Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈನಲ್ಲಿ ಕೊಹ್ಲಿ-ರಾಹುಲ್ ಜುಗಲ್​ಬಂದಿ, ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದ ಭಾರತ!

ಚೆನ್ನೈನಲ್ಲಿ ಕೊಹ್ಲಿ-ರಾಹುಲ್ ಜುಗಲ್​ಬಂದಿ, ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದ ಭಾರತ!

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 09, 2023 | 2:28 PM

ಕೊಹ್ಲಿ ಮತ್ತು ರಾಹುಲ್, 4 ನೇ ವಿಕೆಟ್ ಜೊತೆಯಾಟದಲ್ಲಿ ದಾಖಲೆಯ 165 ರನ್ ಸೇರಿಸಿ ಇನ್ನೂ 8.4 ಓವರ್ ಬಾಕಿಯಿರುವಂತೆಯೇ ಭಾರತ ಗೆಲ್ಲಲು ಕಾರಣರಾದರು. ಎಕ್ಸ್ ಟ್ರಾ ಕವರ್ಸ್ ಬೌಂಡರಿ ಮೇಲಿಂದ ಸಿಕ್ಸ್ ಎತ್ತಿ ಗೆಲುವಿನ ರನ್ ಬಾರಿಸಿದ ರಾಹುಲ್ ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದರು.

ಚೆನ್ನೈ: ಒಂದು ದಿನದ ಪಂದ್ಯಗಳಲ್ಲಿ ಎದುರಾಳಿಗಳು ಸೆಟ್ ಮಾಡುವ ಮೊತ್ತವನ್ನು ಚೇಸ್ ಮಾಡಿ ಟೀಮ್ ಗೆ ಗೆಲುವು ತಂದುಕೊಡುವಲ್ಲಿ ವಿರಾಟ್ ಕೊಹ್ಲಿಯನ್ನು (Virat Kohli) ಮೀರಿಸುವ ಬ್ಯಾಟರ್ ವಿಶ್ವದಲ್ಲಿ ಮತ್ತೊಬ್ಬನಿರಲಿಕ್ಕಿಲ್ಲ. ಹಾಗಾಗೇ ಅವರನ್ನು ಚೇಸಿಂಗ್ ಮಾಸ್ಟರ್ (Master Chaser) ಅಂತ ಕರೆಯುತ್ತಾರೆ. ಐಸಿಸಿ ಒಡಿಐ ವಿಶ್ವಕಪ್-2023 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಕಳೆದ ರಾತ್ರಿ 5 ಬಾರಿ ಚಾಂಪಿಯನ್ ಶಿಪ್ ಪಟ್ಟ ಧರಿಸಿರುವ ಆಸ್ಟ್ರೇಲಿಯವನ್ನು 6 ವಿಕೆಟ್ ಗಳಿಂದ ಜಯ ಸೋಲಿಸಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಪಂದ್ಯದಲ್ಲಿ ಕೊಹ್ಲಿ (85) ತಾನು ಚಾಂಪಿಯನ್ ಬ್ಯಾಟ್ ಮತ್ತು ಸಾಟಿಯಿಲ್ಲದ ಚೇಸರ್ ಅಂತ ಮತ್ತೊಮ್ಮೆ ಪ್ರೂವ್ ಮಾಡಿದರು. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಕೆಟ್-ಕೀಪರ್ ಬ್ಯಾಟರ್ ಕನ್ನಡಿದ ಕೆಎಲ್ ರಾಹುಲ್ (KL Rahul) ಸಹ ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿ ಅಜೇಯ 97 ರನ್ ಬಾರಿಸಿದರು.

ಆಸ್ಸೀಗಳನ್ನು ಕೇವಲ 199 ಮೊತ್ತಕ್ಕೆ ಔಟ್ ಮಾಡಿದ ಭಾರತ ಇನ್ನಿಂಗ್ಸ್ ನ ಆರಂಭ ಆಘಾತಕಾರಿಯಾಗಿತ್ತು, 2 ರನ್ ಗಳಾಗುವಷ್ಟರಲ್ಲಿ ನಾಯಕ ರೋಹಿತ್ ಶರ್ಮ, ಇಶಾಂತ್ ಶರ್ಮ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಗೆ ಮರಳಿದ್ದರು. ಆದರೆ ಕೊಹ್ಲಿ ಮತ್ತು ರಾಹುಲ್, 4 ನೇ ವಿಕೆಟ್ ಜೊತೆಯಾಟದಲ್ಲಿ ದಾಖಲೆಯ 165 ರನ್ ಸೇರಿಸಿ ಇನ್ನೂ 8.4 ಓವರ್ ಬಾಕಿಯಿರುವಂತೆಯೇ ಭಾರತ ಗೆಲ್ಲಲು ಕಾರಣರಾದರು. ಎಕ್ಸ್ ಟ್ರಾ ಕವರ್ಸ್ ಬೌಂಡರಿ ಮೇಲಿಂದ ಸಿಕ್ಸ್ ಎತ್ತಿ ಗೆಲುವಿನ ರನ್ ಬಾರಿಸಿದ ರಾಹುಲ್ ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 09, 2023 02:28 PM