IPL 2022: ಯಾರಾಗಲಿದ್ದಾರೆ RCB ತಂಡದ ಹೊಸ ನಾಯಕ..?

| Updated By: ಝಾಹಿರ್ ಯೂಸುಫ್

Updated on: Mar 10, 2022 | 5:36 PM

IPL 2022 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್, ಶಹಬಾಜ್ ಅಹ್ಮದ್.

IPL 2022: ಯಾರಾಗಲಿದ್ದಾರೆ RCB ತಂಡದ ಹೊಸ ನಾಯಕ..?
RCB Captain
Follow us on

ಐಪಿಎಲ್ ಸೀಸನ್​ 15 ಗಾಗಿ (IPL 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೊಸ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಈಗಾಗಲೇ ಆರ್​ಸಿಬಿ ನಾಯಕನನ್ನು ಫೈನಲ್ ಮಾಡಿದ್ದು, ಮಾರ್ಚ್ 12 ರಂದು ಅಧಿಕೃತವಾಗಿ ಅನೌನ್ಸ್ ಮಾಡಲಿದೆ. ಆದರೆ ಆರ್​ಸಿಬಿ ನಾಯಕರುಗಳ ಪಟ್ಟಿಯಲ್ಲಿ ನಾಲ್ವರು ಆಟಗಾರರ ಹೆಸರುಗಳಿವೆ. ಈ ನಾಲ್ವರು ಕೂಡ ಈ ಹಿಂದೆ ನಾಯಕರಾಗಿ ತಂಡಗಳನ್ನು ಮುನ್ನಡೆಸಿದ ಅನುಭವ ಕೂಡ ಹೊಂದಿದ್ದಾರೆ. ಹೀಗಾಗಿ ಇವರಲ್ಲಿ ಒಬ್ಬರು ನಾಯಕರಾಗುವುದು ಖಚಿತ. ಆರ್​ಸಿಬಿ ಕ್ಯಾಪ್ಟನ್ಸ್​ ಪಟ್ಟಿಯಲ್ಲಿರುವ ಹೆಸರೆಂದರೆ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ದಿನೇಶ್ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ. ಇಲ್ಲಿ ವಿಶೇಷ ಎಂದರೆ ಈ ಪಟ್ಟಿಯಲ್ಲಿ ರಾಜೀನಾಮೆ ನೀಡಿರುವ ವಿರಾಟ್ ಕೊಹ್ಲಿಯ ಹೆಸರು ಕೂಡ ಇರುವುದು.

ಐಪಿಎಲ್ 2021 ರ ಮುಕ್ತಾಯದ ಬೆನ್ನಲ್ಲೇ ಮುಂದಿನ ಸೀಸನ್​ನಲ್ಲಿ ನಾನು ಆರ್​ಸಿಬಿ (RCB) ತಂಡವನ್ನು ಮುನ್ನಡೆಸುವುದಿಲ್ಲ ಎಂದು ತಿಳಿಸಿದ್ದರು. ಈ ವೇಳೆ ಕೂಡ ಕೊಹ್ಲಿ ಮೂರು ತಂಡಗಳನ್ನು ಮುನ್ನಡೆಸುವುದು ಕಷ್ಟಕರ ಎಂದಿದ್ದರು. ಆದರೀಗ ವಿರಾಟ್ ಕೊಹ್ಲಿ ಸಂಪೂರ್ಣ ಫ್ರೀಯಾಗಿದ್ದಾರೆ. ಟೀಮ್ ಇಂಡಿಯಾದ ಮೂರು ತಂಡಗಳ ನಾಯಕತ್ವವನ್ನು ತೊರೆದಿದ್ದಾರೆ. ಅಂದರೆ ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಈ ಹಿಂದೆ ರಾಜೀನಾಮೆ ನೀಡಲು ತಿಳಿಸಿದ ಕಾರಣದಿಂದ ಇದೀಗ ಕೊಹ್ಲಿ ಸಂಪೂರ್ಣ ಮುಕ್ತರಾಗಿದ್ದಾರೆ. ಹೀಗಾಗಿ ಮತ್ತೆ ಆರ್​ಸಿಬಿ ತಂಡದ ಸಾರಥ್ಯವನ್ನು ವಿರಾಟ್ ಕೊಹ್ಲಿ ಒಪ್ಪಿಸಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಮತ್ತೊಂದಡೆ ಫಾಫ್ ಡುಪ್ಲೆಸಿಸ್ ಹೆಸರು ಕೂಡ ಜೋರಾಗಿ ಕೇಳಿ ಬರುತ್ತಿದೆ. ಏಕೆಂದರೆ ವಿರಾಟ್ ಕೊಹ್ಲಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ಅನುಭವ ಹೊಂದಿರುವ ಏಕೈಕ ಆಯ್ಕೆ ಫಾಫ್ ಡುಪ್ಲೆಸಿಸ್ ಮಾತ್ರ. ಇನ್-ಫಾರ್ಮ್ ಓಪನರ್ ಕೂಡ ಆಗಿರುವ ಫಾಫ್ ಡು ಪ್ಲೆಸಿಸ್ ಆರ್​ಸಿಬಿ ಮುಂದಿರುವ ಅತ್ಯುತ್ತಮ ಆಯ್ಕೆ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಡುಪ್ಲೆಸಿಸ್ ಐಪಿಎಲ್ 2022 ರ ಸಂಪೂರ್ಣ ಅವಧಿಗೆ ಲಭ್ಯವಿರುತ್ತಾರೆ. ಅಷ್ಟೇ ಅಲ್ಲದೆ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವದ ಅನುಭವವನ್ನು ಹೊಂದಿರುವ ಬಗ್ಗೆ ಇತರಿಗೆ ಹೆಸನ್ ವಿವರಿಸಿದ್ದಾರೆ. ಹೀಗಾಗಿ ನಾವು ಅವರನ್ನು ಹರಾಜಿನಲ್ಲಿ ಖರೀದಿಸಬೇಕಾಗಿದೆ. ಇದಕ್ಕಾಗಿ ದೊಡ್ಡ ಮೊತ್ತವೊಂದನ್ನು ಫಾಫ್ ಡುಪ್ಲೆಸಿಸ್​ಗಾಗಿ ತೆಗೆದಿಡಬೇಕಾಗುತ್ತದೆ ಎಂದು ಮೈಕ್ ಹೆಸನ್ ಮೆಗಾ ಹರಾಜಿಗೂ ಮುನ್ನ ನಡೆದ ಚರ್ಚೆಯಲ್ಲಿ ತಮ್ಮ ಪ್ಲ್ಯಾನ್ ಅನ್ನು ಮುಂದಿಟ್ಟಿದ್ದರು. ಅದರಂತೆ ಮೆಗಾ ಹರಾಜು ಮೂಲಕ ಫಾಫ್ ಡುಪ್ಲೆಸಿಸ್​ ಅವರನ್ನು ಆರ್​ಸಿಬಿ ಬರೋಬ್ಬರಿ 7 ಕೋಟಿ ರೂ. ನೀಡಿ ಖರೀದಿಸಿದೆ. ಹೀಗಾಗಿ ನಾಯಕನ ಪಟ್ಟ ಡುಪ್ಲೆಸಿಸ್ ಪಾಲಾಗಲಿದೆ ಎನ್ನಲಾಗುತ್ತಿದೆ.

ಇನ್ನು ದಿನೇಶ್ ಕಾರ್ತಿಕ್ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಆರ್​ಸಿಬಿ ತಂಡದ ಮಾಜಿ ಆಟಗಾರನಾಗಿದ್ದ ಡಿಕೆ ಯನ್ನು ಈ ಬಾರಿ ಆರ್​ಸಿಬಿ ಮತ್ತೆ ಖರೀದಿಸಿದೆ. ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಕಾಣಿಸಿಕೊಳ್ಳಲಿರುವ ಕಾರ್ತಿಕ್ ಈ ಹಿಂದೆ ಐಪಿಎಲ್​ನಲ್ಲಿ ಕೆಕೆಆರ್​ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ ತಮಿಳುನಾಡು ತಂಡದ ನಾಯಕರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಭಾರತೀಯ ನಾಯಕನ ಆಯ್ಕೆಗೆ ಆರ್​ಸಿಬಿ ಮುಂದಾದರೆ ಅನುಭವಿ ಕ್ಯಾಪ್ಟನ್ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್​​ಗೆ ನಾಯಕನ ಪಟ್ಟ ಸಿಗಲಿದೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಹೆಸರು ಕೂಡ ಇದೆ. ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ಬಳಿಕ ಆರ್​ಸಿಬಿ ನಾಯಕರುಗಳ ಪಟ್ಟಿಯಲ್ಲಿ ಮ್ಯಾಕ್ಸ್​ವೆಲ್ ಹೆಸರು ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಈ ಬಾರಿ ಆರ್​ಸಿಬಿ ಮ್ಯಾಕ್ಸ್​ವೆಲ್ ಅವರನ್ನು ರಿಟೈನ್ ಮಾಡಿಕೊಳ್ಳುವ ಮೂಲಕ ನಾಯಕನಾಗಿ ಮಾಡಲಿದೆ ಎನ್ನಲಾಗಿತ್ತು. ಅತ್ತ ಬಿಗ್ ಬ್ಯಾಷ್​ ಲೀಗ್​ನಲ್ಲಿ ಮೆಲ್ಬೋರ್ನ್​ ಸ್ಟಾರ್ಸ್​ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಮ್ಯಾಕ್ಸ್​ವೆಲ್​​ ಪೈಪೋಟಿ ಎದುರಾಗಿದ್ದು ಮೆಗಾ ಹರಾಜಿನ ಬಳಿಕ ಎಂದರೆ ತಪ್ಪಾಗಲಾರದು. ಏಕೆಂದರೆ ತಂಡಕ್ಕೆ ಫಾಫ್ ಡುಪ್ಲೆಸಿಸ್ ಎಂಟ್ರಿಯೊಂದಿಗೆ ಆರ್​ಸಿಬಿ ನಾಯಕರುಗಳ ಪಟ್ಟಿಯಲ್ಲಿ ಫಾಫ್ ಅಥವಾ ಮ್ಯಾಕ್ಸಿ ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು. ಇದೇ ಕಾರಣದಿಂದ ಆರ್​ಸಿಬಿ ಮ್ಯಾನೇಜ್ಮೆಂಟ್​ ಕೂಡ ಎಚ್ಚರಿಕೆಯಿಂದ ಹೆಜ್ಜೆಯಿಡಲು ನಾಯಕನ ಆಯ್ಕೆಯನ್ನು ವಿಳಂಬ ಮಾಡಿದೆ.

ಇದಾಗ್ಯೂ ಇದೀಗ ಆರ್​ಸಿಬಿ ನಾಯಕನನ್ನು ಫೈನಲ್ ಮಾಡಿದ್ದು, ಫಾಫ್ ಡುಪ್ಲೆಸಿಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್​ವೆಲ್ ಅಥವಾ ವಿರಾಟ್ ಕೊಹ್ಲಿ…ಇವರಲ್ಲಿ ಯಾರು ನಾಯಕರಾಗಲಿದ್ದಾರೆ ಎಂಬುದೇ ಈಗ ಕುತೂಹಲ. ಅಂದಹಾಗೆ ಕೆಲ ಮೂಲಗಳ ಮಾಹಿತಿ ಪ್ರಕಾರ ಫಾಫ್ ಡುಪ್ಲೆಸಿಸ್​ಗೆ ನಾಯಕನ ಪಟ್ಟ ಸಿಗಲಿದೆಯಂತೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್​ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?