ಕುವೆಂಪು ಹೆಸರು ಹೇಳಿಕೊಂಡು ಭಗವಾನ್ ಮಾತಾಡೋದು ಬೇಡ, ನೇರವಾಗಿ ಮಾತಾಡಿ ನಂತರ ಸಿಗುವ ಮನರಂಜನೆ ಅನುಭವಿಸಲಿ: ಸಿಎನ್ ಅಶ್ವಥ್ ನಾರಾಯಣ

ಕುವೆಂಪು ಹೆಸರು ಹೇಳಿಕೊಂಡು ಭಗವಾನ್ ಮಾತಾಡೋದು ಬೇಡ, ನೇರವಾಗಿ ಮಾತಾಡಿ ನಂತರ ಸಿಗುವ ಮನರಂಜನೆ ಅನುಭವಿಸಲಿ: ಸಿಎನ್ ಅಶ್ವಥ್ ನಾರಾಯಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 14, 2023 | 1:32 PM

ಭಗವಾನ್ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿ, ಅವರಿಗೆ ಒಕ್ಕಲಿಗ ಸಮುದಾಯದ ಬಗ್ಗೆ ಗೊತ್ತಿರೋದಾದರೂ ಏನು? ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ, ನಾಡಿನ ಸಂಸ್ಕೃತಿ ಹಾಗೂ ಪ್ರಕೃತಿಯನ್ನು ಗೌರವಿಸುತ್ತಾ ಅರ್ಥಪೂರ್ಣವಾಗಿ ಬದುಕು ನಡೆಸುತ್ತಿರುವ ಸಮುದಾಯ ಒಕ್ಕಲಿಗರದ್ದು ಎಂದ ಮಾಜಿ ಸಚಿವ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ಬಿಜೆಪಿ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಮೈಸೂರಲ್ಲಿ ಮಹಿಷ ಉತ್ಸವ (Mahisha Utsav) ಆಚರಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಮಹಿಷ ಉತ್ಸವ ಮಾಡೋದೇ ಇವರ ಉದ್ದೇಶವಾಗಿದ್ದರೆ, ನಾಡದೇವತೆ ಚಾಮುಂಡೇಶ್ವರಿಗೆ ಯಾಕೆ ಪೂಜೆ ಸಲ್ಲಿಸುತ್ತಾರೆ ಎಂದು ಅವರು ಪ್ರಶ್ನಿಸಿದರು. ನಂತರ ನಿನ್ನೆ ಮಹಿಷ ಉತ್ಸವದಲ್ಲಿ ಒಕ್ಕಲಿಗರು ಸಂಸ್ಕೃತಿಹೀನರು ಅಂತ ಪ್ರೊ ಕೆಎಸ್ ಭಗವಾನ್ (Prof. KS Bhagawan) ಅವರನ್ನು ಆಶ್ವಥ್ ನಾರಾಯಣ ಬಲವಾಗಿ ಖಂಡಿಸಿದರು. ಭಗವಾನ್ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿ, ಅವರಿಗೆ ಒಕ್ಕಲಿಗ ಸಮುದಾಯದ ಬಗ್ಗೆ ಗೊತ್ತಿರೋದಾದರೂ ಏನು? ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ, ನಾಡಿನ ಸಂಸ್ಕೃತಿ ಹಾಗೂ ಪ್ರಕೃತಿಯನ್ನು ಗೌರವಿಸುತ್ತಾ ಅರ್ಥಪೂರ್ಣವಾಗಿ ಬದುಕು ನಡೆಸುತ್ತಿರುವ ಸಮುದಾಯ ಒಕ್ಕಲಿಗರದ್ದು ಎಂದ ಮಾಜಿ ಸಚಿವ, ಭಗವಾನ್ ಕುವೆಂಪು ಹೆಸರು ಹೇಳಿಕೊಂಡು ಮಾತಾಡೋದು ಬೇಡ, ಮಾತಾಡೋದಿದ್ದರೆ ನೇರವಾಗಿ ಮಾತಾಡಲಿ, ಮಾತಾಡಿದ ಬಳಿಕ ಸಿಗಲಿರುವ ಮನರಂಜನೆಯನ್ನು ನೋಡಲಿ ಅಂತ ಕೋಪದಿಂದ ಭುಸುಗುಡುತ್ತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ