
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸಿ ಇಂಡಿಯಾ ಚಾಂಪಿಯನ್ಸ್ ಶುಭಾರಂಭ ಮಾಡಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡದ ನಾಯಕ ಉಸ್ಮಾನ್ ಖ್ವಾಜಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿ ಇಂಡಿಯಾ ಚಾಂಪಿಯನ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕ ದಾಂಡಿಗ ಅಂಬಾಟಿ ರಾಯುಡು ಕೇವಲ 4 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಸ್ಟುವರ್ಟ್ ಬಿನ್ನಿ 13 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ನಮನ್ ಓಜಾ 26 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 31 ರನ್ಗಳು ಮಾತ್ರ.
ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಯುವಿ 6 ಭರ್ಜರಿ ಸಿಕ್ಸರ್ ಹಾಗೂ 5 ಫೋರ್ಗಳೊಂದಿಗೆ ಕೇವಲ 44 ಎಸೆತಗಳಲ್ಲಿ 71 ರನ್ ಚಚ್ಚಿದರು.
YEH SHER AAJ BHI SHIKAR KARNA NAHI BHULA 🥵🔥
Catch all the action from World Championship of Legends LIVE on FanCode 📲
#WCL #YuvrajSingh https://t.co/6DO19dfpvT
— FanCode (@FanCode) October 3, 2026
ಯುವರಾಜ್ ಸಿಂಗ್ಗೆ ಉತ್ತಮ ಸಾಥ್ ನೀಡಿದ ಯೂಸುಫ್ ಪಠಾಣ್ ಕೇವಲ 20 ಎಸೆತಗಳಲ್ಲಿ 4 ಸಿಕ್ಸರ್ಗಳೊಂದಿಗೆ 37 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ರಿಷಿ ಧವನ್ 12 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 35 ರನ್ ಚಚ್ಚಿದರು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.
20 ಓವರ್ಗಳಲ್ಲಿ 197 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡಕ್ಕೆ ಡಾರ್ಸಿ ಶಾರ್ಟ್ ಉತ್ತಮ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಶಾರ್ಟ್ ಕೇವಲ 28 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 4 ಫೋರ್ಗಳೊಂದಿಗೆ 65 ರನ್ ಬಾರಿಸಿದರು.
ಇದಾಗ್ಯೂ ಶಾರ್ಟ್ ಅವರ ಈ ಭರ್ಜರಿ ಬ್ಯಾಟಿಂಗ್ಗೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು 16.2 ಓವರ್ಗಳಲ್ಲಿ 150 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 46 ರನ್ಗಳ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ನಮನ್ ಓಜಾ (ವಿಕೆಟ್ ಕೀಪರ್), ಅಂಬಾಟಿ ರಾಯುಡು , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ಸ್ಟುವರ್ಟ್ ಬಿನ್ನಿ , ರಿಷಿ ಧವನ್ , ಹರ್ಭಜನ್ ಸಿಂಗ್ , ಪಿಯೂಷ್ ಚಾವ್ಲಾ , ಮೋಹಿತ್ ಶರ್ಮಾ , ಧವಲ್ ಕುಲಕರ್ಣಿ.
ಇದನ್ನೂ ಓದಿ: ಇದು ಕೇವಲ ಗೆಲುವಲ್ಲ… ಇತಿಹಾಸವನ್ನೇ ಬದಲಿಸಿದ ವೆಸ್ಟ್ ಇಂಡೀಸ್
ಆಸ್ಟ್ರೇಲಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ಡಾರ್ಸಿ ಶಾರ್ಟ್ , ಉಸ್ಮಾನ್ ಖ್ವಾಜಾ (ನಾಯಕ) , ಬೆನ್ ಡಂಕ್ (ವಿಕೆಟ್ ಕೀಪರ್ ), ಕ್ಯಾಲಮ್ ಫರ್ಗುಸನ್ , ಜೊನಾಥನ್ ವೆಲ್ಸ್ , ಜೋ ಬರ್ನ್ಸ್ , ನಾಥನ್ ಕೌಲ್ಟರ್-ನೈಲ್ , ಬೆನ್ ಲಾಫ್ಲಿನ್ , ಫವಾದ್ ಅಹ್ಮದ್ ,
ಕೇನ್ ರಿಚರ್ಡ್ಸನ್ , ಬೆನ್ ಹಿಲ್ಫೆನ್‌ಹೌಸ್.