Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK, World Cup 2023: ಭಾರತದ ಗೆಲುವಿಗೆ ವಿಘ್ನ ವಿನಾಶಕ ಗಣಪನಿಗೆ ಪೂಜೆ ಸಲ್ಲಿಸಿದ ಬೆಳಗಾವಿ ಕ್ರಿಕೆಟ್ ಪ್ರೇಮಿಗಳು

IND vs PAK, World Cup 2023: ಭಾರತದ ಗೆಲುವಿಗೆ ವಿಘ್ನ ವಿನಾಶಕ ಗಣಪನಿಗೆ ಪೂಜೆ ಸಲ್ಲಿಸಿದ ಬೆಳಗಾವಿ ಕ್ರಿಕೆಟ್ ಪ್ರೇಮಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 14, 2023 | 11:36 AM

ಟೀಮ್ ಇಂಡಿಯ ಗೆಲುವಿಗೆ ಯಾವುದೇ ವಿಘ್ನ ಎದುರಾಗದ ಹಾಗೆ ಅಭಿಮಾನಿಗಳು ವಿಘ್ನ ನಿವಾರಕ ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ. ಭಾರತ ಪಂದ್ಯವನ್ನು ಗೆದ್ದು ಗೆಲುವಿನ ಲೀಡನ್ನು 8-0 ಗೆ ಏರಿಸಲಿದೆ ಎಂಬ ವಿಶ್ವಾಸ ಇವರೆಲ್ಲರಲ್ಲೂ ಇದೆ. ಈ ಅಭಿಮಾನಿಗಳ ನೆಚ್ಚಿನ ಬ್ಯಾಟರ್ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ. ಇಬ್ಬರೂ ಶತಕ ಬಾರಿಸಲಿದ್ದಾರೆಂದು ಅವರು ಹೇಳುತ್ತಾರೆ.

ಬೆಳಗಾವಿ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾಗಿರುವ (traditional rivals) ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಹೈ ಆಕ್ಟೇನ್ ಪಂದ್ಯ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi stadium) ನಡೆಯಲಿದೆ. ಎರಡು ತಂಡಗಳ ನಡುವಿನ ಪಂದ್ಯ ಇಡೀ ವಿಶ್ವದ ಕುತೂಹಲ ಕೆರಳಿಸುತ್ತದೆ. ಒಂದು ದಿನದ ಪಂದ್ಯಗಳ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡಿದಾಗಲೆಲ್ಲ ಗೆದ್ದಿದ್ದು ಇವತ್ತು ಸತತ 8 ನೇ ಬಾರಿ ಗೆಲುವು ಸಾಧಿಸಲು ತವಕಿಸುತ್ತಿದೆ. ಪಂದ್ಯ ಆರಂಭಗೊಳ್ಳುವುದನ್ನು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ನಗರದಲ್ಲಿ ಟಿವಿ9 ಕನ್ನಡ ವಾಹಿನಿಯ ವರದಿಗಾರ ಕೆಲ ಅಭಿಮಾನಿಗಳೊಂದಿಗೆ ಮಾತಾಡಿದ್ದಾರೆ. ಟೀಮ್ ಇಂಡಿಯ ಗೆಲುವಿಗೆ ಯಾವುದೇ ವಿಘ್ನ ಎದುರಾಗದ ಹಾಗೆ ಅಭಿಮಾನಿಗಳು ವಿಘ್ನ ನಿವಾರಕ ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ. ಭಾರತ ಪಂದ್ಯವನ್ನು ಗೆದ್ದು ಗೆಲುವಿನ ಲೀಡನ್ನು 8-0 ಗೆ ಏರಿಸಲಿದೆ ಎಂಬ ವಿಶ್ವಾಸ ಇವರೆಲ್ಲರಲ್ಲೂ ಇದೆ. ಈ ಅಭಿಮಾನಿಗಳ ನೆಚ್ಚಿನ ಬ್ಯಾಟರ್ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ. ಇಬ್ಬರೂ ಶತಕ ಬಾರಿಸಲಿದ್ದಾರೆಂದು ಅವರು ಹೇಳುತ್ತಾರೆ. ಅವರ ನಿರೀಕ್ಷೆ ಮತ್ತು ಆಶಯ ನಿಜವಾಗಲಿ ಅಂತ ಪ್ರತಿಯೊಬ್ಬ ಭಾರತೀಯ ಹಾರೈಸುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ