ್ರೀತ್ ಬುಮ್ರಾ- 2 ವಿಕೆಟ್
ಕುಲ್ದೀಪ್ ಯಾದವ್ – 2 ವಿಕೆಟ್
ರವೀಂದ್ರ ಜಡೇಜಾ- 2 ವಿಕೆಟ್
Ravindra Jadeja enters the wicket-taking party! 🥳#TeamIndia claim wickets on consecutive deliveries and Pakistan are 9 down now.
Follow the match ▶️ https://t.co/H8cOEm3quc#CWC23 | #INDvPAK | #MeninBlue pic.twitter.com/oK605zHaOm
— BCCI (@BCCI) October 14, 2023
BOOM! 💥
An incredible delivery THAT from Jasprit Bumrah! 🔥
He gets the big wicket of Mohammad Rizwan 👌
Follow the match ▶️ https://t.co/H8cOEm3quc#CWC23 | #TeamIndia | #INDvPAK | #MeninBlue pic.twitter.com/BDrl8EcO7F
— BCCI (@BCCI) October 14, 2023
L. B. W!@imkuldeep18 strikes as #TeamIndia scalp the 4⃣th Pakistan wicket! 👏 👏
Follow the match ▶️ https://t.co/H8cOEm3quc#CWC23 | #INDvPAK | #MeninBlue pic.twitter.com/MYVe4p0P8w
— BCCI (@BCCI) October 14, 2023
Edged & taken!
Vice-captain Hardik Pandya strikes & #TeamIndia get their second wicket 🙌
Imam-ul-Haq departs.
Follow the match ▶️ https://t.co/H8cOEm3quc#CWC23 | #TeamIndia | #INDvPAK | #MeninBlue pic.twitter.com/NENRszs31q
— BCCI (@BCCI) October 14, 2023
L.B.W! 😎
Mohd. Siraj gets the opening wicket for #TeamIndia!
Pakistan lose Abdullah Shafique.
Follow the match ▶️ https://t.co/H8cOEm3quc#CWC23 | #INDvPAK | #MeninBlue pic.twitter.com/WJIsgxs4Ig
— BCCI (@BCCI) October 14, 2023
-
Ind vs Pak ICC World Cup LIVE Score: ಪಾಕಿಸ್ತಾನ್ ಆಲೌಟ್
ರವೀಂದ್ರ ಜಡೇಜಾ ಎಸೆದ 43ನೇ ಓವರ್ನ 5ನೇ ಎಸೆತದಲ್ಲಿ ಹ್ಯಾರಿಸ್ ರೌಫ್ ಎಲ್ಬಿಡಬ್ಲ್ಯೂ…ಔಟ್
ಕೇವಲ 191 ರನ್ಗಳಿಗೆ ಆಲೌಟ್ ಆದ ಪಾಕಿಸ್ತಾನ್.
ಪಾಕಿಸ್ತಾನ್- 191 (42.5)
ಟೀಮ್ ಇಂಡಿಯಾ ಪರ ತಲಾ 2 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್, ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್.
-
Ind vs Pak ICC World Cup LIVE Score: 42 ಓವರ್ಗಳು ಮುಕ್ತಾಯ
42 ಓವರ್ಗಳ ಮುಕ್ತಾಯದ ವೇಳೆಗೆ 190 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
9 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಬ್ಯಾಟಿಂಗ್.
PAK 190/9 (42)
-
Ind vs Pak ICC World Cup LIVE Score: ಪಾಕಿಸ್ತಾನ್ 9ನೇ ವಿಕೆಟ್ ಪತನ
ರವೀಂದ್ರ ಜಡೇಜಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಹಸನ್ ಅಲಿ…ಶುಭ್ಮನ್ಗಿಲ್ಗೆ ಸುಲಭ ಕ್ಯಾಚ್.
19 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹಸನ್ ಅಲಿ. ಟೀಮ್ ಇಂಡಿಯಾಗೆ 9ನೇ ಯಶಸ್ಸು.
ಕ್ರೀಸ್ನಲ್ಲಿ ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಅಫ್ರಿದಿ ಬ್ಯಾಟಿಂಗ್.
PAK 187/9 (40.1)
-
Ind vs Pak ICC World Cup LIVE Score: 40 ಓವರ್ಗಳು ಮುಕ್ತಾಯ
ಹಾರ್ದಿಕ್ ಪಾಂಡ್ಯ ಎಸೆದ 40ನೇ ಓವರ್ನ ಮೊದಲ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಹಸನ್ ಅಲಿ.
ಕೊನೆಯ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಮೊಹಮ್ಮದ್ ನವಾಝ್.
14 ಎಸೆತಗಳಲ್ಲಿ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನವಾಝ್.
40 ಓವರ್ಗಳ ಮುಕ್ತಾಯದ ವೇಳೆಗೆ 187 ರನ್ ಕಲೆಹಾಕಿದ ಪಾಕಿಸ್ತಾನ್.
PAK 187/8 (40)
-
Ind vs Pak ICC World Cup LIVE Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್
ಪಾಕ್ ವಿರುದ್ಧ ಭಾರತೀಯರ ಭರ್ಜರಿ ಬೌಲಿಂಗ್.
37 ಓವರ್ಗಳ ಮುಕ್ತಾಯದ ವೇಳೆಗೆ 174 ರನ್ ಕಲೆಹಾಕಿರುವ ಪಾಕಿಸ್ತಾನ್.
ಕ್ರೀಸ್ನಲ್ಲಿ ಹಸಲಿ ಅಲಿ ಹಾಗೂ ಮೊಹಮ್ಮದ್ ನವಾಝ್ ಬ್ಯಾಟಿಂಗ್.
PAK 174/7 (37)
-
Ind vs Pak ICC World Cup LIVE Score: ಪಾಕಿಸ್ತಾನ್ 7ನೇ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆದ 36ನೇ ಓವರ್ನ 2ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಶಾದಾಬ್ ಖಾನ್.
5 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶಾದಾಬ್ ಖಾನ್.
PAK 171/7 (35.2)
-
Ind vs Pak ICC World Cup LIVE Score: 35 ಓವರ್ಗಳು ಮುಕ್ತಾಯ
35 ಓವರ್ಗಳ ಮುಕ್ತಾಯದ ವೇಳೆಗೆ 170 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಶಾದಾಬ್ ಖಾನ್ ಹಾಗೂ ಮೊಹಮ್ಮದ್ ನವಾಝ್ ಬ್ಯಾಟಿಂಗ್.
ಕೊನೆಯ 5 ಓವರ್ಗಳಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ ಟೀಮ್ ಇಂಡಿಯಾ ಬೌಲರ್ಗಳು.
PAK 170/6 (35)
-
Ind vs Pak ICC World Cup LIVE Score: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್
ಜಸ್ಪ್ರೀತ್ ಬುಮ್ರಾ ಎಸೆದ 34ನೇ ಓವರ್ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ರಿಝ್ವಾನ್ ಕ್ಲೀನ್ ಬೌಲ್ಡ್.
69 ಎಸೆತಗಳಲ್ಲಿ 49 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮೊಹಮ್ಮದ್ ರಿಝ್ವಾನ್.
ಕೊನೆಯ ಎರಡು ಓವರ್ಗಳಲ್ಲಿ 3 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ.
PAK 168/6 (34)
-
Ind vs Pak ICC World Cup LIVE Score: ಕುಲ್ದೀಪ್ ಸ್ಪಿನ್ ಮ್ಯಾಜಿಕ್
ಕುಲ್ದೀಪ್ ಯಾದವ್ ಎಸೆದ 33ನೇ ಓವರ್ನ ಕೊನೆಯ ಎಸೆತದಲ್ಲಿ ಇಫ್ತಿಕರ್ ಅಹ್ಮದ್ ಕ್ಲೀನ್ ಬೌಲ್ಡ್.
ಒಂದೇ ಓವರ್ನಲ್ಲಿ 2 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್.
ಇದೇ ಓವರ್ನ 2ನೇ ಎಸೆತದಲ್ಲಿ ಸೌದ್ ಶಕೀಲ್ ಎಲ್ಬಿಡಬ್ಲ್ಯೂ ಆಗಿ ಔಟಾಗಿದ್ದರು.
PAK 166/5 (33)
-
Ind vs Pak ICC World Cup LIVE Score: ಪಾಕಿಸ್ತಾನ್ 4ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ 33ನೇ ಓವರ್ನ 2ನೇ ಎಸೆದಲ್ಲಿ ಎಲ್ಬಿಡಬ್ಲ್ಯೂ ಆದ ಸೌದ್ ಶಕೀಲ್.
10 ಎಸೆತಗಳಲ್ಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಸೌದ್ ಶಕೀಲ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಬ್ಯಾಟಿಂಗ್.
PAK 162/4 (32.2)
-
Ind vs Pak ICC World Cup LIVE Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್
32 ಓವರ್ಗಳ ಮುಕ್ತಾಯದ ವೇಳೆಗೆ 162 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.
ಟೀಮ್ ಇಂಡಿಯಾ ಉತ್ತಮ ಬೌಲಿಂಗ್, ರನ್ ಗಳಿಸಲು ಪರದಾಡುತ್ತಿರುವ ಪಾಕಿಸ್ತಾನ್ ಬ್ಯಾಟರ್ಗಳು.
PAK 162/3 (32)
-
Ind vs Pak ICC World Cup LIVE Score: ಮಿಯಾ ಮ್ಯಾಜಿಕ್ – ಕ್ಲೀನ್ ಬೌಲ್ಡ್
ಮೊಹಮ್ಮದ್ ಸಿರಾಜ್ ಎಸೆದ 30ನೇ ಓವರ್ನ 4ನೇ ಎಸೆತದಲ್ಲಿ ಬಾಬರ್ ಆಝಂ ಕ್ಲೀನ್ ಬೌಲ್ಡ್.
58 ಎಸೆತಗಳಲ್ಲಿ 50 ರನ್ ಬಾರಿಸಿ ನಿರ್ಗಮಿಸಿದ ಬಾಬರ್ ಆಝಂ.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.
PAK 156/3 (30)
-
Ind vs Pak ICC World Cup LIVE Score: ಅರ್ಧಶತಕ ಪೂರೈಸಿದ ಬಾಬರ್
ಕುಲ್ದೀಪ್ ಯಾದವ್ ಎಸೆದ 29ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಬಾಬರ್ ಆಝಂ.
ಈ ಫೋರ್ನೊಂದಿಗೆ 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾಕ್ ತಂಡದ ನಾಯಕ ಬಾಬರ್ ಆಝಂ.
PAK 150/2 (29)
-
Ind vs Pak ICC World Cup LIVE Score: ವೆಲ್ಕಂ ಬೌಂಡರಿ
ಮೊಹಮ್ಮದ್ ಸಿರಾಜ್ ಎಸೆದ 28ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಬಾಬರ್ ಆಝಂ.
ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಮೊಹಮ್ಮದ್ ರಿಝ್ವಾನ್.
ಮೂರನೇ ವಿಕೆಟ್ಗೆ ರಿಝ್ವಾನ್ ಹಾಗೂ ಬಾಬರ್ ನಡುವೆ 71 ರನ್ಗಳ ಜೊತೆಯಾಟ.
PAK 144/2 (28)
-
Ind vs Pak ICC World Cup LIVE Score: 25 ಓವರ್ಗಳು ಮುಕ್ತಾಯ
25 ಓವರ್ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಪ್ರತಿ ಓವರ್ಗೆ 5 ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಪಾಕ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಬಾಬರ್ ಆಝಂ (35) ಹಾಗೂ ಮೊಹಮ್ಮದ್ ರಿಝ್ವಾನ್ (33) ಬ್ಯಾಟಿಂಗ್.
PAK 125/2 (25)
-
Ind vs Pak ICC World Cup LIVE Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ರವೀಂದ್ರ ಜಡೇಜಾ ಎಸೆದ 22ನೇ ಓವರ್ನ 4ನೇ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ರಿಝ್ವಾನ್.
5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಮತ್ತೊಂದು ಫೋರ್ ಬಾರಿಸಿದ ಮೊಹಮ್ಮದ್ ರಿಝ್ವಾನ್.
ಕ್ರೀಸ್ನಲ್ಲಿ ಬಾಬರ್ – ರಿಝ್ವಾನ್ ಬ್ಯಾಟಿಂಗ್.
PAK 114/2 (22)
-
Ind vs Pak ICC World Cup LIVE Score: 20 ಓವರ್ಗಳು ಮುಕ್ತಾಯ
20 ಓವರ್ಗಳಲ್ಲಿ 103 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಮೊಹಮ್ಮದ್ ರಿಝ್ವಾನ್ (16) ಹಾಗೂ ಬಾಬರ್ ಆಝಂ (30) ಬ್ಯಾಟಿಂಗ್.
3ನೇ ವಿಕೆಟ್ಗೆ 30 ರನ್ಗಳ ಜೊತೆಯಾಟದೊಂದಿಗೆ ಬ್ಯಾಟಿಂಗ್ ಮುಂದುವರೆಸಿರುವ ರಿಝ್ವಾನ್-ಬಾಬರ್ ಜೋಡಿ.
PAK 103/2 (20)
-
Ind vs Pak ICC World Cup LIVE Score: ಆಕರ್ಷಕ ಕವರ್ ಡ್ರೈವ್
ಶಾರ್ದೂಲ್ ಠಾಕೂರ್ ಎಸೆದ 19ನೇ ಓವರ್ನ 3ನೇ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ಬಾಬರ್ ಆಝಂ.
ಈ ಫೋರ್ನೊಂದಿಗೆ ಶತಕ ಪೂರೈಸಿದ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
PAK 102/2 (19)
-
Ind vs Pak ICC World Cup LIVE Score: ರಿಝ್ವಾನ್ ಉತ್ತಮ ಬ್ಯಾಟಿಂಗ್
ರವೀಂದ್ರ ಜಡೇಜಾ ಎಸೆದ 18ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಮೊಹಮ್ಮದ್ ರಿಝ್ವಾನ್.
ನಾಯಕ ಬಾಬರ್ ಆಝಂ ಹಾಗೂ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಉತ್ತಮ ಜೊತೆಯಾಟ.
ಶತಕದತ್ತ ಸಾಗುತ್ತಿರುವ ಪಾಕಿಸ್ತಾನ್ ತಂಡದ ಸ್ಕೋರ್.
PAK 96/2 (18)
-
Ind vs Pak ICC World Cup LIVE Score: ಅತ್ಯುತ್ತಮ ಶಾಟ್-ಬೌಂಡರಿ
ಶಾರ್ದೂಲ್ ಠಾಕೂರ್ ಎಸೆದ 17ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಬಾಬರ್ ಆಝಂ.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
PAK 90/2 (17)
-
Ind vs Pak ICC World Cup LIVE Score: 15 ಓವರ್ಗಳು ಮುಕ್ತಾಯ
ಹಾರ್ದಿಕ್ ಪಾಂಡ್ಯ ಎಸೆದ 15ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದ ಮೊಹಮ್ಮದ್ ರಿಝ್ವಾನ್…ನಾಲ್ಕು ರನ್ಗಳು ಸೇರ್ಪಡೆ.
15 ಓವರ್ಗಳ ಮುಕ್ತಾಯದ ವೇಳೆಗೆ 79 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಬಾಬರ್ ಆಝಂ (17) ಹಾಗೂ ಮೊಹಮ್ಮದ್ ರಿಝ್ವಾನ್ (6) ಬ್ಯಾಟಿಂಗ್.
PAK 79/2 (15)
-
Ind vs Pak ICC World Cup LIVE Score: ಟೀಮ್ ಇಂಡಿಯಾಗೆ 2ನೇ ಯಶಸ್ಸು
ಹಾರ್ದಿಕ್ ಪಾಂಡ್ಯ ಎಸೆದ 12ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಇಮಾಮ್ ಉಲ್ ಹಕ್.
38 ಎಸೆತಗಳಲ್ಲಿ 36 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಇಮಾಮ್ ಉಲ್ ಹಕ್.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.
PAK 74/2 (13)
-
Ind vs Pak ICC World Cup LIVE Score: ಅರ್ಧಶತಕ ಪೂರೈಸಿದ ಪಾಕಿಸ್ತಾನ್
ಹಾರ್ದಿಕ್ ಪಾಂಡ್ಯ ಎಸೆದ 11ನೇ ಓವರ್ನ 5ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದ ಬಾಬರ್ ಆಝಂ…ಫೋರ್.
ಅರ್ಧಶತಕ ಪೂರೈಸಿ ಉತ್ತಮ ಬ್ಯಾಟಿಂಗ್ ಮುಂದುವರೆಸಿರುವ ಪಾಕಿಸ್ತಾನ್ ತಂಡ.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಆಝಂ ಬ್ತಾಟಿಂಗ್.
PAK 60/1 (11)
-
Ind vs Pak ICC World Cup LIVE Score: 10 ಓವರ್ಗಳು ಮುಕ್ತಾಯ
10ನೇ ಓವರ್ನಲ್ಲಿ ಕೇವಲ 1 ರನ್ ನೀಡಿದ ಮೊಹಮ್ಮದ್ ಸಿರಾಜ್.
ಕ್ರೀಸ್ನಲ್ಲಿ ಬಾಬರ್ ಆಝಂ (5) ಹಾಗೂ ಇಮಾಮ್ ಉಲ್ ಹಕ್ (23) ಬ್ಯಾಟಿಂಗ್.
10 ಓವರ್ಗಳ ಮುಕ್ತಾಯಕ್ಕೆ ಪಾಕಿಸ್ತಾನ್ ತಂಡದ ಸ್ಕೋರ್ 49 ರನ್ಗಳು.
ಅಬ್ದುಲ್ಲ ಶಫೀಕ್ ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿರುವ ಸಿರಾಜ್.
PAK 49/1 (10)
-
Ind vs Pak ICC World Cup LIVE Score: ಬಾಬರ್ ಆಝಂ ಮಾರ್ಕ್
ಹಾರ್ದಿಕ್ ಪಾಂಡ್ಯ ಎಸೆದ 9ನೇ ಓವರ್ನ ಕೊನೆಯ ಎಸೆತದಲ್ಲಿ ಫೈನ್ಲೆಗ್ನತ್ತ ಬೌಂಡರಿ ಬಾರಿಸಿದ ಬಾಬರ್ ಆಝಂ.
9 ಓವರ್ ಮುಕ್ತಾಯದ ವೇಳೆಗೆ ಪಾಕಿಸ್ತಾನ್ ತಂಡದ ಸ್ಕೋರ್ 48.
ಕ್ರೀಸ್ನಲ್ಲಿ ಬಾಬರ್ ಆಝಂ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
PAK 48/1 (9)
-
Ind vs Pak ICC World Cup LIVE Score: ಟೀಮ್ ಇಂಡಿಯಾಗೆ ಮೊದಲ ಯಶಸ್ಸು
ಮೊಹಮ್ಮದ್ ಸಿರಾಜ್ ಎಸೆದ ಮೊದಲ ಓವರ್ನ 8ನೇ ಓವರ್ನ ಕೊನೆಯ ಎಸೆತದಲ್ಲಿ ಅಬ್ದುಲ್ಲ ಶಫೀಕ್ ಎಲ್ಬಿಡಬ್ಲ್ಯೂ.
ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಮೊಹಮ್ಮದ್ ಸಿರಾಜ್.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಆಝಂ ಬ್ಯಾಟಿಂಗ್.
PAK 41/1 (8)
-
Ind vs Pak ICC World Cup LIVE Score: ಅತ್ಯಾಕರ್ಷಕ ಬೌಂಡರಿ ಬಾರಿಸಿದ ಶಫೀಕ್
ಜಸ್ಪ್ರೀತ್ ಬುಮ್ರಾ ಎಸೆದ 7ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.
ಕೊನೆಯ ಎಸೆತದಲ್ಲಿ ಫೈನ್ ಲೆಗ್ನತ್ತ ಬೌಂಡರಿ ಬಾರಿಸಿದ ಇಮಾಮ್ ಉಲ್ ಹಕ್.
ಪಾಕಿಸ್ತಾನ್ ಆರಂಭಿಕರ ಉತ್ತಮ ಬ್ಯಾಟಿಂಗ್.
PAK 37/0 (7)
-
Ind vs Pak ICC World Cup LIVE Score: 5 ಓವರ್ಗಳು ಮುಕ್ತಾಯ
5ನೇ ಓವರ್ ಅನ್ನು ಮೇಡನ್ ಮಾಡಿದ ಜಸ್ಪ್ರೀತ್ ಬುಮ್ರಾ.
5 ಓವರ್ಗಳ ಮುಕ್ತಾಯಕ್ಕೆ ಪಾಕಿಸ್ತಾನ್ ತಂಡದ ಸ್ಕೋರ್ 23.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಇಮಾಮ್ ಉಲ್ ಹಕ್ (13) ಹಾಗೂ ಬಲಗೈ ಬ್ಯಾಟರ್ ಅಬ್ದುಲ್ಲ ಶಫೀಕ್ (10) ಬ್ಯಾಟಿಂಗ್.
PAK 23/0 (5)
-
Karnataka Breaking News Live: ಕೆಎಸ್ಆರ್ಟಿಸಿ ಬಸ್ ಹರಿದು ಸ್ಥಳದಲ್ಲೇ ಬಾಲಕ ದುರ್ಮರಣ
ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಹರಿದು ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾರೆ. ಅರ್ಷದ್ ಅಹ್ಮದ್ ಸಲೀಂ ಚೌಧರಿ(8) ಮೃತ ದುರ್ದೈವಿ. ಮೃತ ಅರ್ಷದ್, ಬಾಗಲಕೋಟೆ ಜಿಲ್ಲೆ ಮುಧೋಳ ನಿವಾಸಿ. ಬಾಲಕನ ಕುಟುಂಬ ಮುಧೋಳದಿಂದ ದಾಂಡೇಲಿಗೆ ತೆರಳುತ್ತಿದ್ದ. ತಿಂಡಿ ಮುಗಿಸಿ ಕಾರ್ ಬಳಿ ನಿಂತಿದ್ದ ಬಾಲಕನಿಗೆ ಬಸ್ ಡಿಕ್ಕಿ ಹೊಡೆದಿದೆ.
-
Ind vs Pak ICC World Cup LIVE Score: ಆಕರ್ಷಕ ಬೌಂಡರಿ
ಮೊಹಮ್ಮದ್ ಸಿರಾಜ್ ಎಸೆದ 4ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಅಬ್ದುಲ್ಲ ಶಫೀಕ್.
4 ಓವರ್ಗಳಲ್ಲಿ 23 ರನ್ ಕಲೆಹಾಕಿದ ಪಾಕಿಸ್ತಾನ್.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
PAK 23/0 (4)
-
Ind vs Pak ICC World Cup LIVE Score: 3 ಓವರ್ಗಳು ಮುಕ್ತಾಯ
ಮೂರನೇ ಓವರ್ನಲ್ಲಿ ಕೇವಲ 1 ರನ್ ನೀಡಿದ ಜಸ್ಪ್ರೀತ್ ಬುಮ್ರಾ.
ಕ್ರೀಸ್ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.
ಪಾಕಿಸ್ತಾನ್ ಆರಂಭಿಕರಿಂದ ಉತ್ತಮ ಆರಂಭ.
PAK 17/0 (3)
-
Ind vs Pak ICC World Cup LIVE Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಇಮಾಮ್.
4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಮತ್ತೊಂದು ಫೋರ್ ಬಾರಿಸಿದ ಎಡಗೈ ದಾಂಡಿಗ ಇಮಾಮ್ ಉಲ್ ಹಕ್.
PAK 16/0 (2)
-
Ind vs Pak ICC World Cup LIVE Score: ಮೊದಲ ಓವರ್ನಲ್ಲಿ ಮೊದಲ ಬೌಂಡರಿ
ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಓವರ್ನ 5 ಎಸೆತಗಳಲ್ಲಿ ಯಾವುದೇ ರನ್ ಗಳಿಸದ ಶಫೀಕ್.
6ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಫೋರ್ ಬಾರಿಸಿ ಪಾಕ್ ತಂಡದ ಸ್ಕೋರ್ ಖಾತೆ ತೆರೆದ ಅಬ್ದುಲ್ಲ ಶಫೀಕ್.
ಕ್ರೀಸ್ನಲ್ಲಿ ಅಬ್ದುಲ್ಲ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಬ್ಯಾಟಿಂಗ್.
PAK 4/0 (1)
-
Ind vs Pak ICC World Cup LIVE Score: ಪಾಕಿಸ್ತಾನ್ ಇನಿಂಗ್ಸ್ ಆರಂಭ
ಪಾಕಿಸ್ತಾನ್ ಆರಂಭಿಕರು: ಅಬ್ದುಲ್ಲ ಶಫೀಕ್, ಇಮಾಮ್ ಉಲ್ ಹಕ್.
ಪಾಕ್ ತಂಡದ ಬ್ಯಾಟಿಂಗ್ ಲೈನಪ್: ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್.
ಟೀಮ್ ಇಂಡಿಯಾ ಪರ ಮೊದಲ ಓವರ್: ಜಸ್ಪ್ರೀತ್ ಬುಮ್ರಾ.
-
Ind vs Pak ICC World Cup LIVE Score: ಪಾಕ್ ಪರ ಕಣಕ್ಕಿಳಿಯುವವರು
🚨 TOSS & PLAYING XI 🚨
India have won the toss and opted to bowl first 🏏
Unchanged team for the #INDvPAK match 👇#DattKePakistani | #WeHaveWeWill pic.twitter.com/B7DLrFMiXG
— Pakistan Cricket (@TheRealPCB) October 14, 2023
ಪಾಕಿಸ್ತಾನ್ (ಪ್ಲೇಯಿಂಗ್ 11): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
-
Ind vs Pak ICC World Cup LIVE Score: ಭಾರತದ ಪರ ಕಣಕ್ಕಿಳಿಯುವ ಕಲಿಗಳು
🚨 Toss & Team Update 🚨
Captain @ImRo45 has won the toss & #TeamIndia have elected to bowl against Pakistan.
1⃣ change for India as Shubman Gill is named in the team.
Here’s our Playing XI 🔽
Follow the match ▶️ https://t.co/H8cOEm3quc#CWC23 | #INDvPAK | #MeninBlue pic.twitter.com/8itXCZA4xy
— BCCI (@BCCI) October 14, 2023
ಭಾರತ (ಪ್ಲೇಯಿಂಗ್ 11): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
-
Ind vs Pak ICC World Cup LIVE Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ್ (ಪ್ಲೇಯಿಂಗ್ 11): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
-
Ind vs Pak ICC World Cup LIVE Score: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಭಾರತ (ಪ್ಲೇಯಿಂಗ್ 11): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
-
Ind vs Pak ICC World Cup LIVE Score: ಟಾಸ್ ಗೆದ್ದ ಟೀಮ್ ಇಂಡಿಯಾ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
Ind vs Pak ICC World Cup LIVE Score: ಭಾರತ ತಂಡ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.
-
Ind vs Pak ICC World Cup LIVE Score: ಪಾಕಿಸ್ತಾನ್ ತಂಡ
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಝ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹಸನ್ ಅಲಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ.
-
Ind vs Pak ICC World Cup LIVE Score: ಇಂಡೊ-ಪಾಕ್ ಕ್ರಿಕೆಟ್ ಕದನಕ್ಕೆ ಕ್ಷಣಗಣನೆ ಶುರು
ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ 134 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 56 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ, 73 ಮ್ಯಾಚ್ಗಳಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಇನ್ನು 5 ಪಂದ್ಯಗಳು ಕಾರಣಾಂತರದಿಂದ ರದ್ದಾಗಿತ್ತು. ಇಲ್ಲಿ ಉಭಯ ತಂಡಗಳ ಮುಖಾಮುಖಿಯಲ್ಲಿ ಪಾಕಿಸ್ತಾನ್ ತಂಡ ಮೇಲುಗೈ ಹೊಂದಿರುವುದು ಸ್ಪಷ್ಟ. ಆದರೆ ಏಕದಿನ ವಿಶ್ವಕಪ್ನಲ್ಲಿ ಆಡಿದ 7 ಪಂದ್ಯಗಳಲ್ಲೂ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಹೀಗಾಗಿ ಅಹಮದಾಬಾದ್ನಲ್ಲೂ ಭಾರತ ತಂಡ ಗೆಲುವನ್ನು ನಿರೀಕ್ಷಿಸಬಹುದು.
-
ಭದ್ರತೆ ಹೇಗಿದೆ?
#WATCH गुजरात: ICC पुरुष क्रिकेट विश्व कप 2023 के भारत बनाम पाकिस्तान मैच से पहले अहमदाबाद में सुरक्षा बढ़ा दी गई है।
उप पुलिस आयुक्त-नियंत्रण कक्ष कोमल व्यास ने बताया, "मैच हाई वोल्टेज वाला है… अहमदाबाद पुलिस इसके लिए पूरी तरह से तैयार है। पुलिस हर जगह की लाइव निगरानी कर रही… pic.twitter.com/4U7Gnj37UK
— ANI_HindiNews (@AHindinews) October 14, 2023
-
ಅಭಿಮಾನಿಗಳ ಜೈಕಾರ
CRAZE!!!🔥🔥🥵
This is not a stadium, This is METRO!!
That chant" Dus Rupaye ki pepsi Rohit Bhai S£xy" 🤣🤣#INDvsPAKpic.twitter.com/tPl0Iwg5JG
— ᴘʀᴀᴛʜᴍᴇsʜ⁴⁵ (@45Fan_Prathmesh) October 14, 2023
-
ಅಭಿಮಾನಿಗಳ ಕಾತುರ
#WATCH | Ahmedabad, Gujarat: A cricket fan says, " I am very excited, I have specially come for this match from Mumbai…India will win the match" pic.twitter.com/qXRQX2ZlDC
— ANI (@ANI) October 14, 2023
-
ಜನ ಜಂಗುಳಿ
ಬಿಗ್ ಮ್ಯಾಚ್ಗಾಗಿ ಪಾಕಿಸ್ತಾನ ತಂಡ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ತಲುಪಿದೆ. ಶೀಘ್ರದಲ್ಲೇ ಟೀಂ ಇಂಡಿಯಾ ಕೂಡ ಆಗಮಿಸಲಿದೆ. ಈಗಾಗಲೇ ಕ್ರೀಡಾಂಗಣದ ಹೊರಗೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಈ ಪಂದ್ಯ ಫುಲ್ ಹೌಸ್ ಫುಲ್ ಆಗಿರುವುದು ಸ್ಪಷ್ಟವಾಗಿದೆ.
Sea of Indian fans at Narendra Modi Stadium.
– Madness…..!!!!!!pic.twitter.com/hOq9J5BftC
— Johns. (@CricCrazyJohns) October 14, 2023
-
ಅಮಿತಾಬ್, ರಜನಿಕಾಂತ್, ಸಚಿನ್ ಹಾಜರಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಗ್ರ್ಯಾಂಡ್ ಮ್ಯಾಚ್ ಕಣ್ತುಂಬಿಗಳು ಸ್ಟಾರ್ ಸೆಲೆಬ್ರಿಟಿಗಳು ಅಹಮದಾಬಾದ್ಗೆ ಬಂದಿಳಿದಿದ್ದಾರೆ. ದಿಗ್ಗಜ ನಟ ಅಮಿತಾಭ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್ ಅವರಲ್ಲದೆ ಬಾಲಿವುಡ್ನ ಹಲವು ತಾರೆಯರು ಆಗಮಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಅಹಮದಾಬಾದ್ ತಲುಪಿದ್ದಾರೆ.
-
Karnataka Breaking News Live: ಬೆಳಗಾವಿಯಲ್ಲಿ ಅಮಾನವೀಯ ಘಟನೆ, ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ
ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದ ಮಲ್ಲಾಪುರ ಪಿಜಿಯಲ್ಲಿ ಮಧ್ಯರಾತ್ರಿ ನಡು ರಸ್ತೆಯಲ್ಲಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಸ್ಥಳೀಯ ಮಹಿಳೆಯರು, ಕೆಲ ಪುರುಷರು ಶ್ರೀದೇವಿ ಎಂಬ ಮಹಿಳೆಯನ್ನ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಮನೆಯಲ್ಲಿದ್ದ ಶ್ರೀದೇವಿಯನ್ನ ಎಳೆತಂದು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ.
-
ಅಸಂಖ್ಯಾತ ಪ್ರೇಕ್ಷಕರು
ಭಾರತ-ಪಾಕಿಸ್ತಾನದ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಈಗಾಗಲೇ ಅಹಮದಾಬಾದ್ನಲ್ಲಿ ಮುಂಜಾನೆಯಿಂದಲೇ ಜಮಾಯಿಸಿದ್ದಾರೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ.
-
ಮಳೆಯಿಂದ ಪಂದ್ಯ ರದ್ದಾದರೆ?
ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಏಕೆಂದರೆ ಈ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ನಿಗದಿ ಮಾಡಿಲ್ಲ. ಹೀಗಾಗಿ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ.
-
Karnataka Breaking News Live: ಬೆಂಗಳೂರಿನಲ್ಲಿ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಪೈಪ್ ಲೈನ್ ರೋಡ್ ಜೋಗುಪಾಳ್ಯದಲ್ಲಿ ಅಗರಬತ್ತಿ ಪ್ಯಾಕ್ಟರಿಗೆ ಬೆಂಕಿ ಬಿದ್ದಿದೆ. ದೊಡ್ಡ ಪ್ರಮಾಣದ ಬೆಂಕಿ ಇಂದ ಜನ ಭಯಭೀತರಾಗಿದ್ದು 2 ಅಗ್ನಿ ಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಚರಣೆ ನಡೆಸುತ್ತಿವೆ.
-
ರೋಹಿತ್ ಮತ್ತು ಇಶಾನ್ಗೆ ವಿಶೇಷ ಪಂದ್ಯ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ದಾಖಲೆ ನಿರ್ಮಿಸುವ ಸಮೀಪದಲ್ಲಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 300 ಸಿಕ್ಸರ್ ಪೂರ್ಣಗೊಳಿಸಲು ಇನ್ನು 3 ಸಿಕ್ಸರ್ ಅಗತ್ಯವಿದ್ದು, ಇಶಾನ್ ಕಿಶನ್ಗೆ ಏಕದಿನದಲ್ಲಿ 1000 ರನ್ ಪೂರೈಸಲು ಇನ್ನೂ 67 ರನ್ಗಳ ಅಗತ್ಯವಿದೆ.
-
ಭಾರತ-ಪಾಕ್ ವಿಶ್ವಕಪ್ ಪ್ರಯಾಣ
2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲು ಸಿದ್ಧವಾಗಿವೆ. ಈ ಬಾರಿಯ ವಿಶ್ವಕಪ್ನಲ್ಲಿ ಉಭಯ ತಂಡಗಳ ಮೂರನೇ ಪಂದ್ಯ ಇದಾಗಿದೆ. ಉಭಯ ತಂಡಗಳು ಆಡಿದ ಹಿಂದಿನ 2 ಪಂದ್ಯಗಳಲ್ಲಿ ಎರಡನ್ನೂ ಗೆದ್ದಿವೆ.
-
ಪಿಸಿಬಿ ಮುಖ್ಯಸ್ಥರ ಉಪಸ್ಥಿತಿ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ ಕೂಡ ಆಗಮಿಸಲಿದ್ದಾರೆ. ಇದಕ್ಕಾಗಿ ಪಿಸಿಬಿ ಮುಖ್ಯಸ್ಥರು ಒಂದು ದಿನ ಮುಂಚಿತವಾಗಿ ಅಹಮದಾಬಾದ್ ತಲುಪಿದ್ದಾರೆ. ಬಿಸಿಸಿಐನ ಎಲ್ಲ ಅಧಿಕಾರಿಗಳು ಕೂಡ ಅವರ ಜೊತೆ ಡಿನ್ನರ್ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.
-
ಸಂಗೀತ ಕಾರ್ಯಕ್ರಮ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೂ ಮೊದಲು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗಾಯಕರಾದ ಅರಿಜಿತ್ ಸಿಂಗ್, ಶಂಕರ್ ಮಹದೇವನ್ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಕ್ಕೂ ಮುನ್ನ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮವು ಮಧ್ಯಾಹ್ನ 12:30 ರಿಂದ 1:10 ರವರೆಗೆ ನಡೆಯಲಿದೆ. ಅಮಿತಾಬ್ ಬಚ್ಚನ್, ರಜನಿಕಾಂತ್, ಸಚಿನ್ ತೆಂಡೂಲ್ಕರ್ ಕೂಡ ಸ್ಟೇಡಿಯಂನಲ್ಲಿ ಇರಲಿದ್ದಾರೆ.
-
8ನೇ ಬಾರಿಗೆ ಮುಖಾಮುಖಿ
ಏಕದಿನ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ 8ನೇ ಬಾರಿಗೆ ಮುಖಾಮುಖಿಯಾಗಲಿವೆ. ಕಳೆದ 7 ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಅಂದರೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ.
Published On - Oct 14,2023 9:33 AM




