AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK, ICC World Cup: ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಪಾಕ್: ರೋಹಿತ್ ಪಡೆಗೆ 192 ರನ್​​ಗಳ ಟಾರ್ಗೆಟ್

India vs Pakistan, ICC World Cup 2023: 155 ರನ್​ಗೆ 3ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 171 ರನ್ ಆಗುವ ಹೊತ್ತಿಗೆ 7 ವಿಕೆಟ್ ಪತನಗೊಂಡಿತು. ದಿಢೀರ್ ಕುಸಿತದಿಂದ ಬಾಬರ್ ಪಡೆ ಮೇಲೇಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪರ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರು.

IND vs PAK, ICC World Cup: ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಪಾಕ್: ರೋಹಿತ್ ಪಡೆಗೆ 192 ರನ್​​ಗಳ ಟಾರ್ಗೆಟ್
India vs Pakistan
Vinay Bhat
|

Updated on: Oct 14, 2023 | 5:25 PM

Share

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್​ನ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ರೋಚಕತೆ ಸೃಷ್ಟಿಸಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 191 ರನ್​ಗೆ ಆಲೌಟ್ ಆಗಿದೆ. ಒಂದು ಹಂತದಲ್ಲಿ ದೊಡ್ಡ ಸ್ಕೋರ್ ಕಲೆಹಾಕುವ ಸೂಚನೆ ನೀಡಿದ್ದ ಬಾಬರ್ ಪಡೆಗೆ ಕುಲ್ದೀಪ್ ಹಾಗೂ ಬುಮ್ರಾ ಶಾಕ್ ನೀಡಿ ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಸದ್ಯ ಭಾರತ ಗೆಲ್ಲಲು 192 ರನ್​ಗಳ ಅವಶ್ಯಕತೆ ಇದೆ.

ಟಾಸ್ ಸೋತು ಪಾಕ್ ಪರ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ ಶಫೀಖ್ ಹಾಗೂ ಇಮಾನ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 8 ಓವರ್ ಆಗುವ ಹೊತ್ತಿಗೆ 41 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್​ನಲ್ಲಿ ಶಫೀಖ್ (20) ಎಲ್​ಬಿ ಬಲೆಗೆ ಸಿಲುಕಿದರು. ನಂತರ ಇಮಾಮ್ (36) ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಕೀಪರ್ ರಾಹುಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಈ ಸಂದರ್ಭ ಜೊತೆಯಾದ ಪಾಕ್ ಅನುಭವಿ ಬ್ಯಾಟರ್​ಗಳಾದ ನಾಯಕ ಬಾಬರ್ ಅಝಂ ಹಾಗೂ ಮೊಹಮ್ಮದ್ ರಿಝ್ವಾನ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು.

10 ಸೆಕೆಂಡ್​ಗೆ 30 ಲಕ್ಷ..! ಭಾರತ- ಪಾಕ್ ಪಂದ್ಯದಿಂದ ಡಿಸ್ನಿ-ಸ್ಟಾರ್​ಗೆ ಕೋಟಿ ಕೋಟಿ ಆದಾಯ

ಭಾರತೀಯ ಬೌಲರ್​ಗಳ ಮರ್ಮವನ್ನು ಅರಿತ ಬಾಬರ್-ರಿಝ್ವಾನ್ ಜೋಡಿ 82 ರನ್​ಗಳ ಕಾಣಿಕೆ ನೀಡಿದರು. ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಬಾಬರ್ ಅರ್ಧಶತಕ ಸಿಡಿಸಿದರು. ಆದರೆ, 50 ರನ್ ಗಳಿಸಿದ ಕೂಡಲೇ ಬಾಬರ್ ಅವರು ಸಿರಾಜ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೆ ಕುಲ್ದೀಪ್, ಸೌದ್ ಶಕೀಲ್ (6) ಅವರನ್ನು ಎಲ್​ಬಿಡಬ್ಲ್ಯೂ ಮಾಡಿದರೆ, ಇಫ್ತಿಖರ್ ಅಹ್ಮದ್​ರನ್ನು (4) ಬೌಲ್ಡ್ ಮಾಡಿದರು. ಅತ್ತ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ರಿಝ್ವಾನ್ 49 ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಶಬಾದ್ ಖಾನ್ ಕೂಡ 2 ರನ್​ಗೆ ಔಟಾದರು.

155 ರನ್​ಗೆ 3ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 171 ರನ್ ಆಗುವ ಹೊತ್ತಿಗೆ 7 ವಿಕೆಟ್ ಪತನಗೊಂಡಿತು. ದಿಢೀರ್ ಕುಸಿತದಿಂದ ಬಾಬರ್ ಪಡೆ ಮೇಲೇಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪರ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನೇಪಾಳದಲ್ಲಿ ಮಣ್ಣಿನಡಿ ಸಿಲುಕಿದ್ದ 2 ವರ್ಷದ ಮಗುವಿನ ಅಚ್ಚರಿಯ ರಕ್ಷಣೆ
ನೇಪಾಳದಲ್ಲಿ ಮಣ್ಣಿನಡಿ ಸಿಲುಕಿದ್ದ 2 ವರ್ಷದ ಮಗುವಿನ ಅಚ್ಚರಿಯ ರಕ್ಷಣೆ
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?