ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಎರಡನೇ ಆವೃತ್ತಿ ಮುಕ್ತಾಯಗೊಳ್ಳುತ್ತಿದ್ದು, ಇದರೊಂದಿಗೆ ವಿಶ್ವ ಕ್ರಿಕೆಟ್‌ಗೆ ಹೊಸ ಟೆಸ್ಟ್ ಚಾಂಪಿಯನ್ ದೊರೆಯಲಿದೆ. ಕಳೆದ ಆವೃತ್ತಿಯಲ್ಲಿ ಭಾರತ ಫೈನಲ್‌ನಲ್ಲಿ ಸೋತಿತ್ತು. ನ್ಯೂಜಿಲೆಂಡ್ ತಂಡವು ಭಾರತವನ್ನು ಸೋಲಿಸಿ ಮೊದಲ ಡಬ್ಲ್ಯುಟಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದೀಗ ಭಾರತ, ಆಸ್ಟ್ರೇಲಿಯಾ (India and Australia) ವಿರುದ್ಧ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡುತ್ತಿದೆ. ಲಂಡನ್‌ನ ಓವಲ್‌ನಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯುತ್ತಿದೆ. ವಾಸ್ತವವಾಗಿ ಮೊದಲ ಆವೃತ್ತಿಯ ಫೈನಲ್ ಪಂದ್ಯವೂ ಕೂಡ ಇದೇ ಇಂಗ್ಲೆಂಡ್‌ನಲ್ಲಿ ನಡೆದಿತ್ತು. ಇದೀಗ 2ನೇ ಫೈನಲ್ ಕೂಡ ಇಲ್ಲೇ ನಡೆಯುತ್ತಿದೆ. ಹಾಗಾದರೆ ಸತತ ಎರಡು ಫೈನಲ್ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ನಡೆಯುತ್ತಿರುವುದು ಏಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಕಳೆದ ಬಾರಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆದಿದ್ದು ಕೂಡ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದಿತ್ತು. ಮತ್ತು ಈ ಬಾರಿಯೂ ಡಬ್ಲ್ಯುಟಿಸಿಯ ಫೈನಲ್ ಪಂದ್ಯ ಕೂಡ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿದೆ.
WTC Final 2023: ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕೊಹ್ಲಿ ಬ್ಯಾಟ್ನಿಂದ ಸೃಷ್ಟಿಯಾಗುವ 5 ದಾಖಲೆಗಳಿವು
ಈಗ ಡಬ್ಲ್ಯುಟಿಸಿ ಫೈನಲ್ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಮಾತ್ರ ಏಕೆ ಆಡಲಾಗುತ್ತಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಕಾರಣವೂ ಇದ್ದು, WTC ಫೈನಲ್‌ನ ಮೊದಲ ಮೂರು ಆವೃತ್ತಿಗಳ ಫೈನಲ್‌ಗಳನ್ನು ಇಂಗ್ಲೆಂಡ್‌ನಲ್ಲಿ ಮಾತ್ರ ನಡೆಸಲು ಐಸಿಸಿ ನಿರ್ಧರಿಸಿರುವುದು ಇದಕ್ಕೆ ಒಂದು ಕಾರಣವಾಗಿದೆ. ಈ ಫೈನಲ್‌ಗಳಲ್ಲಿ ಒಂದನ್ನು 2021 ರಲ್ಲಿ ಆಡಲಾಗಿದೆ. ಈಗ ಇದು ಎರಡನೇ ಫೈನಲ್ ಪಂದ್ಯವಾಗಿದೆ. ಇದರ ನಂತರ 2025 ರಲ್ಲಿ ಡಬ್ಲ್ಯುಟಿಸಿಯ ಫೈನಲ್ ಪಂದ್ಯವನ್ನು ಕೂಡ ಇಂಗ್ಲೆಂಡ್‌ನಲ್ಲಿಯೇ ಆಡಲಾಗುತ್ತದೆ.
ಟೆಸ್ಟ್ ಆಡುವ ಪ್ರತಿಯೊಂದು ದೇಶದ ಜನರು ಇಲ್ಲಿ ವಾಸಿಸುತ್ತಿರುವುದು ಇಂಗ್ಲೆಂಡ್ ಅನ್ನು ಆಯ್ಕೆ ಮಾಡಲು ಇನ್ನೊಂದು ಕಾರಣ. ಇಂಗ್ಲೆಂಡ್ ಫೈನಲ್‌ನಲ್ಲಿ ಆಡಲಿ, ಆಡದಿರಲಿ ಅಥವಾ ಫೈನಲ್‌ನಲ್ಲಿ ಯಾವ ದೇಶ ಆಡಿದರೂ ಅದರ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಾರೆ. ಮತ್ತೊಂದೆಡೆ, ಫೈನಲ್ ಪಂದ್ಯವನ್ನು ಬೇರೆ ದೇಶದಲ್ಲಿ ಆಡಿದರೆ, ಇತರ ದೇಶಗಳ ಕ್ರೀಡಾಂಗಣಗಳಿಗೆ ಕಡಿಮೆ ಪ್ರೇಕ್ಷಕರು ಬರುವ ಸಾಧ್ಯತೆಯಿದೆ. ಇದರಿಂದ ಐಸಿಸಿ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ. ಹೀಗಾಗಿ ಐಸಿಸಿ ಈ ತೀರ್ಮಾನ ತೆಗೆದುಕೊಂಡಿದೆ.
ಟೆಸ್ಟ್ ಕ್ರಿಕೆಟ್ ಅನ್ನು ಇಂಗ್ಲೆಂಡ್ ಜನರು ತುಂಬಾ ಪ್ರೀತಿಸುತ್ತಾರೆ. ಯಾವುದೇ ತಂಡ ಇಂಗ್ಲೆಂಡ್ ಮೈದಾನದಲ್ಲಿ ಆಡಿದರೂ, ಆ ಪಂದ್ಯವನ್ನು ವೀಕ್ಷಿಸಲು ಜನರು ಮೈದಾನಕ್ಕೆ ಬರುತ್ತಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಆಡುತ್ತದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಇಂಗ್ಲೆಂಡಿನ ಕ್ರಿಕೆಟ್ ಪ್ರೇಮಿಗಳು ಟೆಸ್ಟ್ ಕ್ರಿಕೆಟ್ ಅನ್ನು ಬಹಳ ಆನಂದಿಸುತ್ತಾರೆ. ಟೆಸ್ಟ್ ಕ್ರಿಕೆಟ್ ಅನ್ನು ಇಂಗ್ಲೆಂಡ್ ಜನರು ಹೆಚ್ಚು ಗೌರವಿಸುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ಇಂಗ್ಲೆಂಡ್ WTC ಫೈನಲ್ ಅನ್ನು ಆಯೋಜಿಸಲು ಇಂಗ್ಲೆಂಡ್ ಅನ್ನು ಸೂಕ್ತ ಸ್ಥಳವನ್ನಾಗಿ ಆಯ್ಕೆ ಮಾಡಿಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Wed, 7 June 23